spot_img
spot_img

ಸಮಾಜಕ್ಕೆ ನಾವು ನೀವು ಒಳಿತನ್ನು ಮಾಡಬೇಕು – ಮಲ್ಲಪ್ಪ ಸಾಗರ

Must Read

spot_img

ಸಿಂದಗಿ: ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಈ ದೇಶದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಇರುವ ಹಕ್ಕಿದೆ ಈ ದೇಶದಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಕ್ಕಿದೆ ಎಂದು ಜಾಗೃತಿಯನ್ನು ಮೂಡಿಸುತ್ತಿರುವ ಸಂಘ ಸಂಸ್ಥೆಗಳಲ್ಲಿ ಸಂಗಮ ಸಂಸ್ಥೆ ಒಂದು ಎಂದು ಸರಕಾರಿ ತಾಲೂಕ ಆಸ್ಪತ್ರೆ ಆಪ್ತ ಸಮಾಲೋಚಕ ಮಲ್ಲಪ್ಪ ಸಾಗರ  ಹೇಳಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಸಂಗಮ ಸಂಸ್ಥೆಯಲ್ಲಿ ಅಪಾಯದ ಅಂಚಿನಲ್ಲಿರುವ ಮಕ್ಕಳಿಂದ ರಸಮಂಜರಿ  ಕಾರ್ಯಕ್ರಮದಲ್ಲಿ ಮಾತನಾಡಿ, ಉಳ್ಳವರಿಗೆ ಅನ್ನವನ್ನು ಕೊಡುವಂತಹ ಹಾಗೂ ವೇಷಭೂಷಣ ಕ್ಕೆ ಮರುಳಾಗಿ ಅವರ ಹಿಂದೆ ಹೋಗುವಂತಹ ಒಂದು ಯುಗದಲ್ಲಿ ಹಸಿದವರಿಗೆ ಅನ್ನವನ್ನು ಕೊಡುವಂತಹ ಕೆಲಸವನ್ನು ಮಾಡುತ್ತಿರುವುದು ಸಂಗಮ ಸಂಸ್ಥೆ. ಸಮಾಜಕ್ಕೆ ನಾವು ನೀವು   ಒಳಿತನ್ನು ಮಾಡಬೇಕು ಯಾವಾಗಲು ನಾವು ಸಕಾರಾತ್ಮಕವಾಗಿ ಇರಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಸಾಪ ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿ, ಯಾರೋ ಮಾಡಿದ ತಪ್ಪಿಗೆ ಕೆಲವೊಮ್ಮೆ ನಾವು ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ ಅದೇ ರೀತಿ ಕೆಲಮೊಮ್ಮೆ ಅನಿವಾರ್ಯತೆಗಾಗಿ ಜೀವನವನ್ನು ತ್ಯಜಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಜೊತೆ ನಾವು ಇದ್ದೇವೆ ಎಂಬ ಆತ್ಮಸ್ಥೈರ್ಯವನ್ನು ತುಂಬುತ್ತಿರುವುದು ಈ ಸಂಗಮ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದ ಅವರು, ಸ್ವಾತ್ರಂತ್ರ್ಯ ದೊರೆತು 75 ವರ್ಷ ಪೂರೈಸಿದರೂ ನಮ್ಮ ದೇಶದಲ್ಲಿ ಶ್ರೀಮಂತರ ಮಕ್ಕಳು ಇನ್ನೂ ಶ್ರೀಮಂತರಾಗುತ್ತಿದ್ದಾರೆ, ಬಡವರ ಮಕ್ಕಳು ಬಡವರಾಗಿ ಉಳಿದಿದ್ದಾರೆ, ಯಾರಿಗೆ ಬಂತು ಎಲ್ಲಿಗೆ ಬಂದು 47 ರ ಸ್ವಾತಂತ್ರ್ಯ.  ಈ ಮಕ್ಕಳು ಸರಕಾರದ ಕಣ್ಣಿಗೆ ಕಾಣುತ್ತಾ ಇಲ್ವಾ ಇವರ ಆಸರೆಗೆ ಹಾಗೂ ನೊಂದವರ ಧ್ವನಿಯಾಗಿ ಸಂಗಮ ಸಂಸ್ಥೆ ನಿಂತಿದೆ. ಜನೋಪಕಾರಿ ಕಲ್ಯಾಣ ಕಾರ್ಯ ಮಾಡುತ್ತ ಬಂದಿರುವ ಏಕೈಕ ಸಂಸ್ಥೆ ಸಂಗಮ ಸಂಸ್ಥೆಯಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಸಂಗಮ ಸಂಸ್ಥೆ ನಿರ್ದೇಶಕ ಫಾದರ್ ಆಲ್ವಿನ್ ಡಿ,ಸೋಜ, ಇಂಡಿ ಸರಕಾರಿ ತಾಲೂಕ ಆಸ್ಪತ್ರೆ ಆಪ್ತ ಸಮಾಲೋಚಕ ಹರಳಯ್ಯ ಮಾತನಾಡಿದರು.

ಈ ರಸ ಮಂಜರಿ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್ವಿನಿ ಹಳ್ಳದಕೇರಿ ನಿರೂಪಿಸಿದರು. ರಾಜೀವ ಕುರಿಮನಿ ಸ್ವಾಗತಿಸಿದರು. ಶ್ರೀಧರ್ ಕಡಕೋಳ ಭಾರತದ ಪ್ರಸ್ಥಾವನೆಯನ್ನು ವಾಚಿಸಿದವರು. ವಿಜಯ ಬಂಟನೂರ ವಂದಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!