ಬೆಳಗಾವಿ -_ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಂಹಾತೇಶ ನಗರ ಬೆಳಗಾವಿಯಲ್ಲಿ
ದಿನಾಂಕ 14 .7 .2024.ರಂದು ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಜರುಗಿತು.
ಪ್ರಾರಂಭದಲ್ಲಿ ಶರಣ ಶಂಕರ ಗುಡಸ ಪ್ರಾರ್ಥನೆ ನಡೆಸಿಕೊಟ್ಟರು. ಮಹಾ ತಪಸ್ವಿ ಶ್ರೀ ಕುಮಾರಸ್ವಾಮಿ ಅವರ ಶಿವಯೋಗ ತಂತ್ರಜ್ಞಾನ ಕುರಿತು, ಶರಣ ಸತೀಶ ಸವದಿ .ಅವರು ಉಪನ್ಯಾಸ ನೀಡಿದರು.
ವಿ.ಕೆ. ಪಾಟೀಲ್ಬಿ, .ಪಿ .ಜವನಿ. ಸುವರ್ಣಾ ಗುಡಸ, ಶರಣೆ ಕರಿಕಟ್ಟಿ, ಜಯಶ್ರೀ ಚಾವಲಗಿ, ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.
ಶರಣ ಸತೀಶ್ ಸವದಿ ಅವರು ಮಹಾ ತಪಸ್ವಿ ಶ್ರೀ ಕುಮಾರಸ್ವಾಮಿ ಅವರ ಶಿವಯೋಗ ತಂತ್ರಜ್ಞಾನ ಕುರಿತು ಉಪನ್ಯಾಸ ನೀಡಿದರು.
ಇಂದಿನ ತಂತ್ರಜ್ಞಾನ ವೈಜ್ಞಾನಿಕವಾಗಿ ಮುಂದುವರೆದಿದೆ
ಕಣ್ಣಿನ ಗುಡ್ಡೆ ಬಣ್ಣ, ಹಾಗೂ ಲಿಂಗದ,ಬಣ್ಣ, ಒಂದೇ ಆಗಿದೆ, ನಮ್ಮ ಕಣ್ಣಿಗೆ ಹಾನಿ ಮಾಡಲಾರದು ,ಅದು ನಿಜವಾಗಿ ನೇರಳೆ ಬಣ್ಣವಾಗಿದೆ. ಸ್ಪರ್ಶ, ಘರ್ಷಣೆ ,ವಿದ್ಯುತ್, ವಾಹಕವಾಗುವುದು. ಮಸೂರದಿಂದ ಕೇಂದ್ರೀಕೃತ ಮಾಡಿ ಹಾಳೆಗೆ ಹಿಡಿದಾಗ ಉರಿ ಬರುವುದು. ಹಾಗೆ ನಮ್ಮ ನೇತ್ರವೂ ಸಹ ಲಿಂಗದಲ್ಲಿ ಕೇಂದ್ರೀಕೃತವಾಗಬೇಕು, ಲಿಂಗವೂ ಮಧ್ಯಭಾಗ ಮತ್ತು ಹೆಬ್ಬೆರಳು ಅರ್ಧ ಭಾಗ ಇರಬೇಕು.ಅವರವರ ಅಂಗೈ ಹಾಗೂ ಹೆಬ್ಬೆರಳು ಅವಲಂಬಿಸಿದೆ ಎಂದು ಸದಾಶಿವ ದೇವರಮನಿ .ಅವರು ಮಾತನಾಡಿದರು.
ಸೋಮಶೇಖರ್ ಕತ್ತಿ .ಅವರು ದಾಸೋಹ ಸೇವೆ ನೀಡಿದರು.
ಅಧ್ಯಕ್ಷತೆಯನ್ನು ಈರಣ್ಣ ದೆಯ್ಯನ್ನವರ ವಹಿಸಿದ್ದರು.
ಅನೀಲ ರಘಶೆಟ್ಟಿ, ನೂತನ ದಂಪತಿಗಳು, ಸುಶೀಲ ಗುರವ ,ಬಸವರಾಜ್ ಬಿಜ್ಜರಗಿ, ಬಸವರಾಜ ಗುರುನ ಗೌಡ,
ಸುನಿಲ್ ಸಾನಿಕೋಪ್ಪ, ಶಿವಾನಂದ ನಾಯಕ, ಬಸವರಾಜ ಕರಡಿಮಠ, ಎಂ, ವೈ, ಮೆಣಸಿನಕಾಯಿ. ಅನೀಲ ರಘಶೆಟ್ಟಿ. ರಮೇಶ್ ಕಳಸನ್ನವರ.ಶರಣ ಶರಣೆಯರು ಉಪಸಿತರಿದ್ದರು. ಅನೀಲ ರಘಶೆಟ್ಟಿ ನೂತನ ನವ ದಂಪತಿಗಳಿಗೆ ,ಉಪನ್ಯಾಸಕರಿಗೆ, ದಾಸೋಹಿಗಳಿಗೆ ಸನ್ಮಾನಿಸಲಾಯಿತು
ಆನಂದ ಕಕಿ೯ ನಿರೂಪಿಸಿ ವಂದಿಸಿದರು .