spot_img
spot_img

ಪರಿಸರಕ್ಕೆ ನಾವು ಹೊಂದಾಣಿಕೆಯಾಗಬೇಕು – ಚಂದ್ರಶೇಖರ ನಾಗರಬೆಟ್ಟ

Must Read

- Advertisement -

ಸಿಂದಗಿ: “ಹಸಿರು ಅದುವೆ ನಮ್ಮ ಉಸಿರು” ಮಾನವ ಸಂಕುಲವನ್ನು ಪೆಡಂಭೂತವಾಗಿ ಕಾಡುತ್ತಿರುವ ಸಾಂಕ್ರಾಮಿಕ ರೋಗ ಕೊರೋನಾ ಜನಜೀವನವನ್ನು ನರಕಮಯವಾಗಿಸಿ ಬಿಟ್ಟಿದೆ . ಇದರಿಂದ ಮನುಷ್ಯರು ಕೆಲವೊಂದು ಜೀವನಶೈಲಿಯನ್ನು ಬದಲಾಯಿಸುವುದು ಅನಿವಾರ್ಯವಾಗಿದೆ ಎಂದು ಸೆಲ್ಯೂಟ್ ತಿರಂಗ ರಾಷ್ಟ್ರವಾದಿ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ಮ. ನಾಗರಬೆಟ್ಟ ಹೇಳಿದರು.

ಪಟ್ಟಣದ ಕರ್ನಾಟಕ ರಾಜ್ಯ ಸೆಲುಟ್ ತಿರಂಗ ಹಾಗೂ ಕಾವ್ಯ ವಿದ್ಯಾಮಂದಿರ ಸಹಯೋಗದಲ್ಲಿ ಡಿ ಫಾರ್ಮಸಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಕಾಲೇಜು ಆವರಣದಲ್ಲಿ ವಿವಿಧ ತಳಿಯ ಸುಮಾರು 65 ಗಿಡಗಳನ್ನು ನೆಡುವ ಮೂಲಕ ಮಾತನಾಡಿ, ಪರಿಸರಕ್ಕೆ ನಾವು ಹೊಂದಾಣಿಕೆ ಆಗಬೇಕು ವಿನ: ಅದು ನಮ್ಮೊಡನೆ ಹೊಂದಾಣಿಕೆಯಾಗದು ಪ್ರಕೃತಿ ಪ್ರತಿಯೊಂದರ ಬೆಲೆಯನ್ನು ತಿಳಿಸುತ್ತಿದೆ.

ಅದರಲ್ಲೂ ಪ್ರಾಣವಾಯುವಿನ ಬೆಲೆ ಹೇಳತೀರದು ಪ್ರಾಣವಾಯುವಿನ ಕೊರತೆಯಿಂದ ಅದೆಷ್ಟು ಜೀವಗಳು ನರಳಿ ಜೀವ ಕಳೆದುಕೊಂಡಿವೆ ಪ್ರಾಣವಾಯುವಿನ ಕೊರತೆಗೆ ನಾವೇ ಕಾರಣೀಭೂತರು ಯಾಕೆಂದರೆ ಜನಸಂಖ್ಯೆ ಹೆಚ್ಚುತ್ತಿದೆ ಆದರೆ ಗಿಡಮರಗಳು ಕ್ಷೀಣಿಸುತ್ತಿವೆ.

- Advertisement -

ಇದರಿಂದ ವಾತಾವರಣದಲ್ಲಿ ಅಸಮತೋಲನ ಆಗುತ್ತಿದೆ ಅದನ್ನು ಸರಿಪಡಿಸಬೇಕಾದರೆ ಪ್ರಕೃತಿಯನ್ನು ಸಮತೋಲನ ಮಾಡಬೇಕಾಗುವುದು ಅನಿವಾರ್ಯವಾಗಿದೆ ಅದಕ್ಕಾಗಿ ನಾವು ಪ್ರತಿಯೊಬ್ಬರು ಗಿಡಮರಗಳನ್ನು ನೆಡಬೇಕು ಅವುಗಳಿಂದಲೇ ಪ್ರಾಣವಾಯುವಿನ ಸಮತೋಲನ ಮಾಡಬಹುದು ಎಂದರು.

ನಿವೃತ್ತ ಎ.ಎಸ್. ಐ  ಎಂ.ಎಂ. ಹಂಗರಗಿ ಮಾತನಾಡಿ, ಇಂದು ನಮ್ಮೆಲ್ಲರನ್ನು ಕಾಡುತ್ತಿರುವ ಕರೋನಾ ಸೊಂಕು ನಿವಾರಣೆಗೆ ಆಮ್ಲಜನಕದ ಅವಶ್ಯಕತೆಯಿದೆ ಪ್ರತಿಯೊಬ್ಬರು ಮನೆ-ಊರುಗಳೆನ್ನದೇ ಒಂದು ಮರ ಬೆಳೆಸಿದರೆ ಅದು ಇರುವವರೆಗೂ ಪ್ರಕೃತಿಯಲ್ಲಿನ ಎಲ್ಲಾ ಜೀವಿಗಳಿಗೂ ಪ್ರಾಣವಾಯು ಒದಗಿಸುತ್ತದೆ.

ಆದ್ದರಿಂದ ಎಲ್ಲಾ ನಾಗರಿಕರಲ್ಲಿ ನನ್ನದೊಂದು ಮನವಿ ಏನೆಂದರೆ “ಗಿಡಮರಗಳನ್ನು ಬೆಳೆಸಿ ಪ್ರಕೃತಿಯನ್ನು ಉಳಿಸಿ” “ಗಿಡಮರಗಳನ್ನು ಪ್ರೀತಿಸಿ ತಮ್ಮ ಜೀವವನ್ನು ರಕ್ಷಿಸಿ” ಎಂದು ಹೇಳುತ್ತಾ ತಾವೆಲ್ಲರೂ ಕೊರೋನ ಭೀತಿಯಿಂದ ಧೈರ್ಯವಾಗಿರಿ ಹಾಗೂ ಸರಕಾರದ ಎಲ್ಲ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ಎಂದು ಮನವಿ ಮಾಡಿಕೊಂಡರು.

- Advertisement -

ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಎಂ.ಬಿ.ಯಡ್ರಾಮಿ ಮಾತನಾಡಿ, ಇಡೀ ಜಗತ್ತಿನಲ್ಲಿ ಓಜೋನ್ ಪರದೆ ಕಡಿಮೆಯಾಗಿ ಪ್ರಕೃತಿ ವಿಕೋಪಕ್ಕೆ ಸಿಲುಕಿದೆ ಎಂದು 1974 ಜೂನ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಣೆಗೆ ಚಾಲನೆ ನೀಡಿತ್ತು ಅಂದಿನಿಂದ ಇಂದಿನ ವರೆಗೂ ಬರೀ ವರ್ಷಕ್ಕೊಮ್ಮೆ ಪರಿಸರ ದಿನಾಚರಣೆ ಅಚರಿಸುತ್ತ ಅದನ್ನು ಆಚರಣೆಗೆ ತರದ ಕಾರಣ ಇಂದು ಪರಿಸರ ಕೊರತೆಯಿಂದ ಆಕ್ಸಿಜನ್ ಕಡಿಮೆಯಾಗಿ ಅದಕ್ಕಾಗಿ ಹಪಹಪಿಸುವ ಸಂದರ್ಭದಲ್ಲಿ ಪರಿಸರಕ್ಕೆ ಹೆಚ್ಚು ಮಹತ್ವವಿದೆ ಎನ್ನುವುದನ್ನು ಮನವರಿಕೆ ಕಂಡಿದ್ದೇವೆ ಕಾರಣ ಪ್ರತಿಯೊಬ್ಬರು ಪರಿಸರ ರಕ್ಷಣೆಯಲ್ಲಿ ಮಹತ್ವ ಪಾತ್ರ ವಹಿಸುವುದು ಮುಖ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾತಲಗಾಂವ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶಂಕರ ತಳ್ಳೊಳ್ಳಿ, ಸಂಗನಗೌಡ ಪಾಟೀಲ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್ ಶಾಬಾದಿ, ಪತ್ರಕರ್ತ ಪಂಡಿತ್ ಯಂಪೂರೆ, ಅಶೋಕ ಕುಂಬಾರ್, ಮುತ್ತು ಪಾಟೀಲ ಹಾಗೂ ಕಾಲೇಜಿನ ಅಧ್ಯಾಪಕರು ಹಾಜರಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group