spot_img
spot_img

ಪರಿಸರ ಉಳಿದರೆ ನಾವು ಉಳಿಯುತ್ತೇವೆ – ಡಾ.ಸಂಧ್ಯಾ ಮನಗೂಳಿ

Must Read

ಸಿಂದಗಿ– ಭಗವಂತ ಉತ್ತಮ ಪರಿಸರವನ್ನು ನೀಡಿದ್ದಾನೆ ಅದನ್ನು ಇಂದಿನ ವೈಜ್ಞಾನಿಕ ಜಗತ್ತು ಹಾಳು ಮಾಡುತ್ತಿದೆ ಅದರ ಅರಿವು ಮಾಡಿಕೊಂಡು ಪರಿಸರ ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂಬ ಭಾವನೆ ನಮ್ಮದಾಗಬೇಕು ಎಂದು ಡಾ. ಸಂಧ್ಯಾ ಮನಗೂಳಿ ಹೇಳಿದರು.

ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಆರ್ಯುವೇದಿಕ ಮೆಡಿಕಲ್ ಕಾಲೇಜು ಮತ್ತು ಬ್ಯಾಕೋಡ ಗ್ರಾಪಂ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾನವ ತನ್ನ ಅವಶ್ಯಕತೆಗೆ ಮತ್ತು ಅತಿ ಆಸೆಗೆ ಪರಿಸರವನ್ನು ಹಾಳು ಮಾಡುತ್ತಿರುವುದು ದುರದೃಷ್ಟಕರ. ಆದರೆ ಇಂದು ಉದ್ಬವಿಸುತ್ತಿರುವ ಅನೇಕ ಮಾರಣಾಂತಿಕ ರೋಗಗಳು ಪರಿಸರದ ವಿನಾಶದಿಂದಲೆ. ಪರಿಸರವನ್ನು ನಾವೆಲ್ಲ ಉಳಿಸಿ ಬೆಳೆಸಿದರೆ ಉತ್ತಮ ವಾತಾವರಣ, ಗಾಳಿ, ನೀರು ಸೇರಿದಂತೆ ಅನೇಕ ಕೊವಿಡ್ ದಂತಹ ಅನೇಕ ರೋಗಗಳನ್ನು ದೂರ ಮಾಡಬಹುದು. ಪರಿಸರದ ಬಗ್ಗೆ ಹೆಚ್ಚು ಜಾಗೃತಿಯಾಗಬೇಕಿದೆ. ವಿಶ್ವ ಸಂಸ್ಥೆ ಪರಿಸರದ ಜಾಗೃತಿಗೆ ಹಮ್ಮಿಕೊಂಡಿರು ಕಾರ್ಯಕ್ರಮಗಳನ್ನು ಪ್ರತಿ ದೇಶಗಳು ಶ್ರದ್ದೆ ಮಾಡಿದ್ದಲ್ಲಿ ಯೋಗ್ಯ ಪರಿಸರವನ್ನು ಪಡೆಯಬಹುದು ಎಂದರು.

ಈ ಸಂಧರ್ಭದಲ್ಲಿ ಪುರಸಭೆಯ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ಪರಿಸರದ ಬೆಳವಣಿಗೆ ನಮ್ಮೇಲ್ಲರ ಕರ್ತವ್ಯವಾಗಬೇಕು. ಪರಿಸರದಿಂದಲೆ ಬದುಕು, ಪರಿಸರದಿಂದಲೆ ಬಾಳು ಎಂಬ ಮಂತ್ರವನ್ನು ನಾವೆಲ್ಲ ಸದಾ ಸ್ಮರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆಯ ಸದಸ್ಯರಾದ ಭೀಮು ಕಲಾಲ, ಶ್ರೀಶೈಲ ಬೀರಗೊಂಡ, ವೈಧ್ಯರಾದ ಡಾ ಆರತಿ ಚಿಕ್ಕೋಡಿ, ಡಾ. ಸಂಜೀವ ಅವಟಿ, ಡಾ.ಸತೀಶ ರಾಠೋಡ, ಕುಮಾರ ಬಗಲಿ, ಸಂಗಯ್ಯ ಹಿರೇಮಠ, ಬಸವಪ್ರಬಯ್ಯ ಹಿರೇಮಠ, ಸಂತೋಷ ಹಳಗೊಂಡ, ಮಡಿವಾಳಪ್ಪಗೌಡ ಬಿರಾದಾರ, ಶಿವಪುತ್ರ ಶಾಬಾದಿ, ರಾಯಗೊಂಡಪ್ಪ, ಭೀಮರಾಯ ಹಾವಳಗಿ, ಪರುಶುರಾಮ ಬ್ಯಾಕೋಡ, ಶ್ರೀಶೈಲ ನಾಯ್ಕೋಡಿ, ಕೃಷ್ಣ ಬ್ಯಾಕೋಡ, ಅಡಿವೇಪ್ಪ ತಳವಾರ, ಬಸು ಕಲಶೆಟ್ಟಿ, ವ್ಹಿ.ಬಿ.ಪಾಟೀಲ ಸೇರಿದಂತೆ ಆರ್ಯುವೇದಿಕ ಮಹಾವಿದ್ಯಾಲಯದ ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಈಗಿನಿಂದಲೇ ತಟ್ಟಿದ ಚುನಾವಣೆಯ ಬಿಸಿ

ಬೀದರನ ಭಾಲ್ಕಿಯಲ್ಲಿ ತಂದೆ - ಮಗನ ವಿಭಿನ್ನ ಹೋರಾಟ ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ  ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ  ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ...
- Advertisement -

More Articles Like This

- Advertisement -
close
error: Content is protected !!