spot_img
spot_img

ಲಿಂಗಾಯತ ಸಂಘಟನೆ ವತಿಯಿಂದ ‘ವಾರದ ಸತ್ಸಂಗ ‘ಮತ್ತು ಉಪನ್ಯಾಸ ಕಾರ್ಯಕ್ರಮ 

Must Read

- Advertisement -

ಲಿಂಗಾಯತ ಸಂಘಟನೆ ಬೆಳಗಾವಿ ವತಿಯಿಂದ ರವಿವಾರ ದಿನಾಂಕ 11 ರಂದು ಬೆಳಗಾವಿ ನಗರದ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ವಾರದ ಸತ್ಸಂಗ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ವಿರೂಪಾಕ್ಷ ದೊಡ್ಡಮನಿ ಅವರು ಮಾತನಾಡಿ ಶರಣರು 12ನೇ ಶತಮಾನದಲ್ಲಿ ಕೊಟ್ಟ ವಚನ ಸಾಹಿತ್ಯ ನಿಜಕ್ಕೂ ನಮ್ಮ ಜೀವನಕ್ಕೆ ಯಾವಾಗಲೂ ನಿತ್ಯ ಸಂಜೀವಿನಿಯಂತೆ ಬಹಳ ಸಹಕಾರಿಯಾಗಿವೆ. ಸತ್ಸಂಗ ಮೂಲಕ ನಾವು ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕಿದೆ . ಕಾಲಕ್ಕೆ ತಕ್ಕಂತೆ ನಮ್ಮ ಸ್ವಾಭಾವಿಕ ವಯಸ್ಸು, ಬದಲಾಗುತ್ತಾ ಹೋಗುತ್ತದೆ. ನಮ್ಮ ಬಣ್ಣ ಬದಲಾದರೂ ಭಾವ ಬದಲಾದಾಗ ಮಾತ್ರ ಬದಲಾವಣೆ ಸಾಧ್ಯ. ಭಾವನೆಗಳಿಗೆ ಇತಿಮಿತಿ ನೀಡುವುದರ ಜೊತೆಗೆ ಮತ್ಸರ ಮರೆತು ಜೀವಿಸಿದಾಗ, ಒಳ್ಳೆಯದನ್ನು ಯೋಚಿಸುತ್ತಾ ಒಳ್ಳೆಯ ಭಾವದೊಂದಿಗೆ ಮುನ್ನಡೆದಾಗ ಜೀವನಕ್ಕೆ ಒಂದು ಅರ್ಥ ಬರುತ್ತದೆ ಎಂದು ಜೀವನ ಮತ್ತು ಸತ್ಸಂಗ ಕುರಿತು ಮಾರ್ಮಿಕವಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸದಾಶಿವ ದೇವರಮನಿ ಸಂಘಟನೆ ವತಿಯಿಂದ ಎಲ್ಲರನ್ನು ಸದ್ಭಾವದಲ್ಲಿ ತೊಡಗಿಸುವ ಕ್ರಿಯೆ ನಿರಂತರವಾಗಿ ಜರುಗುತ್ತಿದೆ ಅದರ ಪ್ರಯೋಜನ ಜನಸಾಮಾನ್ಯರ ನಿತ್ಯ ಜೀವನದಲ್ಲಿ ಅಳವಡಿಕೆಯಾದರೆ ನಮ್ಮ ಕಾರ್ಯ ಫಲಿಸಿದಂತೆ ಎಂದರು.

- Advertisement -

ಕಾರ್ಯಕ್ರಮದಲ್ಲಿ ಶಾಂತಾ ಕಂಬಿ, ಡಾ. ಅ. ಬ. ಇಟಗಿ,ವಿ.ಕೆ ಪಾಟೀಲ, ಪ್ರೇಮಾ ಕೂಂಗಿ, ಮಿನಾಕ್ಷಿ ನಾಡಗೌಡ, ಶಿವಾನಂದ ತಲ್ಲೂರ, ಬಾಬು ತಿಗಡಿ, ರುದ್ರಮ್ಮ ಅಕ್ಕನವರ, ಶಾಂತಮ್ಮ ತಿಗಡಿ, ಸೇರಿದಂತೆ ಸಂಘಟನೆಯ ಸದಸ್ಯರು ಮತ್ತು ನಾಗರಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಎಂ.ವೈ ಮೆಣಸಿನಕಾಯಿ ಸ್ವಾಗತಿಸಿದರು. ಆನಂದ ಕರ್ಕಿ ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

- Advertisement -
- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group