ದಿ. 24 ರಂದು ರವಿವಾರ ಬೆಳಗಾವಿ ನಗರದ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸತ್ಸಂಗ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಂಘಟನೆಯ ನಿರ್ದೇಶಕ ಸತೀಶ ದೇವರಮನಿ ಮಾತನಾಡಿ, ನಮ್ಮನ್ನು ನಾವು ಟೀಕೆ ಮಾಡದೆ ನಾವು ಸಮಾಜಮುಖಿ ಕೆಲಸ ಮಾಡುವಂತೆ ಬದುಕಬೇಕು. ಕಾಲೆಳೆಯುವ ಸಂಸ್ಕೃತಿ ದೂರವಾಗಬೇಕು ಅಂದಾಗ ಮಾತ್ರ ಯಾವುದೇ ಸಮಾಜ ಮುಂದೆ ಬರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶರಣೆ ಕಮಲಾ ಗಣಾಚಾರಿಯವರು ಮಾತನಾಡಿ, ಎಲ್ಲವನ್ನು ಹೊಂದಿದ್ದ ಬುದ್ಧ ಬಸವರು ಸಹ ತಮ್ಮ ವೈಭವದ ಜೀವನವನ್ನು ಬಿಟ್ಟು ಸಮಾಜಮುಖಿ ಕೆಲಸಗಳಿಗೆ ಮುಖಮಾಡಿ ಧರ್ಮ ಮತ್ತು ಸಮಾಜದತ್ತ ತಮ್ಮದೇ ಆದ ವಿಶಿಷ್ಟ ಸೇವೆಯನ್ನು ಒದಗಿಸಿದರು. ನಮ್ಮಲ್ಲಿ ತ್ಯಾಗದ ಮನೋಭಾವ ಬರಬೇಕು. ಬುದ್ಧ ಮತ್ತು ಬಸವರು ಸಂಸಾರದಲ್ಲಿ ಇದ್ದುಕೊಂಡೇ ಸಮಾಜಮುಖಿ ಕೆಲಸಗಳನ್ನು ಸಹ ಮಾಡಿದರು. ಅವರ ಅನುಭವದ ಮಾತುಗಳೇ ನಮಗೆ ಈಗ ವಚನಗಳಾಗಿವೆ. ಆಚರಣೆ ಮಾಡಿ ಬರೆಯುವಂತಾಗಬೇಕು. ಬರವಣಿಗೆ ಕೇವಲ ಯಾಂತ್ರಿಕವಾಗಬಾರದು. ಅವರು ಮಹಿಳಾ ಸಮಾನತೆಗೆ ಅವಕಾಶ ಒದಗಿಸಿದರು. ಮಹಾನುಭಾವರ ತ್ಯಾಗ ನಿಜಕ್ಕೂ ಅನುಕರಣೀಯ ಎಂದರು.
ಕಾರ್ಯಕ್ರಮದಲ್ಲಿ ಸುರೇಶ ನರಗುಂದ,ವಿ. ಕೆ. ಪಾಟೀಲ,ಶಂಕರ ಶೆಟ್ಟಿ ,ನೇತ್ರಾ ರಾಮಪುರೆ,ಕೆಂಪಣ್ಣ ರಾಮಪುರೆ, ಎಂ. ವೈ.ಮೆಣಸಿನಕಾಯಿ,ಬಿ. ಎಂ. ತಿಗಡಿ,ಶಿವಾನಂದ ತಲ್ಲೂರ, ಸಿ ಕೆ. ಕೋಳಿವಾಡ, ಬಿ. ಬಿ. ಮಠಪತಿ ಸೇರಿದಂತೆ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ವಚನಗಾಯನ ವಚನ ವಿಶ್ಲೇಷಣೆ ನೆರವೇರಿತು. ಸಂಗಮೇಶ ಅರಳಿ ಕಾರ್ಯಕ್ರಮವನ್ನು ನಿರ್ವಹಿಸಿ ನಿರೂಪಿಸಿದರು ಕೊನೆಯಲ್ಲಿ ವಚನ ಮಂಗಳ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.