ಜನರ ಸೇವೆಗೆ ಹೋದವರು ಮರಳಿ ಬರಲೇ ಇಲ್ಲ – ಮಂಗಳಾ ಅಂಗಡಿ ಕಣ್ಣೀರು

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಮೂಡಲಗಿ – ಕೊರೋನಾ ಸಮಯದಲ್ಲಿ ದೇಶದ ಜನರಿಗೆ ತುಂಬಾ ತೊಂದರೆಯಾಗಿದ್ದನ್ನು ಕಂಡ ನನ್ನ ಪತಿ ಸುರೇಶ ಅಂಗಡಿಯವರು ಎಷ್ಟು ಹೇಳಿದರೂ ಕೇಳದೆ ಜನರ ಸೇವೆಗೆ ಹೋದವರು ಮರಳಿ ಬರಲೇ ಇಲ್ಲ ಎಂದು ಬೆಳಗಾವಿ ಸಂಸದೀಯ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶ್ರೀಮತಿ ಮಂಗಳಾ ಅಂಗಡಿಯವರು ಕಣ್ಣೀರಾದರು.

ಲೋಕಸಭೆಯ ಬೆಳಗಾವಿ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದ ಅವರು ಮಾಜಿ ಸಂಸದ ಹಾಗೂ ಅವರ ಪತಿ ದಿ. ಸುರೇಶ ಅಂಗಡಿಯವರನ್ನು ನೆನೆದು ಭಾವುಕರಾದರು.
ರಾಜ್ಯಕ್ಕೆ ಬರಬೇಕಾದ ಯಾವುದೇ ಯೋಜನೆಗಳಲ್ಲಿ ಸುರೇಶ ಅಂಗಡಿಯವರ ಪಾತ್ರ ಪ್ರಮುಖವಾಗಿತ್ತು ಅದೇ ರೀತಿ ನಾನೂ ತಮ್ಮ ಸೇವೆ ಮಾಡಲು ಬಹುಮತದಿಂದ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ನಾಲ್ಕು ಸಲ ಸಂಸದರಾಗಿದ್ದ ಸುರೇಶ ಅಂಗಡಿಯವರು ಜನಪ್ರಿಯ ನಾಯಕರಾಗಿದ್ದರು. ರೈಲ್ವೇ ಸಚಿವರಾಗಿದ್ದ ಅವರು ಅನೇಕ ಹೊಸ ಯೋಜನೆಗಳನ್ನು ರಾಜ್ಯಕ್ಕೆ ತಂದರು. ೫೭೦೦೦ ಕೋಟಿ ರೂ.ಗಳನ್ನು ರೈಲ್ವೇಗಾಗಿ ರಾಜ್ಯಕ್ಕೆ ತಂದ ಮೊದಲ ಸಂಸದರೆಂದರೆ ಸುರೇಶ ಅಂಗಡಿಯವರು. ಅವರ ರೀತಿಯಲ್ಲಿಯೇ ಕೆಲಸ ಕಾರ್ಯಗಳು ಆಗಬೇಕಾದರೆ ಅವರ ಪತ್ನಿ ಮಂಗಳಾ ಅವರನ್ನು ನೀವು ಬೆಂಬಲಿಮುಖ್ಯವಾಗಿದೆ ಎಂದರು..

- Advertisement -

ಸಚಿವ ಬೈರತಿ ಬಸವರಾಜ – ಸುರೇಶ ಅಂಗಡಿಯವರು ವಿಮಾನ ನಿಲ್ದಾಣ, ರೈಲ್ವೆ ಸೌಲಭ್ಯಗಳಂಥ ಅನೇಕ ಕೆಲಸಗಳನ್ನು ಮಾಡಿದ್ದರು. ಅವರಂತೆಯೇ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ಆಗಬೇಕಾದರೆ ಶ್ರೀಮತಿ ಮಂಗಳಾ ಅವರ ಆಯ್ಕೆ ಬಹು ಮುಖ್ಯವಾಗಿದೆ.

ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಕೊರೋನಾ ಕಾಲದಲ್ಲಿಯೂ ಜನರ ಸೇವೆಗಾಗಿ ಮನೆಯಿಂದ ಹೊರ ಹೊರಟ ಸುರೇಶ ಅಂಗಡಿಯವರನ್ನು ನಾವು ಕಳಕೊಳ್ಳಬೇಕಾಯಿತು. ಕಾಂಗ್ರೆಸ್ ಪಕ್ಷವು ಪಿತೂರಿಯಲ್ಲಿ ತೊಡಗಿದ್ದು ಅಂಥ ಪಕ್ಷವನ್ನು ಬೆಂಬಲಿಸದೇ ರಾಮ ಪಕ್ಷವಾಗಿರುವ ಬಿಜೆಪಿಯ ಸಿದ್ಧಾಂತಕ್ಕೆ ಬೆಂಬಲ ಕೊಡಬೇಕು. ಇಡಿ ವಿಶ್ವವೇ ಮೆಚ್ಚಿರುವ ನರೇಂದ್ರ ಮೋದಿಯವರ ನೇತೃತ್ವದ ಪಕ್ಷಕ್ಕೆ ಮತ ನೀಡಿ ಆ ಮೂಲಕ ಮೋದಿಯವರನ್ನು ಬೆಂಬಲಿಸಬೇಕು ಎಂದರು.
ಈ ಮುಂಚೆ ಬಾಬು ಜಗಜೀವನರಾಮ್ ಅವರ ಜಯಂತಿಯ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ, ಅಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ, ಸಂಜಯ ಪಾಟೀಲ,ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶಶಿಕಾಂತ ಪಾಟೀಲ, ಮಹಾದೇವ ಶೆಕ್ಕಿ, ಮಹೇಶ ಟಿಂಗಿನಕಾಯಿ, ಬಸವರಾಜ ಯಂಕಂಚಿ, ಲಕ್ಷ್ಮಣ ಉಪ್ಪಾರ, ಎಂ ಎಲ್ ಮುತ್ತೆನ್ನವರ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ನಾಗಪ್ಪ ಶೇಖರಗೋಳ ಉಪಸ್ಥಿತರಿದ್ದರು.

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!