spot_img
spot_img

ಕಾರ್ಮಿಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಬೇಕಾಗಿದೆ

Must Read

- Advertisement -

ಸಿಂದಗಿ: ಕಟ್ಟಡ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ನಿಮಗೆ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊ ಳ್ಳಲಾಗಿದೆ ತಾವುಗಳು ಮುಕ್ತವಾಗಿ ಯಾವುದೇ ಭಯವಿಲ್ಲದೆ ಈ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ವಿಜಯಪೂರ ಆರ್.ಕೆ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ|| ಪ್ರತಿಭಾ ಬಿರಾದಾರ ಕರೆ ನೀಡಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.

ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಮಾತನಾಡಿ, ಕಾರ್ಮಿಕರ ದಿನಾಚರಣೆಯನ್ನು ಕಾರ್ಮಿಕ ಸಾಧನೆಗಳನ್ನು ಆಚರಿಸಲು ಪ್ರತಿ ವರ್ಷ ಮೇ ಒಂದರಂದು ಆಚರಿಸಲಾಗುತ್ತದೆ. ಭಾರತದಲ್ಲಿ 1923 ರಲ್ಲಿ ಇದನ್ನು ಮೊದಲು ಬಾರಿಗೆ ಆಚರಿಸಲಾಯಿತು. ಅಮೇರಿಕಾದಲ್ಲಿ ಕೈಗಾರಿಕಾ ಕ್ರಾಂತಿಯಾ ನಂತರ ಕಾರ್ಮಿಕರನ್ನು ವಿಪರೀತ ದುಡಿಸಿಕೊಳುತಿದ್ದನ್ನು ವಿರೋಧಿಸಲು 1886 ರಲ್ಲಿ ಕಾರ್ಮಿಕರ ಒಕ್ಕೂಟವು ಮುಷ್ಕರ ಹಮ್ಮಿಕೊಂಡಿದ್ದ ಕಾರಣ ಒಂದು ದಿನಕ್ಕೆ 16 ಘಂಟೆಗಳ ಕೆಲಸದ ಬದಲಿಗೆ 8 ಘಂಟೆ ಮಾಡಬೇಕೆಂದು ಎಲ್ಲ ಕಾರ್ಮಿಕರು ಒಗ್ಗಟ್ಟಾಗಿ ಮುಷ್ಕರ ಹೂಡಿ ಸರಕಾರದ ವಿರುದ್ಧ ಘೋಷಣೆ ಕೂಗಿದರು ಇದನ್ನು ತಡೆಯಲು ಪೋಲಿಸರು ಶೆಲ್ ದಾಳಿ ಮಾಡಿದರು ಇದರ ಪ್ರಯುಕ್ತ ಅನೇಕ ಜನರು ತಮ್ಮ ಜೀವವನ್ನು ತೆತ್ತರು ಹಾಗೂ ಹಲವಾರು ಮಂದಿ ವಿಪರೀತವಾಗಿ ಗಾಯಗೊಂಡರು. ಇದನ್ನು ವಿಶ್ವದೆಲ್ಲೆಡೆ ಕಾರ್ಮಿಕರ ಹಕ್ಕುಗಳಿಗಾಗಿ ಚಳವಳಿ ಪ್ರಾರಂಭವಾಗಿ ಕೊನೆಗೆ 1916 ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು 8 ಗಂಟೆಗಳ ಕೆಲಸದ ಅವಧಿಯನ್ನು ಘೋಷಿಸಿತು. ಕಾರ್ಮಿಕರ ಕೊಡುಗೆ ಮತ್ತು ತ್ಯಾಗವನ್ನು ತಿಳಿಸಿಕೊಡುವ ಹಾಗೂ ಅರಿವು ಮೂಡಿಸುವ ದಿನವಾಗಿದೆ ಹಾಗೆಯೇ ಕಾರ್ಮಿಕರ ಕಾನೂನುಗಳು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

- Advertisement -

ರಾಜು ದಂಡಾವತಿ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಕಟ್ಟಡ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಕಾರ್ಡ ವಿತರಿಸಿದರು.

ಅದೇ ರೀತಿ ಈ ಕಾರ್ಯಕ್ರಮದಲ್ಲಿ ಆಲಮೇಲ ಕಟ್ಟಡ ಕಾರ್ಮಿಕರ ಕಛೇರಿಯ ಡಿ.ಓ ಶ್ರೀಶೈಲ ಬಿಸಿರೊಟ್ಟಿ, ಸುನಿಲ ರಾಠೋಡ್, ಆರ್.ಕೆ ಆಸ್ಪತ್ರೆಯ ಮುಖ್ಯಸ್ಥ ಸಂಜೀವ್ ಕುಮಾರ ವೇದಿಕೆ ಮೇಲಿದ್ದರು.

ಶ್ರೀಧರ ಕಡಕೊಳ, ನಿರೂಪಿಸಿದರು. ವಿಜಯ ವಿ ಬಂಟನೂರ್ ಸ್ವಾಗತಿಸಿದರು. ತೇಜಸ್ವಿನಿ ರಮೇಶ ಹಳ್ಳದಕೇರಿ ಸಂವಿಧಾನ ಪ್ರಸ್ತಾವನೆ ಮಾಡಿದರು. ಮಲಕಪ್ಪ ಹಲಗಿ ವಂದಿಸಿದರು.

- Advertisement -
- Advertisement -

Latest News

ಕಾರ್ಯಕರ್ತರೇ, ನಾಯಕರ ದಾಳಗಳಾಗದೆ ಜಾಗೃತರಾಗಿರಿ.

ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಎಚ್ಚರಿಕೆ.ಕಾರ್ಯಕರ್ತರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಸಲಹೆ. ನಿಮ್ಮನ್ನ ರಾಜ್ಯ ಸರ್ಕಾರ ತಮ್ಮದಿದೆ ಆದ್ದರಿಂದ ನಿಮಗೆ ರಕ್ಷಣೆ ನೀಡುತ್ತದೆ ಏನೂ...
- Advertisement -

More Articles Like This

- Advertisement -
close
error: Content is protected !!
Join WhatsApp Group