ನಟಿ ದೀಪಿಕಾ ಪಡುಕೋಣೆ ಅವರು ಹಿಮೇಶ್ ರೇಶಮಿಯಾ ಅವರ "ಆಪ್ ಕಾ ಸುರೂರ್" ಚಿತ್ರದ "ನಾಮ್ ಹೈ ತೇರಾ" ಎಂಬ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಪರಿಚಯವಾದರು.
ಉಪೇಂದ್ರ ಅವರ ಅಭಿನಯದ "ಐಶ್ವರ್ಯ" ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಉತ್ತರ ಭಾರತದಲ್ಲಿ ಸತತ ಅವಕಾಶಗಳನ್ನು ಪಡೆದು ದೀಪಿಕಾ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿ ಬೆಳೆದರು. ಬಾಲಿವುಡ್‌ನಲ್ಲಿ ಅನೇಕ ಪ್ರಶಸ್ತಿ ಮತ್ತು ಬಹುಮಾನಗಳನ್ನು ಗೆದ್ದುಕೊಂಡು, ಭಾರತೀಯ ಚಿತ್ರರಂಗದ ಪ್ರಮುಖ ನಟಿಯರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.
2018ರಲ್ಲಿ ಬಾಲಿವುಡ್ ಹೀರೋ ರಣವೀರ್ ಸಿಂಗ್ ಅವರನ್ನು ದೀಪಿಕಾ ಮದುವೆಯಾದರು.
ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಾಗಿದೆ. ಇದೀಗ ಅವರು ತಮ್ಮ ಗರ್ಭಿಣಿತನದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗುತ್ತಿವೆ.