ವೆಬಿನಾರ್ ಯೋಗ ಶಿಬಿರ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುವ ಯೋಗ ವಿದ್ಯೆಯು ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ.ಶರೀರ ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಡನೆ ಸಂಯೋಜಿಸುವುದೇ ಯೋಗ.ಸ್ವಾಮಿ ವಿವೇಕಾನಂದರು ಹೇಳುವಂತೆ “ತನ್ನ ಸಂಪೂರ್ಣ ವಿಕಾಸವನ್ನು ಒಂದು ಜನ್ಮದಲ್ಲಿ ಅಥವಾ ಕೆಲವು ತಿಂಗಳುಗಳಲ್ಲಿ ಅಥವಾ ಕೆಲವು ಗಂಟೆಗಳಲ್ಲಿ ಮಾನವನು ಸಾಧಿಸಬಹುದಾದ ಸಾಧನವೇ ಯೋಗ”.

ಯಮ ನಿಯಮ ಅನುಷ್ಟಾನವೇ ಪಾಪ ನಿವೃತ್ತಿ. ಯಮ ನಿಯಮಗಳ ಅಭ್ಯಾಸವು ವ್ಯಕ್ತಿಯ ಮನಸ್ಸಿನಲ್ಲಿ ಏಳುವ ಪಾಪಕರ್ಮಗಳನ್ನು ಮಾಡಬೇಕೆಂಬ ಯೋಚನೆಯನ್ನು ನಾಶಗೊಳಿಸುತ್ತದೆ ಎಂಬುದಾಗಿ ಯೋಗ ಮಹರ್ಷಿಗಳು ನುಡಿದಿರುವರು. ಕೋರೋನಾ ಕಾಲಘಟ್ಟದಲ್ಲೂ ಉಸಿರಾಟ ಪ್ರಕ್ರಿಯೆ ಕುರಿತಂತೆ ಯೋಗವನ್ನು ಕೋರೊನಾ ಪೀಡಿತರಾಗಿ ಗುಣಮುಖರಾಗಿ ಹೊರಬಂದವರಿಗೆ ಉಸಿರಾಟ ಪ್ರಕ್ರಿಯೆಯ ಯೋಗವನ್ನು ಮಾಡುವಂತೆ ವೈದ್ಯರು ಸಲಹೆ ನೀಡುತ್ತಿರುವುದನ್ನು ನಾವು ಗಮನಿಸಬಹುದು. ಇಂತಹ ಒಂದು ಪ್ರಕ್ರಿಯೆ ಶಿಕ್ಷಕರ ಮೂಲಕ ಶಾಲಾ ಮಕ್ಕಳಿಗೆ ದೊರೆಯುವಂತಾದರೆ ಅನುಕೂಲವಲ್ಲವೇ.?

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು (ಯರಗಟ್ಟಿ ತಾಲೂಕು ವಿಭಜನೆ ಆಗಿದ್ದರೂ ಇನ್ನೂ ಇಲಾಖೆ ವಿಂಗಡಣೆ ಆಗಿಲ್ಲ) ಯರಜರ್ವಿ ಸರಕಾರಿ ಪ್ರೌಢಶಾಲೆಯಲ್ಲಿ ಜೂನ್ ತಿಂಗಳಲ್ಲಿ ಶಾಲೆಯ ಶಿಕ್ಷಕರೆಲ್ಲ ಸೇರಿ ಯೋಗ ದಿನವನ್ನು ವೆಬಿನಾರ್ ಮೂಲಕ ಮಾಡಬೇಕು ಎಂದು ತಯಾರಿಯಲ್ಲಿ ತೊಡಗಿದರು.ವಿದ್ಯಾರ್ಥಿಗಳ ಪಾಲಕರನ್ನು ಸಂಪರ್ಕಿಸಿ ಅವರ ಪೋನ್ ನಂಬರ್ ಕಲೆ ಹಾಕಿದರು. ದೈಹಿಕ ಶಿಕ್ಷಕ ಪಾಟೀಲ ಪ್ರತಿ ದಿನ ಸುಲಭ ಸಹಜ ಯೋಗಾಸನಗಳನ್ನು ತರಬೇತಿ ನೀಡುವ ಸಿದ್ಧತೆ ಮಾಡಿಕೊಂಡರು. ಅಕ್ಕ ಪಕ್ಕದ ಪ್ರೌಢಶಾಲೆಗಳ ಶಿಕ್ಷಕರನ್ನೂ ಕೂಡ ಸಂಪರ್ಕಿಸಿ ಯೋಗ ಶಿಬಿರದ ವೆಬನಾರದಲ್ಲಿ ಹಾಜರಿರುವಂತೆ ತಿಳಿಸಿದರು.

- Advertisement -

ಇದೊಂದು ಸವದತ್ತಿ ತಾಲೂಕಿನಲ್ಲಿ ವಿಭಿನ್ನ ಪ್ರಯೋಗ. ಶಾಲೆಯ ಎಲ್ಲ ಶಿಕ್ಷಕ ವೃಂದದ ಸಹಕಾರದಿಂದ ಜೂನ್ 21 ಯೋಗದಿನದಂದು 6 ದಿನಗಳ ಯೋಗ ಶಿಬಿರ ವಿದ್ಯುಕ್ತವಾಗಿ ಚಾಲನೆಗೊಂಡಿತು. ಯರಜರ್ವಿ ಗ್ರಾಮದ ಶಾಲೆ ಸುಂದರ ಪರಿಸರವನ್ನು ಹೊಂದಿದೆ. ಇದು ಯರಗಟ್ಟಿಯಿಂದ ಹಲಕಿ ಕ್ರಾಸ್ ಮೂಲಕ ಬಂದರೆ 13 ಕಿ.ಮೀ ಅಂತರದಲ್ಲಿದೆ. ಯರಗಟ್ಟಿ ಮೂಲಕ ಬೂದಿಗೊಪ್ಪ ಗ್ರಾಮದ ರಸ್ತೆಯ ಮೂಲಕ ಬಂದರೆ 10 ಕಿ.ಮೀ ಅಂತರದಲ್ಲಿದೆ. ಇಲ್ಲಿನ ಎಲ್ಲ ಶಿಕ್ಷಕ ಶಿಕ್ಷಕಿಯರೂ ಕ್ರಿಯಾಶೀಲರಿದ್ದು ಏನೇ ಮಾಡಿದರೂ ಎಲ್ಲರೂ ಕೂಡಿ ಯೋಚಿಸಿ ಪ್ರಧಾನ ಗುರುಗಳ ನೇತೃತ್ವದಲ್ಲಿ ಮಕ್ಕಳಿಗೆ ಪಾಲಕರಿಗೂ ಅನುಕೂಲವಾಗುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮದ ಜನರ ಮನಮೆಚ್ಚಿನ ಗುರುಗಳಾಗಿರುವರು. ಉತ್ತಮ ಆಟದ ಮೈದಾನವನ್ನು ಈ ಪ್ರೌಢಶಾಲೆ ಹೊಂದಿದೆ.

ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ವ್ಹಿ ಎಚ್ ಪಾಟೀಲ ಇವರ ನೇತೃತ್ವದಲ್ಲಿ ಸಂಘಟಿಸಲಾದ ಅಂತರಾಷ್ಟ್ರೀಯ ಯೋಗ ದಿನಾಚರಣೆ 2021 ರ ನಿಮಿತ್ಯ ಹಮ್ಮಿಕೊಂಡ 6 ದಿನಗಳ ಪ್ರಾತ್ಯಕ್ಷಿಕೆಯೊಂದಿಗೆ ಯೋಗ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಎ ಎನ ಕಂಬೋಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೂಗಲ್ ಮೀಟ್ ವೆಬನಾರ್‍ದಲ್ಲಿ ಹಾಜರಿದ್ದು ಮಾತನಾಡುತ್ತಾ ಯೋಗದ ಮಹತ್ವವನ್ನು ವಿವರಿಸಿ, ಕೊರೊನಾ ಸಮಯದಲ್ಲಿ ಯೋಗವು ಅಗತ್ಯವಾಗಿದ್ದು, ಆರೊಗ್ಯಯುತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆಯಾಗಿರುವುದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ನಿರ್ವಹಿಸಬಹುದಾಗಿದೆಯೆಂದು ಹೇಳುತ್ತಾ ಶುಭ ಕೋರಿದರು.

ಇನ್ನೋರ್ವ ಅತಿಥಿಗಳಾದ ಶ್ರೀ ಜಿ ಎಸ್ ಕಂಬಳಿ ವಿಷಯ ಪರಿವೀಕ್ಷಕರು ಉಪನಿರ್ದೇಶಕರ ಕಾರ್ಯಾಲಯ ಬೆಳಗಾವಿ ಇವರು ಮಾತನಾಡುತ್ತಾ “ಯೋಗದಿಂದ ನಿರೋಗಿಯಾಗುವ ಮಾತನ್ನು ಇತಿಹಾಸದ ಪುಟಗಳಿಂದ ನಾವು ತಿಳಿಯವುದಲ್ಲದೆ ಮಹಮಾರಿ ಕೋರೊನಾದಿಂದ ಬದುಕುಳಿಯವಲ್ಲಿ ಮಹತ್ವದ ಪಾತ್ರ ಯೋಗದ ಹವು ಆಸನಗಳು ವಹಿಸುತ್ತದೆ. ಆದ್ದರಿಂದ ನಾವೆಲ್ಲರೂ ಸೇರಲಾರದಂತಹ ಸಮಯದಲ್ಲಿ ನಮ್ಮನ್ನು ನಾವು ಯೋಗದಲ್ಲಿ ತೊಡಗುವಂತೆ ಮಾಡಲು ವೆಬಿನಾರ್ ನಲ್ಲಿ ಈ ಯೋಗ ತರಬೇತಿ ಹಮ್ಮಿಕೊಂಡಿರುವುದು ಅಭಿನಂದನಾರ್ಹವಾಗಿದೆಯೆಂದು ಹೇಳಿ, ಶಿಬಿರವು ಯಶಸ್ವಿಗೊಳ್ಳಲೆಂದು” ಶುಭ ಕೋರಿದರು, ಇನ್ನೋರ್ವ ಅತಿಥಿ ಉಪನ್ಯಸಕರಾಗಿ ಶ್ರೀ ರಾಘವೇಂದ್ರ ದೇಶಪಾಂಡೆ, “ಭಾವೈಸಿರಿ ವೇದಿಕೆ ಸಂಯೋಜಕರು ಬೆಂಗಳೂರು, ಹಂಪಿ . ಇವರು ಯೋಗದ ಇತಿಹಾಸ ಮಹತ್ವ, ಪ್ರಸ್ತುತ ದಿನಮಾನಗಳಲ್ಲಿ ಇದರ ಅನಿವಾರ್ಯತೆ ಕುರಿತು” ಸವಿಸ್ತರವಾಗಿ ಉಪನ್ಯಾಸ ನೀಡಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕನ್ನಡ ವಿಷಯ ಪರಿವೀಕ್ಷಕರಾದ ಶ್ರೀ ಅರಿಹಂತ ಬಿರಾದಾರ ಪಾಟೀಲ ಅವರು ಪಾಲ್ಗೊಂಡು ಶಿಬಿರಕ್ಕೆ ಶುಭ ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ ಜಿ ದಾಸರ ಅವರು ಈ ಕಾರ್ಯಕ್ರಮ, ತರಬೇತಿಯ ಸದುಪಯೋಗ ಮಕ್ಕಳ ಮೂಲಕ ಪೋಷಕ, ಶಿಕ್ಷಕರ ಮೂಲಕ ಈ ಸಮಾಜಕ್ಕೆ ಆಗಲೆಂಬುದು ನಮ್ಮ ಉದ್ದೇಶವಾಗಿದೆಯೆಂದು ಹೇಳಿ ಶಿಬಿರ ಯಶಸ್ವ್ವಿಯಾಗಲೆಂದು” ಶುಭ ಕೋರಿದರು.

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ವ್ಹಿ ಎಚ್ ಪಾಟೀಲ ಅವರು ನೇರವಾಗಿ ಪ್ರಾತ್ಯಕ್ಷತೆಯೊಂದಿಗೆ ಯೋಗ ತರಬೇತಿಯನ್ನು ಪ್ರಾರಂಭಿಸಿದರು ಯೋಗದ ಬಗೆಗಿನ ಸಂಕುಚಿತ ಕಲ್ಪನೆಗಳ ಕುರಿತು ಪ್ರಸ್ತಾಪಿಸಿ ಕೆಲವು ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿವರಿಸಿ ಸರಳ ವ್ಯಾಯಾಮಗಳು, ನಿಂತು ಮತ್ತು ಕುಳಿತು ಮಾಡುವ ಉಸಿರಾಟದ ಚಟುವಟಿಕೆಗಳನ್ನು ಮಾಡಿ ತೋರಿಸುತ್ತಾ ವೆಬಿನಾರ್ ಶಿಬಿರರ್ಥೀಗಳನ್ನು ಈ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಸಿ ನಿಂತು ಮಾಡಬಹುದಾದ ಸರಳ ಆಸನಗಳಾದ ಊಧ್ರ್ವ ಹಸ್ತೋತ್ಥಾನಾಸನ, ತ್ರಿಕೋನಾಸನ, ಪರಿವೃತ್ತ ತ್ರಿಕೋನಾಸನ, ಪಾಶ್ರ್ವ ಕೋನಾಸನ ಹೇಳಿಕೊಡುವ ಮೂಲಕ ಎಲ್ಲರನ್ನು ಪ್ರಾಯೋಗಿಕವಾಗಿ ತೊಡಗಿಸಲು ಪ್ರಯತ್ನಿಸಿದರು.ಗೂಗಲ್ ಮೀಟ್ ನಲ್ಲಿ ಇದನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು ಪಾಲಕರು ಅನುಸರಿಸಿದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಎಂ ಎಸ್ ರೇವನ್ನವರವರು ಪ್ರಾರ್ಥಿಸಿದರೆ, ಶ್ರೀ ಎಸ್ ಆರ್ ಭಜಂತ್ರಿಯವರು ಸ್ವಾಗತಿಸಿದರು. ಶ್ರೀ ಮಂಜುನಾಥ ಕುಂಬಾರವರು ವಂದಿಸಿದರು, ಶ್ರೀ ಬಿ ಎಸ್ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.

 

ಹೀಗೆ 21-6-2021 ರಂದು ಯೋಗದಿನದಂದು ವಿಶಿಷ್ಟ ರೂಪದಲ್ಲಿ ಈ ಯೋಗ ವೆಬನಾರ್ ಪ್ರಾರಂಭಗೊಂಡಿತು. ಪ್ರತಿದಿನ ಬೆಳಿಗ್ಗೆ ಸರಿಯಾಗಿ 6 ಗಂಟೆಗೆ ಲಿಂಕ್ ಕಳಿಸುವ ಜೊತೆಗೆ ಮತ್ತೊಮ್ಮೆ ಎಲ್ಲರಿಗೂ ನೆನಪಿಸುವ ಕಾರ್ಯ ಶಾಲೆಯ ಶಿಕ್ಷಕ ವೃಂದ ಮಾಡುತ್ತಿದ್ದರು. 6.25 ರಿಂದ ಎಲ್ಲರೂ ವೆಬಿನಾರ ಮೀಟಿಂಗನಲ್ಲಿ ಸೇರಲು ಪ್ರಾರಂಭಿಸುತ್ತಿದ್ದರು 6.35 ಕ್ಕೆ ಸರಿಯಾಗಿ ಪ್ರಾತ್ಯಕ್ಷಿಕೆಯನ್ನು ಶ್ರೀ ವ್ಹಿ ಎಚ್ ಪಾಟೀಲ ಯೋಗ ಮಂತ್ರದೊಂದಿಗೆ ಪ್ರಾರಂಭಿಸಿ ನಂತರ ಸರಳ ವ್ಯಾಯಾಮಗಳನ್ನು ಮಾಡಿಸಿ, ನಿಂತು ಮಾಡುವ ಮತ್ತು ಕುಳಿತು ಮಾಡುವ ಸರಳ ಉಸಿರಾಟ ಕ್ರೀಯೆಗಳಾದ ಪೂರಕ, ರೇಚಕ, ಬಾಹ್ಯ ಮತು ಅಂತಃ ಕುಂಭಕಗಳೊಂದಿಗೆ 1.ಉದರ ಶ್ವಾಸ 2. ಉರ ಶ್ವಾಸ 3. ಗ್ರೀವ ಶ್ವಾಸ 4. ಮಾರ್ಜಾಲ ಶ್ವಾಸ ಮತ್ತು 5. ಶ್ವಾನ ಶ್ವಾಸ ಕ್ರೀಯೆಗಳನ್ನು ಮಾಡಿಸಿದರು. ನಂತರ ಊಧ್ರ್ವ ಹಸ್ತೋತ್ಥಾನಾಸನ, ಅರ್ಧ ಕಟಿ ಚಕ್ರಾಸನ, ಕಟಿ ಚಕ್ರಾಸನ, ಚಕ್ರಸನ, ಪರಿವೃತ್ತ ತ್ರಿಲೋನಾಸನಗಳನ್ನು ಅಭ್ಯಾಸ ಮಾಡಿಸಿ ಮುಂದುವರೆದು…

ಬಾಹ್ಯ ಮತು ಅಂತಃ ಕುಂಭಕಗಳೊಂದಿಗೆ

  1. ಉದರ ಶ್ವಾಸ
  2. ಉರ ಶ್ವಾಸ
  3. ಗ್ರೀವ ಶ್ವಾಸ
  4. ಮಾರ್ಜಾಲ ಶ್ವಾಸ ಮತ್ತು
  5. ಶ್ವಾನ ಶ್ವಾಸ ಕ್ರಿಯೆಗಳನ್ನು ಮಾಡಿಸಿದರು.

ನಂತರ ಊಧ್ರ್ವ ಹಸ್ತೋತ್ಥಾನಾಸನ, ಅರ್ಧ ಕಟಿ ಚಕ್ರಾಸನ, ಕಟಿ ಚಕ್ರಾಸನ, ಚಕ್ರಸನ, ಪರಿವೃತ್ತ ತ್ರಿಲೋನಾಸನಗಳನ್ನು ಅಭ್ಯಾಸ ಮಾಡಿಸಿ ಓಂಕಾರ ಮಂತ್ರ ಹೇಳಿಸಿ ಶವಾಸನದಲ್ಲಿ ವಿಶ್ರಾಂತಿ ನೀಡಿ ಅವದಿಯನ್ನು ಮುಕ್ತಾಯಗೊಳಿಸಿದರು.

ಸತತ ಐದು ದಿನಗಳವರೆಗೆ ಯೋಗಾಭ್ಯಾಸವನ್ನು ಯೋಗ ಮಂತ್ರದೊಂದಿಗೆ ಪ್ರಾರಂಭಿಸುತ್ತಾ ನಂತರ ಕಾವೇರಿಸುವ ಸರಳ ವ್ಯಾಯಾಮಗಳನ್ನು ಮಾಡಿಸಿ, ನಿಂತು ಮಾಡುವ ಮತ್ತು ಕುಳಿತು ಮಾಡುವ ಸರಳ ಉಸಿರಾಟ ಕ್ರಿಯೆಗಳಾದ ಪೂರಕ, ರೇಚಕ, ಬಾಹ್ಯ ಮತು ಅಂತಃ ಕುಂಭಕಗಳೊಂದಿಗೆ

  1. ಉದರ ಶ್ವಾಸ
  2. ಉರ ಶ್ವಾಸ
  3. ಗ್ರೀವ ಶ್ವಾಸ
  4. ಮಾರ್ಜಾಲ ಶ್ವಾಸ ಮತ್ತು
  5. ಶ್ವಾನ ಶ್ವಾಸ ಕ್ರೀಯೆಗಳನ್ನು ಮಾಡಿಸಿದರು.

ನಂತರ ಊಧ್ರ್ವ ಹಸ್ತೋತ್ಥಾನಾಸನ, ಅರ್ಧ ಕಟಿ ಚಕ್ರಾಸನ, ಕಟಿ ಚಕ್ರಾಸನ, ಚಕ್ರಸನ, ಪರಿವೃತ್ತ ತ್ರಿಲೋನಾಸನಗಳನ್ನು ಹಾಗೂ ವೀರಭಧ್ರಾಸನ, ಪ್ರಕಾರ 1,2,3 , ಉತ್ಕಟಾಸನ, ಗರುಡಾಸನ, ಪಾರ್ಶಕೋನಾಸನ, ಕುಳಿತು ಮಾಡುವ ಆಸನಗಳಾದ ಪದ್ಮಾಸನ, ವಜ್ರಾಸನ, ಸೂಪ್ತ ವಜ್ರಾಸನ, ಶಶಾಂಕಾಸನ, ಪಶ್ಚಿಮೋತ್ತಾಸನ, ಸಿಧ್ದ ಬಧ್ದ ಪದ್ಮಾಸನ, ಲೋಲಾಸನ, ಅರ್ಧ ಮತ್ಸೇಂದ್ರಾಸನ, ಗೋಮುಖಾಸನಗಳನ್ನು ಮತ್ತು ಬೆನ್ನಿನ ಮೇಲೆ ಮಲಗಿ ಮಾಡುವ ಆಸನಗಳಾ¸ದ ಉತ್ಥಿತ ಪಾದ ಊರ್ಧ್ವಾಸನ 30 ಪಶ್ಚಿಮೋತ್ತಾಸನ, ಸಿಧ್ದಬಧ್ದ ಪದ್ಮಾಸನ, ಉಷ್ಟ್ರಾಸನ, ಲೋಲಾಸನ, ಅರ್ಧ ಮತ್ಸೇಂದ್ರಾಸನ, ಗೋಮುಖಾಸನಗಳನ್ನು ಮತ್ತು ಬೆನ್ನಿನ ಮೇಲೆ ಮಲಗಿ ಮಾಡುವ ಆಸನಗಳಾದ ಉತ್ಥಿತ ಪಾದ ಊರ್ಧ್ವಸನ 30,60 ಹಾಗೂ 90 ಡಿಗ್ರಿ ಸ್ಥಿತಿಗಳು, ಸರ್ವಾಂಗಾಸನ, ಹಲಾಸನ, ಕರ್ಣ ಪೀಡಾಸನ, ಚಕ್ರಾಸನ, ಮತ್ಸ್ಯಾಸನಗಳನ್ನು ಹಾಗೂ ಹೊಟ್ಟೆಯ ಮೇಲೆ ಮಲಗಿ ಮಾಡುವ ಆಸನಗಳಾದ ಏಕ ಪಾದ ಶಲಭಾಸನ, ದ್ವೀಪಾದ ಶಲಭಾಸನ, ಮಕರಾಸನ, ಧನುರಾಸನ, ಭುಜಂಗಾಸನ ಪ್ರಕಾರ 1.2,3, ಕಲಿಸುತ್ತಾ ಎಲ್ಲರಿಗೂ ತೊಡಗಿಕೊಳ್ಳಲು ತಿಳಿಸುತ್ತಾ ಮಾರ್ಗದರ್ಶನದೊಂದಿಗೆ ನಿಧಾನವಗಿ ಆಸನಗಳಿಗೆ ಅಗತ್ಯಕ್ಕೆ ಅನುಸಾರವಾಗಿ ವಿಶ್ರಾಂತಿಯೊಂದಿಗೆ ಅಭ್ಯಾಸ ಮಾಡಿಸಿದರು. ಓಂಕಾರ ಮಂತ್ರ ಹೇಳಿಸಿ ಶವಾಸನದಲ್ಲಿ ವಿಶ್ರಾಂತಿ ನೀಡುತ್ತಾ ಸತತ ಐದು ದಿನಗಳವರೆಗೆ ಯೋಗಭ್ಯಾಸದಲ್ಲಿ ಶಿಬಿರಾರ್ಥಿಗಳನ್ನು ತೊಡಗಿಸಲು ಪ್ರಯತ್ನಿಸಿದರು.

ಪ್ರತಿ ದಿನವೂ ಶಾಲೆಯ ವಿದ್ಯಾರ್ಥಿಗಳ ಜೊತೆಗೆ ಅವರ ಪಾಲಕರೂ ಅಕ್ಕ ಪಕ್ಕದ ಶಾಲೆಗಳ ಶಿಕ್ಷಕರು ಮೇಲಾಧಿಕಾರಿಗಳೂ ಪಾಲ್ಗೊಳ್ಳುವ ಮೂಲಕ ಸತತ ಐದು ದಿನಗಳ ಕಾಲ ಯೋಗ ವೆಬನಾರ್ ಕೊನೆಯ ದಿನ ಅಂದರೆ ಆರನೆಯ ದಿನ ಸಮಾರೋಪ ಸಮಾರಂಭವನ್ನು ಏರ್ಪಡಿಸಿಕದರು. ಈ ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿನಿ ಕುಮಾರಿ ಚೈತ್ರ ಪೂಜೇರ ಪ್ರಾರ್ಥನಾಗೀತೆ ಹಾಡಿದಳು.ಮಾನ್ಯ ಕ್ಷೇತ್ರ ಶಿಕ್ಷಣಾದಿಕಾರಿಗಳಾದ ಶ್ರೀ ಎ ಎನ್ ಕಂಬೋಗಿಯವರ ಮುಖ್ಯ ಆತಿಥ್ಯದಲ್ಲಿ ವಿಶೇಷ ಉಪನ್ಯಾಸಕರಾಗಿ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು, ಶಾಖೆ ಅಣ್ಣೀಗೇರಿಯ ಶ್ರೀ ಉಮೇಶ ಬಿಲ್ಲದ್ದನ್ನವರ ಭಾಗವಹಿಸಿ “ಮುದ್ರೆಗಳು, ಅವುಗಳ ಪ್ರಯೋಜನಗಳ ಕುರಿತು ತಿಳಿಸಿ, ವಿಭಾಗೀಯ ಪ್ರಾಣಾಯಾಮದ ಕುರಿತು ತಿಳಿಸಿ ಪ್ರಾತ್ಯಕ್ಷಿಕೆ ಮಾಡುವ ಮೂಲಕ” ಎಲ್ಲರನ್ನು ತೊಡಿಸಲು ಪ್ರಯತ್ನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಮುಖ್ಯೋಫಾಧ್ಯಾಯರಾದ ಶ್ರೀ ಕೆ ಜಿ ದಾಸರ ಅವರು ಮಾತನಾಡಿ “ಈ ವೆಬಿನಾರದಲ್ಲಿ ಪ್ರಾತ್ಯಕ್ಷಿತೆಯೊಂದಿಗೆ ಯೋಗಾಭ್ಯಾಸ ಶಿಬಿರ ಯಶಸ್ಸುಗೊಳಿಸಲು ಸಹಕರಿಸಿ ಎಲ್ಲ ಗುರುಬಳಗಕ್ಕೂ, ಇಲಾಖಾ ಹಿರಿಯ ಅಧಿಕಾರಿಗಳಿಗೂ, ವಿದ್ಯಾರ್ಥಿಗಳಿಗೂ, ಪಾಲಕರಿಗೂ ಅಭಿನಂದನೆಗಳನ್ನು ಸಲ್ಲಿಸಿ, ಇದರ ಸದುಪಯೋಗ ಎಲ್ಲರೂ ನಿರಂತರವಾಗಿಸಿಕೊಳ್ಳಬೆಕೆಂದು” ಕಿವಿಮಾತು ಹೇಳಿದರು, ದೈಹಿ ಶಿಕ್ಷಣಾಧಿಕಾರಿ ವೈ.ಎಂ.ಶಿಂಧೆ “ ಸತತ 6 ದಿನಗಳ ಕಾಲ ಗೂಗಲ್ ಮೀಟ್ ಮೂಲಕ ದೈಹಿಕ ಶಿಕ್ಷಕರೊಡಗೂಡಿ ಯರಜರ್ವಿ ಶಾಲೆಯ ಎಲ್ಲ ಗುರುಗಳು ಮತ್ತು ಪ್ರಧಾನ ಗುರುಗಳ ಸಾಂಘಿಕ ಪ್ರಯತ್ನದಿಂದ ಯೋಗದ ಮಹತ್ವ ಸಾರುವ ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು ಮುಂದಿನ ದಿನಗಳಲ್ಲಿ ಪ್ರತಿನಿತ್ಯ ಎಲ್ಲರೂ ಈ ಆ¸ನಗಳನ್ನು ನಿರಂತರವಾಗಿ ಮಾಡುತ್ತ ಶಾರೀರಕವಾಗಿ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವಂತೆ” ಕರೆ ನೀಡಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಎಸ್.ಆರ್.ಭಜಂತ್ರಿ ಶಿಕ್ಷಕರು ಸ್ವಾಗತಿಸಿದರು. ಶ್ರೀ ಬಸವಾಜ ಪಡೆನ್ನವರ ವಂದಿಸಿದರು, ಶ್ರೀ ಬಿ ಎಸ್ ಪಾಟೀಲ ಅವರು ನಿರೂಪಿಸಿದರು.

ನಾನೂ ಕೂಡ ಈ ಆರು ದಿನಗಳ ಕಾಲ ವೆಬನಾರ್‍ದಲ್ಲಿ ಪಾಲ್ಗೊಂಡಿದ್ದೆನು. ನಿಜಕ್ಕೂ ಬಹಳ ಮಹತ್ವಪೂರ್ಣ ಸಂಗತಿಗಳನ್ನು ಯೋಗ ಕುರಿತು ಕಲಿಯಲು ಅವಕಾಶ ಸಿಕ್ಕಂತಾಯಿತು. ಜೀವನದಲ್ಲಿ ಸರಿಯಾದ ದೈಹಿಕ ಮಾನಸಿಕ ಅಧ್ಯಾತ್ಮಿಕ ಯೋಗಕ್ಷೇಮಕ್ಕೆ ಈ ಯೋಗ ಸಹಕಾರಿ. ಬೆಳಿಗ್ಗೆ ಯೋಗ ಮಾಡುವುದರಿಂದ ದೇಹದಲ್ಲಿರುವ ನೋವುಗಳಿಗೆ ಮುಕ್ತಿ ನೀಡುವುದಲ್ಲದೇ ಚಯಾಪಚಯ ಕ್ರಿಯೆಯನ್ನು ಹೆಚ್ಷಿಸುತ್ತದೆ. ಆತಂಕ ಮತ್ತು ಒತ್ತಡವೂ ದೂರವಾಗುತ್ತದೆ. ಇಂತಹ ಯೋಗ ಇಡೀ ದಿನ ಮನಸ್ಸಿಗೆ ಉಲ್ಲಾಸ ಚೈತನ್ಯವನ್ನು ತರುತ್ತದೆ. ಎಲ್ಲರೂ ಯೋಗ ಮಾಡೋಣ ಶಿಕ್ಷಕರ ಈ ಪ್ರಯತ್ನ ಅಲ್ಲಿನ ಮಕ್ಕಳ ಪಾಲಕರ ನಿರಂತರ ಯೋಗ ಕ್ರಿಯೆಯಿಂದಾಗಿ ಯರಜರ್ವಿ ಗ್ರಾಮದ ಜನತೆಗೂ ಹೆಚ್ಚಿನ ಪ್ರಯೋಜನ ನೀಡಲಿ ಎಂದು ಆಶಿಸುವೆನು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!