ಐಪಿಎಲ್ ಮಾದರಿಯಲ್ಲಿ ಮಹಿಳಾ ಕ್ರಿಕೆಟ್‌ಗಾಗಿ ಪ್ರಾರಂಭವಾದ ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್ ಫೆಬ್ರವರಿ 23, 2024 ರಂದು ಪ್ರಾರಂಭವಾಗಿದೆ. ಈ ಲೀಗ್ ಮಹಿಳಾ ಕ್ರಿಕೆಟ್‌ಗೆ ಹೊಸ ಭರವಸೆಯನ್ನು ನೀಡಿದೆ ಮತ್ತು ಭಾರತದಾದ್ಯಂತ ಹೆಣ್ಣುಮಕ್ಕಳಲ್ಲಿ ಕ್ರಿಕೆಟ್‌ನ ಜನಪ್ರಿಯತೆಯನ್ನು ಹೆಚ್ಚಿಸಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್ ಆರಂಭಕ್ಕೆ ಮುಂಚಿತವಾಗಿ ಸ್ಮೃತಿ ಮಂಧಾನ ಕುರಿತ ಒಂದು ವಿಚಾರ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಮಹಿಳಾ ಕ್ರಿಕೆಟಿಗರು ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್‌ಗಿಂತ ಹೆಚ್ಚಿನ ಸಂಭಾವನೆ ಪಡೆಯಬೇಕೆಂಬ ವಾದ ಮುನ್ನೆಲೆಗೆ ಬಂದಿದೆ.
ಸ್ಮೃತಿ ಮಂಧಾನ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕಿಯಾಗಿದ್ದಾರೆ. ಕಳೆದ ವರ್ಷ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) ಹರಾಜಿನಲ್ಲಿ RCB 3.4 ಕೋಟಿ ರೂಪಾಯಿಗೆ ಸ್ಮೃತಿ ಮಂಧಾನ ಅವರನ್ನು ಖರೀದಿಸಿತ್ತು.
ಪಾಕಿಸ್ತಾನದ ಟಿ20 ಲೀಗ್ ಪಿಎಸ್‌ಎಲ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬರ್ ಅಜಮ್‌ಗೆ ನೀಡುವ ಸಂಬಳಕ್ಕಿಂತ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಮೃತಿ ಮಂಧಾನಾ ಅವರಿಗೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ಹೆಚ್ಚಿನ ಹಣ ನೀಡಲಾಗುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ.
ಪಿಎಸ್ಎಲ್ ಒಂದು ಡ್ರಾಫ್ಟ್ ವ್ಯವಸ್ಥೆಯನ್ನು ಹೊಂದಿದೆ. ಪ್ಲಾಟಿನಂ ವರ್ಗದಲ್ಲಿರುವ ಆಟಗಾರರಿಗೆ ಸುಮಾರು 1.40 ಕೋಟಿ ರೂಪಾಯಿ (ಭಾರತೀಯ ಕರೆನ್ಸಿಯಲ್ಲಿ) ಸಂಬಳ ಸಿಗುತ್ತದೆ.