ಕಸಾಪ ವತಿಯಿಂದ ವೆಬಿನಾರ್ ಮಾಲಿಕೆಯಲ್ಲಿ “ವಚನಗಳಲ್ಲಿ ಆರೋಗ್ಯ” ಕುರಿತು ಉಪನ್ಯಾಸ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಬೆಳಗಾವಿ ಜಿಲ್ಲೆಯ ಕ.ಸಾ.ಪ ಘಟಕದ ವತಿಯಿಂದ ವೆಬಿನಾರ್ ಮೂಲಕ ಉಪನ್ಯಾಸ ಮಾಲಿಕೆಯ ಐದನೇ ಕಾರ್ಯಕ್ರಮ ರವಿವಾರ ಜರುಗಿತು. ಕಾರ್ಯಕ್ರಮದಲ್ಲಿ ಬೈಲಹೊಂಗಲ ತಾಲೂಕು ಘಟಕದ ಅಧ್ಯಕ್ಷರಾದ ಗೌರಾದೇವಿ ತಾಳಿಕೋಟಿಮಠ ಅವರಿಂದ ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಲಾಯಿತು.

ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಕ.ಸಾ. ಪ. ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ ರವರು, ರಾಜ್ಯ ಸರಕಾರದವರು ವಿಧಾನಸೌಧ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ಸ್ಥಾಪನೆಗೆ ನಿರ್ಧರಿಸಿದ್ದು ಸಮಸ್ತ ಶರಣ ಸಮೂಹಕ್ಕೆ ಮತ್ತು ವಿಶ್ವಗುರು ಬಸವಣ್ಣನವರಿಗೆ ಸಂದ ಗೌರವ ಅದಕ್ಕಾಗಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ನವರಿಗೆ ಸಮಸ್ತ ಕನ್ನಡ ಜನತೆಯ ವತಿಯಿಂದ ಹಾರ್ದಿಕ ಅಭಿನಂದನೆಗಳು ಎಂದರು.

ಜಾತಿ, ಮತ ಎನ್ನದೆ ಎಲ್ಲರನ್ನೂ ಒಂದಾಗಿಸಿದ ಬಸವಣ್ಣನವರು ಐಕ್ಯತೆಯ ಪ್ರತೀಕ ಎಂದರು.

- Advertisement -

ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ “ವಚನಗಳಲ್ಲಿ ಆರೋಗ್ಯ” ಕುರಿತಾದ ಉಪನ್ಯಾಸವನ್ನು ಹೆಸರಾಂತ ಉಪನ್ಯಾಸಕರು, ಬಸವ ತತ್ವ ಪ್ರಚಾರಕರು. ಬೈಲಹೊಂಗಲದ ಮುಕ್ತಾಯಕ್ಕ ಬಳಗದ ಅಧ್ಯಕ್ಷರು ಆದ ಶರಣೆ ಪ್ರೇಮಕ್ಕ ಅಂಗಡಿಯವರು ಮಾತನಾಡಿ, ಅರಿಷಡ್ವರ್ಗಗಳ ಮೇಲೆ ಹಿಡಿತ ಸಾಧಿಸಿದವನು ಆರೋಗ್ಯವಂತ. ಸರ್ವ ಕ್ಷೇತ್ರಗಳಿಗೂ ವಚನಗಳು ಹಾಸುಹೊಕ್ಕಾಗಿವೆ. ವಚನಗಳನ್ನು ನಾವೆಲ್ಲ ಪಚನ ಮಾಡಿಕೊಂಡಿದ್ದೇ ಆದರೆ ನಮ್ಮ ಜೀವನ ರೂಪಿಸಿಕೊಳ್ಳಬಹುದು ಅದೇ ರೀತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ವಚನಗಳನ್ನು ಗಮನಿಸಲಾಗಿ ದೈಹಿಕ, -ಮಾನಸಿಕ, ಆತ್ಮಕ್ಕೆ ಸಂಬಂಧಿಸಿದ ಮೂರನ್ನು ಹಿಡಿತ ಸಾಧಿಸಿದ್ದೇ ಆದರೆ ಅದುವೇ ಆರೋಗ್ಯ. ದೈಹಿಕವಾಗಿ ಗಮನಿಸಲಾಗಿ ನಾವು ಸಾತ್ವಿಕ ಆಹಾರ ದೇಹಕ್ಕೆ ಕೊಡಬೇಕು ಮತ್ತು ಆಹಾರವನ್ನು ಪ್ರಸಾದವಾಗಿ ಸ್ವೀಕರಿಸಬೇಕು. ಕೈ ಬಾಯಿಗಳ ಚಪಲ ಹಿಡಿತದಲ್ಲಿರಬೇಕು. ಆಹಾರ ಕಿರಿದಾಗಿ ರಬೇಕು. ಅತಿ ಆಹಾರ ಸಾಧನೆಗೆ ಬಾಧಕ. ಮಾಂಸಾಹಾರ ತ್ಯಜಿಸಿದರೆ ಭಾವನೆಗಳು ಒಳ್ಳೆಯವಾಗುವುದು. ದೇಹದ ವಾತ, ಪಿತ್ತ, ಕಫಗಳು ಸೇವಿಸುವ ಆಹಾರದಲ್ಲಿ ಇವೆ. ನಮ್ಮ ಶರೀರಕ್ಕೆ ಬರುವ ರೋಗಗಳನ್ನು ತಪ್ಪಿಸಲು ನಮ್ಮ ಅವಯವಗಳ ನಿಯಂತ್ರಣದಲ್ಲಿದ್ದರೆ ಮಾತ್ರ ಸಾಧ್ಯ.

ಹಾಗೆಯೇ ಮಾನಸಿಕವಾಗಿ ಗಮನಿಸಲಾಗಿ ಮನವೇ ಮನುಷ್ಯನ ನಿಯಂತ್ರಕ. ಕಣ್ಣಿಗೆ ಕಾಣದ ಮನಸ್ಸಿಗೆ ನಾವು ಸುಜ್ಞಾನ ಸದ್ಭಾವ ಕೊಡಬೇಕು. ಇಲ್ಲದಿದ್ದರೆ ಮನಸ್ಸು ವಿಕಾರವಾಗಿ ಜರ್ಜರಿತ ವಾಗುತ್ತದೆ. ಈಗಿರುವ ಕರೋಣ ದಂತ ರೋಗ ಮಾನಸಿಕವಾಗಿ ನಮ್ಮನ್ನು ಕುಗ್ಗಿಸುತ್ತಿದೆ. ನಾವು ಸೇವಿಸುವ ಆಹಾರ ಒಳ್ಳೆಯದಾಗಿದ್ದರೆ, ಸಾತ್ವಿಕ ವಾಗಿದ್ದರೆ ರೋಗ ಎದುರಿಸುವ ಶಕ್ತಿ ನಮ್ಮಲ್ಲಿಯೇ ಬರುತ್ತದೆ. ಅದಕ್ಕೆ ದೇಹಕ್ಕೆ ಹೊಂದುವ ಆಹಾರ ಕೊಡಬೇಕು. ನಮ್ಮ ಆತ್ಮವೇ ಒಂದು ದೇವರಾಗಿದೆ.

ಬಾಹ್ಯ ದೇವರು ಮತ್ತು ನಮ್ಮ ಆತ್ಮದ ದೇವರು ಚಂದಾಗಿ ಹೊಂದಾಣಿಕೆ ಆದರೆ ನಾವು ಸರಿಯಾಗಿ ಬದುಕಬಹುದು. ನಾವು ಶರೀರಕ್ಕೆ ಹಾಲು ಹಾಕಿದರೂ , ವಿಷ ಹಾಕಿದರೂ ಅದು ತೆಗೆದುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ನಾವು ಯಾವ ಸೇವನೆ ಮಾಡುತ್ತೇವೆ ಆ ಭಾವ ವಿಕಾಸ ಆಗುವುದು. ಹಲವು ಯೋಗ ಮಾಡಿ ಫಲವಿಲ್ಲ. ಕರ್ಮಯೋಗಿಯಾಗಿ ಶ್ರಮದ ಬೆವರು ಬಂದಾಗ ಶರೀರ ಸ್ವಚ್ಛವಾಗುವುದು. ಶರೀರದ ಪವಿತ್ರಗ್ರಂಥ ಮೆದುಳು. ಮೆದುಳಿಗೆ ಸರಿಯಾದ ಕೆಲಸ ಕೊಟ್ಟರೆ ನಮ್ಮ ಆರೋಗ್ಯ ಚೆನ್ನಾಗಿರುತ್ತೆ.

ನಮ್ಮ ಭೌತಿಕ ಶರೀರಕ್ಕೆ ಯಾವುದೇ ರೋಗ ಬರಲಿ ಆದರೆ ಮಾನಸಿಕ ವ್ಯವಸ್ಥೆ ಚೆನ್ನಾಗಿದ್ದರೆ ನಾವು ಯಾವುದೇ ರೋಗವನ್ನು ಸಹ ಎದುರಿಸುವ ಶಕ್ತಿ ನಮ್ಮ ದೇಹಕ್ಕೆ ಬರುವುದು. ನಮ್ಮದೇಹ ಶುಚಿ, ನಡೆ ಶುಚಿ, ನುಡಿ ಶುಚಿ, ಮನ ಶುಚಿ ಆಗಿದ್ದೇ ಆದರೆ ಆರೋಗ್ಯವನ್ನು ಸಾಧಿಸಬಹುದು ಎಂದು ಹಲವಾರು ಶರಣರ ವಚನಗಳನ್ನು ಹೇಳುತ್ತಾ ತುಂಬಾ ಮಾರ್ಮಿಕವಾಗಿ ಮತ್ತು ಎಲ್ಲರಿಗೂ ಮನಮುಟ್ಟುವಂತೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ಸಾಹಿತಿಗಳು, ನಿವೃತ್ತ ಪ್ರಾಧ್ಯಾಪಕರು ಆದ ಶರಣೆ ಗುರುದೇವಿತಾಯಿ ಹುಲೆಪ್ಪನವರಮಠ ಮಾತನಾಡಿ, ಆರೋಗ್ಯದ ಗುಟ್ಟು ವಚನೋಪತಿಯಲ್ಲಿದೆ. ಸಾಧನೆಗಳಿಗೆ ಮೂಲ ಮಾಧ್ಯಮ ಶರೀರ. ಅದರ ಕುರಿತಾದ ಜ್ಞಾನ ನಮಗೆ ಬೇಕು. ಭಗವಂತನ ಕೃಪೆಯಿಂದ ಬಂದ ದೇಹವನ್ನು ನಾವು ನಾಶ ಮಾಡಿಕೊಳ್ಳದೆ ದೇವಾಲಯವನ್ನು ಕಾಣುವಂತೆ ಪವಿತ್ರವಾಗಿ ಇಟ್ಟುಕೊಳ್ಳಬೇಕು.

ಭಗವಂತನ ದೇಣಿಗೆ ಯಾಗಿರುವ ಶರೀರವನ್ನು ಇದ್ದಂತೆ ಕಾಪಾಡಿಕೊಳ್ಳಬೇಕು. ಮಾಡಬಾರದ್ದು ಮಾಡಿ, ತಿನ್ನಬಾರದ್ದನ್ನು ತಿಂದು, ನೋಡಬಾರದ್ದನ್ನು ನೋಡಿ, ಕೇಳಬಾರದ್ದನ್ನು ಕೇಳಿ, ಮಾಡಬಾರದ್ದನ್ನು ಮಾಡಿ ದೇಹ ಹಾಳು ಮಾಡಿಕೊಳ್ಳಬಾರದು. ನಮ್ಮ ಚಟ ನಮ್ಮ ಭವ ನಮ್ಮ ಭಾವ ಸರಿಯಾಗಿರಲಿ. ನಮ್ಮ ಹಿಡಿತ ನಮ್ಮಲ್ಲಿರಲಿ ಅಂದಾಗ ಮಾತ್ರ ಈಗ ಒದಗಿಬಂದಿರುವ ಸಾಂಕ್ರಾಮಿಕ ರೋಗಗಳ ಸವಾಲುಗಳನ್ನು ಸಹ ನಾವು ಎಚ್ಚರಿಕೆಯಿಂದ ಎದುರಿಸಬಹುದು ಎಂದು ಶರಣರ ದೃಷ್ಟಾಂತಗಳನ್ನು ಕೊಡುತ್ತಾ ಬಹಳ ಚೆನ್ನಾಗಿ ವಚನಗಳಲ್ಲಿ ಆರೋಗ್ಯದ ಸಾರವನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಯ. ರು. ಪಾಟೀಲ, ಮೈತ್ರಿಯಿನಿ ಗದಿಗೆಪ್ಪಗೌಡರ, ನಿರ್ಮಲ ಬಟ್ಟಲ, ಹೇಮಾವತಿ ಸೊನೊಳ್ಳಿ, , ಬಸವರಾಜ್ ಗಾರ್ಗಿ, . ಶಿವಾನಂದ ತಲ್ಲೂರ, ಎಂ.ಎಸ್.ಹೊಂಗಲ, ಶೈಲಜಾ ಬಿಂಗೆ, ಬಸನಗೌಡ ಪಾಟೀಲ್, ಸುರೇಶ್ ಮರಲಿಂಗನವರ್, ರೋಹಿಣಿ ಯಾದವಾಡ,ವಿದ್ಯಾ ಕಾಪಸಿ , ಶಾಲಿನಿ ಚಿನಿವಾಲರ್, , ಪತ್ರಕರ್ತ ಬಿ.ಹೆಚ್ ಹೊಂಗಲ್ ಸೇರಿದಂತೆ ಕ.ಸಾ.ಪ. ವಿವಿಧ ತಾಲೂಕುಗಳ ಅಧ್ಯಕ್ಷರಾದ , ವಿಜಯ ಬಡಿಗೇರ, ವಿದ್ಯಾವತಿ ಜನವಡೆ, ಶ್ರೀಪಾದ ಕುಂಬಾರ, ಮಹಾಂತೇಶ ಉಕ್ಕಲಿ, ಶೇಖರ ಹಲಸಗಿ, ಸಿದ್ದರಾಮ ದ್ಯಾಗ್ಯಾನಟ್ಟಿ, ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪಾಂಡುರಂಗ ಜಟಗನ್ನವರ್ ಸಂಯೋಜಿಸಿ, ನಿರ್ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿ ವಂದನಾರ್ಪಣೆ ಸಲ್ಲಿಸಿದರು.

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!