spot_img
spot_img

ಸರ್ವ ಧರ್ಮ ಭಾವೈಕ್ಯತೆಯನ್ನು ನಾವು ಅಳವಡಿಸಿಕೊಳ್ಳಬೇಕು

Must Read

ಸಿಂದಗಿ: ಭಾರತದೇಶ 75 ವರ್ಷದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಜಾತಿ ವಿಷಬೀಜ ಬಿತ್ತಿ ನಮ್ಮನ್ನು ಅಳುವ ಸರಕಾರಗಳು ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿವೆ ಆದರೆ ಸರ್ವಧರ್ಮದ ಭಾವೈಕ್ಯತೆಯ ಮೂಲಕ ಧರ್ಮವನ್ನು ನಮ್ಮ ಶರೀರದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದು ನಮ್ಮನ್ನು ಕಾಪಾಡುತ್ತದೆ ಎಂದು ಕೆಪಿಸಿಸಿ ವಕ್ತಾರ ಎಸ್‍ಎಂ.ಪಾಟೀಲ ಗಣಿಹಾರ ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ಸರ್ವಧರ್ಮ ಪ್ರತಿಷ್ಠಾನವತಿಯಿಂದ ಹಮ್ಮಿಕೊಂಡ ಭಾವೈಕ್ಯ ಸಿರಿ ವಿದ್ಯಾಭೂಷಣ, ಮತ್ತು ಸಂಜೀವಿನಿ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪುಸ್ತಕ ಬಿಡುಗಡೆಗೊಳಿಸಿದ ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ  ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಈ ಭಾಗದಲ್ಲಿ ಪ್ರತಿಭೆಗಳು ಸಾಕಷ್ಟಿವೆ ಅವುಗಳ ಅನಾವರಣಕ್ಕೆ ವೇದಿಕೆಗಳು ಸಿಕ್ಕಿಲ್ಲ ಇಂತಹ ಸ್ಥಿತಿಗತಿಯಲ್ಲಿ ಸರ್ವಧರ್ಮ ಪ್ರತಿಷ್ಠಾನದ ಮೂಲಕ ಸಾಧಕರಿಗೆ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

 

ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ (ಸೋಮಜ್ಯಾಳ) ಮಾತನಾಡಿ, ನಮ್ಮ ದೇಶದ ಗಡಿಯಲ್ಲಿರುವ ಯೋಧರಲ್ಲಿ ಯಾವುದೇ ಜಾತಿ-ಧರ್ಮದ ಲೇಪನವಿಲ್ಲ ಆದರೆ ಇಂದಿನ ವಾತಾವರಣದಲ್ಲಿ ಜಾತಿ ಜಾತಿಗಳಲ್ಲಿ ಕಿಡಿ ಹಚ್ಚಿ ಮೋಜು ಮಸ್ತಿ ನಡೆಯುತ್ತಿವೆ ಕಾರಣ ಎಲ್ಲೆಡೆ ಇಂತಹ ಸರ್ವಧರ್ಮದ ಸಮಾವೇಶಗಳು ನಡೆದರೆ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿದ ಬೋರಗಿ-ಮರದಾಳ ವಿಶ್ವಾರಾಧ್ಯ ಮಠದ ಶ್ರೀ ತಪೋರತ್ನ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.

ಎಚ್.ಜಿ.ಕಾಲೇಜಿನ ಪ್ರಾಧ್ಯಾಪಕ ಸಿದ್ದಲಿಂಗ ಕಿಣಗಿ ಅವರು ಅಶೋಕ ಬಿರಾದಾರ ಸಂಪಾದಿತ “ಸದ್ಗುರು ಹೇಳಿದ ಕಥೆಗಳು” ಕೃತಿಯನ್ನು ಪರಿಚಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ ಕೊಳ್ಳೂರ, ಎ.ಆಯ್.ಸಿ.ಸಿ ಸದಸ್ಯೆ ಶ್ರೀಮತಿ ಶ್ರೀದೇವಿ ಉತ್ಸಾಸ್ಕರ, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ, ಸಾಮಾಜಿಕ ಹೋರಾಟಗಾರ ಶಿವಾಜಿ ಮೆಟಗಾರ ಮಾತನಾಡಿದರು.

ಸಾಮಾಜಿಕ ಸೇವೆ ಸಲ್ಲಿಸಿದ  ದೇವರಹಿಪ್ಪರಗಿಯ ಶಿವಾಜಿ ಮೆಟಗಾರ, ಮುದ್ದೇಬಿಹಾಳ-ರಂಗಭೂಮಿ ವಿರೂಪಾಕ್ಷ ಮಲ್ಲಪ್ಪ ಕಡಲ್-ಗಂಗೂರ, ಮುತ್ತಪ್ಪ ರೇ ತೋಟದ- ಬಬಲೇಶ್ವರ ಗ್ರಾಮದ  ಸಾಮಾಜಿಕ ಸೇವೆಗೈದ ಹುಸೇನ್ ಅಪರಾಜರ್-ಬಬಲೇಶ್ವರ,  ಮುತ್ತು ಮನಹಳ್ಳಿ, -ಬಿಬಿ ಇಂಗಳಗಿ ಶಿಕ್ಷಣ ಕ್ಷೇತ್ರದ ಸಿದ್ದಣ್ಣ ಸಿ, ಕುಂಬಾರ, ಸಾಲೊಡಗಿಯ ರಮೀಜಾ ನದಾಫ-ಕುದರಿ  ಭಾರತಿ ಶಿವು ಹೊಸಮನಿ ಬಳಗಾನೂರ, ಸಿದ್ದನಗೌಡ ಕಾಸಿನಗುಂಟಿ, ಬಿಇಓ ಹಣಮಂತ್ರಾಯ ಹರನಾಳ ಶಿಕ್ಷಣ ಕ್ಷೇತ್ರ ಹಾಜಿ ಎ ಅಬ್ದುಲ್ ನಬಿ ಚಿಸ್ತಿ ನಿಜಾಮಿ, ಪ್ರಕಾಶ ತೋಳಿನ-ಹಿರೇಮಸಳಿ  ಅಮೀರ್ ಎಂ ಆಲಮೇಲ, ಡಾ. ಪ್ರಕಾಶ ಮೂಡಲಗಿ. ಯಶ್ವಂತ ಮ್ಯಾಗಡಿ,  ಮುದ್ದುರಾಜ ಅಲ್ಲಿ ಸಂಗೀತ ಕ್ಷೇತ್ರ, “ಭಾವೈಕ್ಯ ಸಿರಿ” ಪ್ರಶಸ್ತಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈದ ಎಸ್ ಕೆ ಕೋಲಾರ್, ಅಶೋಕ ಬಿರಾದಾರ,  ಮಹಿಬೂಬ ಎಂ ಅಸಂತಾಪೂರ, ಹಮೀದ ಅವಟಿ, ಬಸವರಾಜ ಆರ್ ಕರಜಗಿ- ನಿವರಗಿಣ, ಸಂಜೀವಕುಮಾರ್ ಆರ್-ಬಬಲೇಶ್ವರ,  ಮಹಾಬುಬ್ಬಿ ಸಿಂದಗಿ, ಪುಷ್ಪಾವತಿ ರೂಗಿ-ದೇ, ಹಿಪ್ಪರಗಿ, “ವಿದ್ಯಾಭೂಷಣ” ಪ್ರಶಸ್ತಿ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ, ಸುನಿತಾ ವಿ ಸಾಲೀಮಠ-ಸಿಂದಗಿ, ಡಾ|| ದತ್ತಾತ್ರಯ ಕುಲಕರ್ಣಿ-ಗುಬ್ಬೇವಾಡ, ಡಾ. ರಾಹುಲ್ ಪಂಡೀತ್ ಯಂಪೂರೆ, ಡಾ. ಮೋದಿನ್ ಸಾಬ್-ಮಳ್ಳಿ, ಡಾ, ಹಬೀಬ್ ಬಿ ನಾಗರಳ್ಳಿ “ಸಂಜೀವಿನಿ”ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮಹಿಬೂಬ ಆರ್. ತಾಂಬೋಳಿ, ಬಿ.ಜೆ.ಪಿ ಮುಖಂಡ ಡಾ|| ಅನೀಲ ನಾಯಕ, ಚಿಕ್ಕಸಿಂದಗಿ ನಿಂಬೆ ಬೆಳೆಗಾರ ವಿಶ್ವನಾಥ ಹುಣಸಗಿ, ಬಿಇಓ ಎಚ್.ಎಂ.ಹರನಾಳ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಸರ್ವಧರ್ಮ ಪ್ರತಿಷ್ಠಾನದ ಅಧ್ಯಕ್ಷ ಜಿಲಾನಿ ಮುಲ್ಲಾ ಸ್ವಾಗತಿಸಿದರು. ಕ.ಸಾ.ಪ ಮಾಜಿ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಆಶಯ ನುಡಿ ಹೇಳಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷ ಅಶೋಕ ಸಾ. ಬಿರಾದಾರ ನಿರೂಪಿಸಿ, ವಂದಿಸಿದರು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!