ಕೂದಲು ಬೆಳ್ಳಗಾಗುವುದು ವಯಸ್ಸಾದ ಮೇಲೆ ಸಹಜ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಯಾರಿಗೂ ಇಷ್ಟವಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಯುವಕ ಯುವತಿಯರಲ್ಲಿಯೂ ಕೂಡ ಅಕಾಲಿಕ ಬಿಳಿ ಕೂದಲು ಕಾಣಬಹುದು.

ಇದರಿಂದಾಗಿ ಅವರಿಗೆ ಮುಜುಗರ, ಆತ್ಮವಿಶ್ವಾಸ ಕುಂದುವುದು ಖಂಡಿತ. ಚಿಂತೆ ಬೇಡ, ಕೆಲವು ಸರಳ ಟಿಪ್ಸ್‌ಗಳನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.

ಕೂದಲು ಬೇಗನೆ ಬೆಳ್ಳಗಾಗಲು ಜೀನ್ಸ್, ಕೆಟ್ಟ ಜೀವನಶೈಲಿ, ಹಾರ್ಮೋನ್ ಬದಲಾವಣೆಗಳು ಸೇರಿದಂತೆ ಹಲವಾರು ಕಾರಣಗಳಿವೆ. ಈ ಬಿಳಿ ಕೂದಲನ್ನು ಕಪ್ಪು ಮಾಡಲು ನೈಸರ್ಗಿಕ ಮನೆಮದ್ದುಗಳನ್ನು ಬಳಸುವುದು ಒಳ್ಳೆಯದು. ತರಕಾರಿ ಮತ್ತು ಹಣ್ಣುಗಳ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಬಿಳಿ ಕೂದಲಿಗೆ ಪರಿಹಾರ ಕಾಣಬಹುದು.

ಬೀಟ್ರೂಟ್ ಜ್ಯೂಸ್: ಕೂದಲಿನ ಕಾಂತಿಗೆ ರಹಸ್ಯ ಬೀಟ್ರೂಟ್‌ನಲ್ಲಿರುವ ವಿಟಮಿನ್ ಸಿ ದೇಹಕ್ಕೆ ಅತ್ಯಗತ್ಯ. ಇದರ ಜ್ಯೂಸ್ ಸೇವನೆಯಿಂದ ದೇಹದ ಜೊತೆಗೆ ಕೂದಲಿನ ಆರೋಗ್ಯವನ್ನೂ ಸುಧಾರಿಸಬಹುದು.

ಹೌದು, ನಿಜ! ಕ್ಯಾರೆಟ್‌ನಲ್ಲಿರುವ ಉತ್ತಮ ಪೋಷಕಾಂಶಗಳು ಕೇವಲ ನಿಮ್ಮ ದೇಹಕ್ಕಷ್ಟೇ ಅಲ್ಲ, ನಿಮ್ಮ ಕೂದಲಿಗೂ ಅತ್ಯಂತ ಒಳ್ಳೆಯದು. ಪ್ರತಿದಿನ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಕೂದಲಿನ ಹಾಗೂ ಚರ್ಮದ ಹಲವಾರು ಸಮಸ್ಯೆಗಳನ್ನು ಪರಿಹರಿಸಬಹುದು.

ಪುದೀನಾ ಎಲೆಗಳ ರಸದಿಂದ ದೇಹಕ್ಕೆ ಹಲವಾರು ಲಾಭಗಳಿವೆ. ಇದರಲ್ಲಿರುವ ಕೆಲವು ಅಂಶಗಳು ಮಾನವನ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ.

ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು, ಏಕೆಂದರೆ ಅವು ನಿಮ್ಮ ನಿರ್ದಿಷ್ಟ ಪರಿಸ್ಥಿತಿಗೆ ಸೂಕ್ತವಾಗದಿರಬಹುದು. ವೈದ್ಯರು ನಿಮ್ಮ ಚಿಕಿತ್ಸಾ ಇತಿಹಾಸವನ್ನು ಪರಿಗಣಿಸಬಹುದು ಮತ್ತು ನಿಮಗೆ ಸುರಕ್ಷಿತವಾದ ಮತ್ತು ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಶಿಫಾರಸು ಮಾಡಬಹುದು.