ಸಾಮಾನ್ಯ ಜ್ಞಾನದಿಂದ ನಮ್ಮನ್ನು ನಾವು ಅರಿತು ನಡೆದರೆ ಕ್ಷೇಮ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಅದ್ವೈತಕ್ಕೂ ದ್ವೈತಕ್ಕೂ ಇರುವ ವ್ಯತ್ಯಾಸವಿಷ್ಟೆ.ಅದ್ವೈತ ನೇರನಡೆ ನುಡಿ, ಸತ್ಯ, ಧರ್ಮದ ಪರವಿರುತ್ತದೆ. ದ್ವೈತ ಮಧ್ಯವರ್ತಿಗಳನ್ನು ಅವಲಂಬಿಸಿರುತ್ತದೆ. ಮಾನವನ ಜೀವನವೇ ಒಂದು ನಾಟಕ. ಇಲ್ಲಿ ನಡೆಸೋ ಮೇಲಿನ ಹಾಗು ಕೆಳಗಿನ ಶಕ್ತಿಗಳ ಕೈಗೊಂಬೆಯಂತೆ ಕುಣಿಯುವ ಜೀವಕ್ಕೆ ತನ್ನ ಸ್ವಾತಂತ್ರ್ಯ ವನ್ನು ಯಾರಿಗಾಗಿ ಬಳಸಿದರೆ ಉತ್ತಮ ಅಧಮ ಎನ್ನುವ ಜ್ಞಾನವೇ ಮುಖ್ಯ.

ವಿಜ್ಞಾನ ಜಗತ್ತಿನಲ್ಲಿ ಮನಸ್ಸಿಗೆ ಬಂದಂತೆ ಹಾರಾಟ, ಹೋರಾಟ ಮಾರಾಟದಲ್ಲಿಯೇ ವ್ಯವಹಾರದಲ್ಲಿ ಮುಳುಗಿರುವ ಮನುಕುಲಕ್ಕೆ ಕಾದಾಟ ಮಾತ್ರ ತಪ್ಪುತ್ತಿಲ್ಲ. ಕಾಡಿ ಬೇಡಿ ಜೀವನ ನಡೆಸೋ ಪರಿಸ್ಥಿತಿ ಹೆಚ್ಚಾಗುತ್ತಿರುವುದರ ಹಿಂದೆ ನಿಂತಿರುವ ಅಗೋಚರ ಶಕ್ತಿಗಳನ್ನು ತಿಳಿಯುವುದಕ್ಕೂ ಸಮಯವಿಲ್ಲವಂತಾಗಿರೋದು ಮನುಕುಲಕ್ಕೆ ದೊಡ್ಡ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ? ಹಾಗಾದರೆ ಇಲ್ಲಿ ವಾಸ್ತವ ಸ್ಥಿತಿಗೆ ಮೂಲ ಕಾರಣವೇನು ಎಂದಾಗ ಅದು ಶಿಕ್ಷಣ ಆಗಿರುತ್ತದೆ.

ಹಾಗಾದರೆ, ಶಿಕ್ಷಣ ಸರಿಪಡಿಸಲು ಸಾಧ್ಯವೆ? ಇದಕ್ಕಾಗಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ಯೋಜನೆ ಹಾಕಿಕೊಂಡಿದೆ. ಈವರೆಗೆ ಮಾಧ್ಯಮಗಳಲ್ಲಿ ಇದರ ಬಗ್ಗೆ ಉತ್ತಮವಾದ ಚರ್ಚೆ ನಡೆಸಿಲ್ಲ. ಶಾಂತಿಯನ್ನು ಬಯಸುತ್ತಿದ್ದ ಹಿಂದೂ ಧರ್ಮ ಈಗ ಕ್ರಾಂತಿಯದಾರಿ ಹಿಡಿದಿರೋದೆ ಶಿಕ್ಷಣದಲ್ಲಿರುವ ರಾಜಕೀಯ ವಿಚಾರಗಳು. ಧಾರ್ಮಿಕ ವಿಚಾರ ಎಂದಾಕ್ಷಣ ನಮಗೆ ಮೊದಲು ಕಾಣೋದು ರಾಮಾಯಣ, ಮಹಾಭಾರತದ ಧರ್ಮ ಯುದ್ದ.ಆದರೆ ಅದರೊಳಗೆ ಅಡಗಿದ್ದ ರಾಜಯೋಗದ ಬಗ್ಗೆ ತಿಳಿಸುವವರು ಹಿಂದುಳಿದವರಾಗಿ ಕಾಣುತ್ತಿರುವುದೆ ಇಲ್ಲಿ ನಾವು ಹಿಂದುಳಿಯುವುದಕ್ಕೆ ಕಾರಣ.

- Advertisement -

ಮಹಾಜ್ಞಾನಿಗಳಾಗಲು ನಮ್ಮಲ್ಲಿ ಜ್ಞಾನವಿರಬೇಕು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಭವದಿಂದ ಸತ್ಯ ತಿಳಿಯಬೇಕು. ತಿಳಿದ ಸತ್ಯವನ್ನು ನಮ್ಮ ಹತ್ತಿರದವರಿಗೆ ತಿಳಿಸೋ ಸ್ವಾತಂತ್ರ್ಯ ನಮಗಿರಬೇಕು. ಸ್ವಾತಂತ್ರ್ಯವಿಲ್ಲದಿದ್ದರೆ ಸತ್ಯ ಹಿಂದುಳಿದು ಮಿಥ್ಯ ಮುಂದೆ ನಡೆಯುವುದು ಸಹಜ. ಇಲ್ಲಿ ಅದ್ವೈತ ದೊಳಗೇ ಅಡಗಿರುವ ದ್ವೈತ ದ ರಾಜಕೀಯದಲ್ಲಿ ಪುರಾಣ, ಇತಿಹಾಸದ ಸತ್ಯವನ್ನು ಪ್ರಚಾರ ಮಾಡುವ ಸ್ವಾತಂತ್ರ್ಯವಿದೆ.

ಆದರೆ, ವಾಸ್ತವತೆಯ ಬಗ್ಗೆ ತಿಳಿಸುವವರನ್ನು ನಿರ್ಲಕ್ಷ್ಯ ಮಾಡಿ,ಲಕ್ಷ ನೀಡುವ‌ ರಾಜಕೀಯಕ್ಕೆ ಸಹಕಾರ ನೀಡಿದರೆ ಸತ್ಯದ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಂತೆ. ರಾಜಪ್ರಭುತ್ವ ದಿಂದ ಪ್ರಜಾಪ್ರಭುತ್ವದ ವರೆಗೆ ನಡೆದು ಬಂದಿರುವ ಮಧ್ಯವರ್ತಿಗಳು ತಮ್ಮ ಜೀವನಕ್ಕಾಗಿ ಮೇಲಿನ ಹಾಗು ಕೆಳಗಿನ ಶಕ್ತಿಗಳನ್ನು ಮುಂದೆ ನಡೆಯದಂತೆ ತಡೆಯುತ್ತಾ ಮಧ್ಯಪ್ರವೇಶ ಮಾಡಿದರೆ ಮನುಕುಲ ಅತಂತ್ರಸ್ಥಿತಿಗೆ ತಲುಪುವುದು ಸಹಜ.

ಇಲ್ಲಿ ಕರ್ಮಯೋಗವೇ ಶ್ರೇಷ್ಠ ಎಂದಿರುವ ಶ್ರೀ ಕೃಷ್ಣ ಪರಮಾತ್ಮನ ರಾಜಕೀಯಕ್ಕೆ ಬೆಲೆಕೊಟ್ಟು ಮುಂದೆ ನಡೆದವರಿಗೆ ದ್ವೈತ ದ ಭಿನ್ನಾಭಿಪ್ರಾಯ, ದ್ವೇಷ, ಅಸೂಯೆಗಳೇ ತುಂಬಿಕೊಂಡರೆ, ಅವರಲ್ಲಿದ್ದ ರಾಜಯೋಗದ ಸೂಕ್ಷ್ಮ ಸತ್ಯದ ಅರ್ಥ ಆಗೋದಿಲ್ಲ. ಒಟ್ಟಿನಲ್ಲಿ ಅದ್ವೈತ ಶ್ರೇಷ್ಠ ಅದ್ವೈತಿಗಳಲ್ಲ.ಕಾರಣ ನಾನು ಅಧ್ವೈತಿ ಎನ್ನುವುದರಲ್ಲಿಯೇ ದ್ವೈತದ ನಾನೇ ಬೇರೆ ನೀನೇ ಬೇರೆ ಎಂಬುದಿದೆ.

ಇಲ್ಲಿ ಮಧ್ಯವರ್ತಿಗಳು ಹೆಚ್ಚು. ತತ್ವದ ಉದ್ದೇಶ ನೇರವಾಗಿ ಸತ್ಯದಲ್ಲಿ ಸರಳವಾಗಿ, ಸ್ವತಂತ್ರ ಜ್ಞಾನದಿಂದ, ಸ್ವಾವಲಂಬನೆ, ಸ್ವಾಭಿಮಾನ ದಿಂದ ನಡೆಯುವುದಾಗಿತ್ತು.ಇದನ್ನು ಶ್ರೀ ಶಂಕರಾಚಾರ್ಯರ ಜೀವನ ಚರಿತ್ರೆ ತಿಳಿಸುತ್ತದೆ. ಹಾಗೆ ಇನ್ನೂ ಎಷ್ಟೋ ಸಂನ್ಯಾಸಿಗಳು ಸ್ವತಂತ್ರ ವಾಗಿ ಮುಂದೆ ನಡೆದು ಸಮಾಜದಲ್ಲಿ ಧರ್ಮ ಸ್ಥಾಪಕರಾಗಿದ್ದಾರೆ.

ಹಾಗೆ ಬಸವಣ್ಣನವರ ಕಾಯಕವೇ ಕೈಲಾಸದಲ್ಲಿರುವ ಕರ್ಮ ಯೋಗವನ್ನು ನಾವೀಗ ಪ್ರಜಾಪ್ರಭುತ್ವದ ಸಾಮಾನ್ಯ ಪ್ರಜೆಗಳಾಗಿದ್ದು ಯಾವ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದೇವೆಂದು ತಿಳಿದರೆ ನಮ್ಮಲ್ಲೇ ಇರುವ ದೋಷವನ್ನು ಸರ್ಕಾರ ಸರಿಪಡಿಸಬಹುದೆ? ಸರ್ಕಾರ ಎಂದರೆ ಸಹಕಾರ ಎಂದರ್ಥ. ಯಾರೋ ಹೇಳಿದ್ದಾರೆ, ಮಾಡಿದ್ದಾರೆ, ನಡೆದಿದ್ದಾರೆ, ಅನುಭವಿಸಿದ್ದಾರೆ, ಬರೆದಿದ್ದಾರೆ ಎನ್ನುವುದನ್ನು ಮಧ್ಯೆ ನಿಂತು ಪ್ರಚಾರಮಾಡಿ ನಾನೇ ಹೇಳಿರುವುದು,ಬರೆದಿರೋದು ಎಂದರೆ ಇದು ದ್ವೈತ ವಲ್ಲವೆ? ಪ್ರಚಾರ ಮಾಡೋದು ತಪ್ಪಲ್ಲ.

ಆದರೆ, ಅದರಿಂದ ಸಮಾಜದಲ್ಲಿ ಯಾವ ರೀತಿಯಲ್ಲಿ ಬದಲಾವಣೆ ಆಗುತ್ತದೆ ಧರ್ಮ ಸತ್ಯದ ರಕ್ಷಣೆ ಆಗುತ್ತದೆ ಎನ್ನುವ ಜ್ಞಾನವಿದ್ದರೆ ಉತ್ತಮ. ಇಲ್ಲಿ ಅಧರ್ಮ,ಅನ್ಯಾಯ, ಅಸತ್ಯ,ಭ್ರಷ್ಟಾಚಾರ ದಿಂದ ಎಷ್ಟೇಆ ಸ್ತಿ,ಅಂತಸ್ತು, ಅಧಿಕಾರ ಪಡೆದರೂ ಕಾನೂನಿನಲ್ಲಿ ರಕ್ಷಣೆ ಸಿಗುವಂತೆ ಮಾಡುವ ಅನ್ಯಾಯಾಧೀಶರೂ ಇದ್ದರೆ ಜನಸಾಮಾನ್ಯರಿಗೆ ಬದುಕಲು ಸಾಧ್ಯವೆ? ಇತಿಮಿತಿಗಳನ್ನು ಮಾನವ ಕಲಿಯಬೇಕಾದರೆ ಅವನಿಗೆ ಜೀವನದ ಮೂಲ ಉದ್ದೇಶ ವನ್ನು ತಿಳಿಸುವ ಶಿಕ್ಷಣ ಸಿಗಬೇಕು.

ಈಗಲೂ ಧಾರ್ಮಿಕ ಕ್ಷೇತ್ರದಲ್ಲಿ ಶಿಕ್ಷಣದಿಂದ ಭಾರತೀಯತೆಯನ್ನು ಬೆಳೆಸಬಹುದು. ಮಾನವೀಯತೆ ಅದಕ್ಕಿಂತ ದೊಡ್ಡದು. ನಮ್ಮವರ ಸತ್ಯವನ್ನು ತಿರಸ್ಕರಿಸಿ ವಿದೇಶದವರೆಗೆ ಪುರಾಣಸತ್ಯವನ್ನು ತಿಳಿಸಿದರೂ ತಿರುಗಿ ಬರೋವಾಗ ನಮ್ಮವರೆ ಶತ್ರುಗಳಾಗಿ ಎದುರು ನಿಂತರೆ ಮೂಲ ತಲುಪಲಾಗುವುದೆ ಪ್ರತಿಯೊಬ್ಬರಿಗೂ ತಮ್ಮದೆ ಆದ ಸ್ವತಂತ್ರ ಜ್ಞಾನವಿರುತ್ತದೆ. ಅದನ್ನು ಗುರುತಿಸದೆ ಪರರ ಜ್ಞಾನವನ್ನು ತಲೆಗೆ ತುಂಬುತ್ತಾ ಹೋದಂತೆ ಪರರ ವಶವಾಗಿ ತನ್ನತನವನ್ನು ಮರೆತು ಭೌತಿಕದಲ್ಲಿ ಕಣ್ಣಿಗೆ ಕಂಡದ್ದೇ ಸತ್ಯ ಶಾಶ್ವತವೆಂದು ನಡೆಯುವುದು ಮಾನವ.

ಮಾನವನಿಗೆ ಮಹಾತ್ಮನಾಗಲು ತೋರಿಸುವುದು ಆಧ್ಯಾತ್ಮ. ಆಧ್ಯಾತ್ಮ ಎಂದರೆ ಆದಿ ಆತ್ಮ. ಇದರಿಂದ ರಾಜಯೋಗ ಸಿಗುತ್ತದೆ. ಯಾವಾಗ ಭೌತಿಕದಲ್ಲಿ ರಾಜಕೀಯ ಹೆಚ್ಚಾಯಿತೋ ಆಗಲೇ ಒಳಗಿದ್ದ ರಾಜಯೋಗ ಕುಸಿಯಿತು. ವಿವೇಕಾನಂದರನ್ನು ತಿಳಿದು ಅನುಸರಿಸಿದವರು ವಿರಳ. ಅವರ ಭಾಷಣವನ್ನು ಪ್ರಚಾರ ಮಾಡೋದು ಸರಳ. ವಿವೇಕದಿಂದ ಜೀವನ ನಡೆಸೋದು ಕಷ್ಟ. ನರೇಂದ್ರರು ವಿವೇಕಾನಂದರಾಗಿದ್ದು ಅವರ ಆತ್ಮಬಲದಿಂದ. ದೇಶಭಕ್ತಿ ಅವರ ಕಾಲದಲ್ಲಿದ್ದ ಬ್ರಿಟಿಷ್ ಸರ್ಕಾರದ ಅಧರ್ಮ, ಅನ್ಯಾಯವನ್ನು ನೋಡಿ ಸಹಿಸಿಕೊಳ್ಳಲಾಗದೆ ಎಚ್ಚರವಾಗಿತ್ತು.

“ಏಳಿ ಎದ್ದೇಳಿ ಗುರಿ ತಲುಪವರೆಗೆ ನಿಲ್ಲದಿರಿ” ಇದರರ್ಥ ಮಾನವ ತನ್ನ ಆತ್ಮರಕ್ಷಣೆಗಾಗಿ ಹೋರಾಟ ಮಾಡಿ ಎಂದಾಗಿತ್ತು. ಈಗ ದೇಶದೊಳಗಿನವರಲ್ಲಿಯೇ ಆತ್ಮಜ್ಞಾನದ ಕೊರತೆಯಿದೆ. ಇದನ್ನು ಸರಿಪಡಿಸಲು ಜ್ಞಾನದ ಶಿಕ್ಷಣದ ಅಗತ್ಯವಿದೆಯೇ ಹೊರತು ವಿಜ್ಞಾನದ ಅಗತ್ಯವಿಲ್ಲ. ಸಾಮಾನ್ಯಜ್ಞಾನದ ಅಗತ್ಯವಿದೆ. ಮಧ್ಯವರ್ತಿಗಳು ಮೊದಲು ನಾವ್ಯಾರು ಎಲ್ಲಿರುವುದು? ಯಾಕಿರುವುದು? ಯಾರಿಂದ ನಮ್ಮ ಜೀವನ ನಡೆದಿದೆ? ಮುಂದೆ ಏನಾಗುವುದು?ಎಲ್ಲಾ ವಿಚಾರವನ್ನು ಆಂತರಿಕವಾಗಿ ಪ್ರಶ್ನೆ ಹಾಕಿಕೊಂಡು ತಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆಯಲಾಗಿದೆಯೆ ಎನ್ನುವ ಸತ್ಯ ತಿಳಿದಾಗಲೆ ಸ್ಥಿತಿಗೆ ಕಾರಣದ ಜೊತೆಗೆ ಪರಿಹಾರವೂ ಸಿಗುತ್ತದೆ.

ಭಾರತೀಯರಾಗಿ ವಿದೇಶಿಗಳ ವ್ಯವಹಾರಕ್ಕೆ ಸಹಕರಿಸುತ್ತಾ ದೇಶವನ್ನೇ ಸ್ಮಾರ್ಟ್ ಮಾಡಲು ಸಾಲದ ಮೊರೆ ಹೋದರೆ ಸಾಲದ ಅರ್ಥ ಆಧ್ಯಾತ್ಮದ ಪ್ರಕಾರ ಋಣ ವಾಗುತ್ತದೆ. ಜೀವಕ್ಕೆ ಶಾಂತಿ ಮುಕ್ತಿ ಸಿಗಲು ಋಣಮುಕ್ತರಾಗಬೇಕೆನ್ನುವ ಆಧ್ಯಾತ್ಮ ಇಂದು ಋಣ ಏರಿಸುವ ರಾಜಕೀಯಕ್ಕೆ ಸಹಕರಿಸಿದರೆ ರಾಜಯೋಗದ ಗತಿ ಅಧೋಗತಿ. ನಿಜ, ಸೂಕ್ಷ್ಮ ಸತ್ಯಕ್ಕೆ ಜ್ಞಾನಬೇಕು.

ಜ್ಞಾನ ಒಳಗಿದೆ. ಹೊರಗಿನ ಜ್ಞಾನ ತಾತ್ಕಾಲಿಕ ಹೀಗಾಗಿ, ಎರಡನ್ನೂ ಸರಿಸಮನಾಗಿ ಅರ್ಥ ಮಾಡಿಕೊಂಡು ಜೀವನ ನಡೆಸುವುದೇ ಮಾನವನಿಗೆ ಶ್ರೇಯಸ್ಕರವಾಗಿದೆ. ಅದ್ವೈತದೊಳಗಿರುವ ದ್ವೈತ ವನ್ನು ಗುರುತಿಸಿಕೊಂಡು ತತ್ವಜ್ಞಾನವನ್ನು ಅರ್ಥ ಮಾಡಿಕೊಂಡು ತಂತ್ರಜ್ಞಾನದಿಂದ ನಮಗೆಷ್ಟು ಸಾಧ್ಯವೋ ಅಷ್ಟು ಸ್ವತಂತ್ರ ಜ್ಞಾನದೆಡೆಗೆ ನಡೆಯೋ ಪ್ರಯತ್ನ ಮಾನವ ಮಾಡಬಹುದು.ಇಲ್ಲಿ ಯಾರೂ ಹಿಂದಿನ ಕಾಲದಲ್ಲಿದ್ದಂತೆ ಸರ್ವಜ್ಞರಾಗೋಲ್ಲ.ಎಲ್ಲಾ ಹಿಂದೆ ತಿರುಗಿ ನೋಡದೆ ಮುಂದೆ ನಡೆದ ವಿಜ್ಞಾನಿಗಳು.

ಸಾಮಾನ್ಯಜ್ಞಾನದಿಂದ ನಮನ್ನು ನಾವರಿತು ನಡೆದರೆ ಕ್ಷೇಮ. ಒಬ್ಬರ ಹಿಂದೆ ಒಬ್ಬರು ನಡೆಯುತ್ತಿರುವಾಗ ಮಧ್ಯೆ ಬಂದು ದಾರಿ ತಪ್ಪಿಸುವವರ ಬಗ್ಗೆ ಎಚ್ಚರವಾಗಿದ್ದರೆ ಉತ್ತಮ.ಸನ್ಮಾರ್ಗ, ಸತ್ಯ,ಧರ್ಮ ನಮ್ಮೊಳಗಿನ ಜ್ಞಾನಕ್ಕೆ ಹೊಂದಿಕೆಯಾದರೆ ಅದ್ವೈತ. ಇಲ್ಲವಾದರೆ ದ್ವೈತ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!