spot_img
spot_img

ಮನೆಗೊಂದು ಮರ ಎಂಬ ಧ್ಯೇಯ ವಾಕ್ಯ ಪಾಲಿಸಬೇಕು – ಪ್ರಭು ಸಾರಂಗ ಶ್ರೀಗಳು

Must Read

- Advertisement -

ಸಿಂದಗಿ: “ಹಸಿರೇ ಉಸಿರು ” ಎಂಬಂತೆ ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ ಪರಿಸರ ರಕ್ಷಣೆ ನಮ್ಮಲ್ಲರ ಹೊಣೆಯಾಗಬೇಕು.

ಊರಿಗೊಂದು ವನ, ಮನೆಗೊಂದು ಮರ ಎನ್ನುವ ಧ್ಯೇಯವಾಕ್ಯವನ್ನು ಪಾಲಿಸಿದರೆ ಮಾತ್ರ ಮುಂಬರುವ ದಿನಗಳಲ್ಲಿ ಭೂಮಿ ಮೇಲೆ ಜೀವರಾಶಿಗಳು ಬದುಕಲು ಸಾಧ್ಯ ಎಂದು ಪೂಜ್ಯ ಶ್ರೀ ಡಾ || ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಶ್ರೀ ಎಮ್ ಸಿ ಮನಗೂಳಿ ಪ್ರತಿಷ್ಠಾನ ಸಿಂದಗಿ ಹಾಗೂ ಪುರಸಭೆ ಕಾರ್ಯಾಲಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಇವರ ಸಹಯೋಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್  ಮನಗೂಳಿ ಯವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದ ವೃತ್ತ ದಿಂದ ಬಸವೇಶ್ವರ ವೃತ್ತದ ವರೆಗೆ ಸಸಿ ನೆಡುವ ಮೂಲಕ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಸಮತೋಲನ ಕಾಪಾಡದಿದ್ದರೆ ಆಮ್ಲಜನಕದ ಕೊರತೆ ಕಾಡುತ್ತದೆ ಇಂತಹ ಸಂದರ್ಭ ನಾವು ಮಾಹಾಮಾರಿ ಕರೋನಾ ಸೋಂಕಿನಿಂದ ಪಾರಾಗಬೇಕಾದರೆ ಆಕ್ಸಿಜನ್ ಕೊರತೆಯನ್ನು ನೋಡಿದ್ದೇವೆ ಅದಕ್ಕೆ ನೈಸರ್ಗಿಕವಾಗಿ ಆಕ್ಸಿಜನ್ ನೀಡುವ ಗಿಡ-ಮರಗಳನ್ನು ಬೆಳೆಸುವ ಕಾರ್ಯ ತೊಡಗಬೇಕಾಗಿರುವುದು ಅನಿವಾರ್ಯiವಾಗಿದೆ ಕಾರಣ ಎಲ್ಲರು ಮನೆಗೊಂದು ಮರ ಬೆಳೆಸಿ ಪರಿಸರವನ್ನು ಬೆಳೆಸೋಣ ಎಂದರು.

- Advertisement -

ಕಾಂಗ್ರೆಸ್ ಅಭ್ಯರ್ಥಿ ಅಶೋಕ್  ಮನಗೂಳಿ ಮಾತನಾಡಿ, ನಗರಗಳಲ್ಲಿ ಎಲ್ಲಿ ನೋಡಿದರು ಕಾಂಕ್ರೀಟ್ ರಸ್ತೆಗಳ ನಿರ್ಮಾಣದಿಂದಾಗಿ ಪರಿಸರ ನಾವೇ ನಾಶ ಪಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಅದಕ್ಕೆ ಪ್ರತಿಯೊಂದು ಮನೆಯ ಮುಂದೆ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಮಾಡಬೇಕಾದರೆ ಕಡ್ಡಾಯವಾಗಿ ಮರ ಬೆಳೆಸಲು ಸ್ಥಳ ನಿಗದಿ ಪಡಿಸಬೇಕು ಅಂದಾಗ ಪರಿಸರ ಉಳಿಸಲು ಸಾಧ್ಯ.

ಕಾರಣ ಮನೆ ಕಟ್ಟಲು ಪರವಾನಿಗೆ  ಕೊಡುವ   ಸಂದರ್ಭದಲ್ಲಿ  ಪಂಚಾಯ್ತಿ ಮತ್ತು ನಗರ ಸಭೆಗಳು  ಕಡ್ಡಾಯವಾಗಿ ಮರ ಬೆಳೆಸಬೇಕೆನ್ನುವ ಕಾನೂನು ಜಾರಿ ಮಾಡಬೇಕು ಅಲ್ಲದೆ ಸಿ ಸಿ ರಸ್ತೆಗಳ ಪಕ್ಕದಲ್ಲಿ ಗಿಡ ಮರ ಬೆಳೆಸಲು  ಸ್ಥಳ  ಬಿಡಬೇಕು ಹಸಿರು ಸಿರಿ ಬೆಳೆಯಲು ಸಾಧ್ಯ. ವರ್ಷಕ್ಕೊಮ್ಮೆ ಮಾತ್ರ ಪರಿಸರ ದಿನಾಚರಣೆ ಮಾಡದೆ ದಿನವೂ ಪರಿಸರದ ಕಾಳಜಿ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರ ಸಾಮಾಜಿಕ ವಲಯ ಇರ್ಷಾದ್ ನೆವಾರ್, ಅರಣ್ಯ ಸಿಬ್ಬಂದಿ ಸೋಮಣ್ಣ ಪೂಜಾರಿ, ಪುರಸಭೆ ಅಧ್ಯಕ್ಷ ಡಾ|| ಶಾಂತವೀರ ಮನಗೂಳಿ, ಉಪಾಧ್ಯಕ್ಷ ಹಸೀಮ ಆಳಂದ, ಮುಖ್ಯಾಧಿಕಾರಿ ಸುರೇಶ ನಾಯಕ,  ಪುರಸಭೆ ಸದಸ್ಯರಾದ ಬಸವರಾಜ ಯರನಾಳ, ರಾಜಣ್ಣಿ ನಾರಾಯಣಕರ, ಶರಣಗೌಡ ಪಾಟೀಲ, ಶರಣಪ್ಪ ಸುಲ್ಪಿ, ಬಸವರಾಜ್ ಸಜ್ಜನ್, ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರಾದ ಶಿವಪ್ಪಗೌಡ ಬಿರಾದಾರ, ಶಿರುಗೌಡ ದೇವರಮನಿ, ಹಾಗೂ ಕಾಂಗ್ರೆಸ್ ಯುತ ಅಧ್ಯಕ್ಷ ಇರ್ಫಾನ್ ಆಳಂದ,  ಮುಖಂಡರಾದ ಗೊಲ್ಲಾಳಪ್ಪಗೌಡ ಪಾಟೀಲ್, ಉಮೇಶ್ ಜೋಗುರ, ಇಕ್ಬಾಲ ತಲಕಾರಿ,  ಚನ್ನಪ್ಪ ಪಟ್ಟಣಶೆಟ್ಟಿ, ಮುತ್ತು ಮುಂಡೇವಾಡಗಿ, ಇಮಾಮುದ್ದೀನ ಚಾಂದಕವಟೆ, ಜಿಲಾನಿ ನಾಟಿಕಾರ,  ಕುಮಾರ ದೇಸಾಯಿ, ಮಹೇಶ ಮನಗೂಳಿ, ಭೀಮನಗೌಡ ಬಿರಾದಾರ, ಶಿವು ನಿಗಡಿ, ರಾಜು ಯಡ್ರಾಮಿ, ಮಂಜು ಬಿಜಾಪುರ್ ವಿರೇಶ ದುರ್ಗಿ ಹಾಗೂ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group