ಮೊಡವೆಗಳು ಒಂದು ಸಮಸ್ಯೆಯಾಗಿದ್ದರೆ, ಅವು ಗುಣಮುಖವಾದ ನಂತರ ಉಳಿಯುವ ಕಪ್ಪು ಕಲೆಗಳು ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಈ ಕಲೆಗಳು ಮುಖದ ಸೌಂದರ್ಯವನ್ನು ಕಡಿಮೆ ಮಾಡಬಹುದು.
ಶ್ರೀಗಂಧ ಮತ್ತು ಗುಲಾಬಿ ನೀರಿನ ಫೇಸ್ ಪ್ಯಾಕ್ ಮೊಡವೆ ಕಲೆಗಳನ್ನು ಹೋಗಲಾಡಿಸಲು ಉತ್ತಮ ಮನೆಮದ್ದಾಗಿದೆ. ಶ್ರೀಗಂಧವನ್ನು ಪೇಸ್ಟ್ ಮಾಡಿ ಗುಲಾಬಿ ನೀರಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 2-5 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.
ಅಲೋವೆರಾ ಮತ್ತು ಅರಿಶಿನದಿಂದ ತಯಾರಿಸುವ ಫೇಸ್ ಫ್ಯಾಕ್ ಮುಖದ ಮೇಲಿನ ಮೊಡವೆಗಳಿಗೆ ತುಂಬಾ ಉತ್ತಮವಾದ ಔಷಧಿ.
ಈ ಎರಡು ಪದಾರ್ಥಗಳ ಸಂಯೋಜನೆಯು ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಾದಾಮಿ ಪುಡಿ ಮತ್ತು ಹಾಲು ಒಂದು ಅದ್ಭುತವಾದ ಮುಖದ ಉಪಚಾರವಾಗಿದೆ. ಬಾದಾಮಿ ಪುಡಿಯನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ತೊಳೆಯಿರಿ.
ನಂತರ ತೊಳೆಯಿರಿ. ಇದು ಮುಖವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ ಮತ್ತು ಮೊಡವೆ ಮತ್ತು ಮೊಡವೆ ಕಲೆಗಳನ್ನು ಕಡಿಮೆ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು.