ಸನಾತನ ವೈದಿಕ ಪರಂಪರೆಯಿಂದ ಲೋಕಕ್ಕೆ ಕಲ್ಯಾಣವಾಗುವುದು – ದಂಡಪಾಣಿ ದೀಕ್ಷಿತರು

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಸವದತ್ತಿ: “ಸನಾತನ ವೈದಿಕ ಪರಂಪರೆಯು ಇಂದಿನ ಕೊರೋನಾ ಮಹಾಮಾರಿಯಂಥ ರೋಗ ರುಜಿನಗಳನ್ನು ಹೋಗಲಾಡಿಸಲು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ವೇದ ಪುರುಷನಿಂದ ಯಾವ ಸ್ಥಳದಲ್ಲಿ ಸ್ವರಬದ್ದವಾದ ವೇದ ಮಂತ್ರಗಳ ಉಚ್ಚಾರ ಆಗುತ್ತದೆಯೋ ಆ ಸ್ಥಳ ಶುದ್ದಿಯಾಗುತ್ತದೆ. ಅಂತಹ ಶಕ್ತಿಯನ್ನು ಭಗವಂತ ವೇದಗಳ ಮುಖಾಂತರ ನಮಗೆ ನೀಡಿದ್ದಾನೆ.ಆದ್ದರಿಂದ ಸನಾತನ ವೈದಿಕ ಪರಂಪರೆಯಿಂದ ಲೋಕಕ್ಕೆ ಕಲ್ಯಾಣವಾಗುವುದು. ಎಂದು ಗುರ್ಲಹೊಸೂರಿನ ಚಿದಂಬರೇಶ್ವರ ದೇವಸ್ಥಾನದ ಪೀಠಾಧಿಕಾರಿಗಳಾದ ದಂಡಪಾಣಿ ದೀಕ್ಷಿತರು ಹೇಳಿದರು.

ಅವರು ಗುರ್ಲಹೊಸೂರಿನ ಚಿದಂಬರೇಶ್ವರ ದೇವಸ್ಥಾನದಲ್ಲಿ ನಡೆದ ವೇದ ಶಾಸ್ತ್ರ ಸಂಸ್ಕ್ರತ ಪಾಠಶಾಲೆ ಉದ್ಘಾಟನೆ ಮತ್ತು ಶಂಕರಾಚಾರ್ಯರ ಜಯಂತಿಯ ಶುಭ ದಿನದಂದು ಕಂಚೀ ಕಾಮಕೋಟಿ ಪೀಠದ ಜಗದ್ಗುರುಗಳ ಆಶೀರ್ವಾದದಿಂದ ವೇದ ಸಂರಕ್ಷಣಾ ನಿಧಿ ಟ್ರಸ್ಟ ವತಿಯಿಂದ ಶುಕ್ಲ ಯಜುರ್ವೇದದ ಸಂಸ್ಕ್ರತ ಪಾಠ ಶಾಲೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

- Advertisement -

ಕಾರ್ಯಕ್ರಮದ ಪ್ರಾರಂಭದಲ್ಲಿ ನಟೇಶ ದೀಕ್ಷಿತರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, “ಈ ಸಂಸ್ಕ್ರತ ಪಾಠ ಶಾಲೆಯನ್ನು ಆಡಂಬರದಿಂದ ಪ್ರಾರಂಭಿಸದೆ. ಸರಕಾರದ ಕೋವಿಡ್ ನಿಯಮ ಪಾಲಿಸುವ ಉದ್ದೇಶದಿಂದ ಸಾಂಕೇತಿಕವಾಗಿ ಈ ದಿನ ಶಂಕರಾಚಾರ್ಯರ ಜಯಂತಿಯ ಶುಭದಿನವಾಗಿದ್ದರಿಂದ ಪ್ರಾರಂಭಿಸಿದ್ದೇವೆ” ಎಂದು ಮಾತನಾಡಿದರು. ನೂತನ ಪಾಠಶಾಲೆಯ ಪ್ರಾಧ್ಯಾಪಕರಾದ ಯೋಗೇಶ ಶರ್ಮಾ ಜೋಶಿಯವರು ವೇದಾಧ್ಯಯನ ಪ್ರಾರಂಭಿಸಿದರು.

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!