ಸಿಂದಗಿ; ನಾವು ಹುಟ್ಟಿದ ನಾಡು ಹೆತ್ತ ತಾಯಿಗೆ ಸಮ ನಮ್ಮ ನಾಡು ನಮ್ಮ ನುಡಿ ನಮ್ಮ ಭಾಷೆೆ ಎಂದೆಂದಿಗೂ ಮರೆಯಬಾರದು ಎಂದು ಹೇಳುತ್ತಿರುವ ಕರ್ನಾಟಕದಲ್ಲಿ ಕನ್ನಡ ಉಗಮದ ಬಗ್ಗೆ ಮಾತನಾಡಿದರೆ ಸಾಲದು ಇತ್ತ ಬೆಳಗಾವಿ ಮರಾಠಿಗರ, ಅತ್ತ ಬೆಂಗಳೂರಲ್ಲಿ ತಮಿಳರ ಪ್ರಾಬಲ್ಯದಿಂದ ಕನ್ನಡ ಭಾಷೆ ನಲುಗಿಹೋಗುತ್ತಿರುವ ಬಗ್ಗೆ ಚಿಂತನೆ ನಡೆಯಬೇಕಲ್ಲದೆ ಪಾಶ್ಚಿಮಾತ್ಯರ ಓಲೈಕೆಯಿಂದ ಕನ್ನಡ ಭಾಷೆಗೆ ಹಿನ್ನಡೆಯಾಗುತ್ತಿದೆ ಎಂದು ನಿವೃತ್ತ ಪೊಲೀಸ ಅಧಿಕಾರಿ ಎಂ.ಎಂ.ಹಂಗರಗಿ ವಿಷಾದ ವ್ಯಕ್ತಪಡಿಸಿದರು.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿ, ಮೈಸೂರು ರಾಜ್ಯ ಒಂದೇ ಹೆಸರು ಸೀಮಿತವಾಗಬಾರದು ಎಂದು ದಿ.ಡಿ.ದೇವರಾಜ ಅರಸರು ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ ಎನ್ನುವಂತೆ ಕರ್ನಾಟಕ ಏಕೀಕರಣ ಮಾಡಿದ್ದು ಸ್ವಾಗತಾರ್ಹವಾಗಿದೆ ಆದರೆ ಕನ್ನಡ ಉಳಿವಿಗೆ ಅನೇಕ ಮಹನೀಯರ ಕೊಡುಗೆ ಅಪಾರವಾಗಿದ್ದು ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ ಅದನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಬಳ್ಳಾರಿ, ಬೀದರ ಜಿಲ್ಲೆಗಳಿಗೆ ತೆಲಂಗಾಣ, ಬೆಳಗಾವಿ, ಧಾರವಾಡ, ಕೊಂಕಣಿ, ಮರಾಠಿಗರ, ಮಂಗಳೂರು, ಕೊಡಗು, ಮಂಡ್ಯ, ಮಡಿಕೇರಿ, ತುಳು, ತಮಿಳು ಸೇರಿದಂತೆ ಹಲವು ಭಾಷಿಕರ ಪ್ರಾಬಲ್ಯ ಹೆಚ್ಚಾಗಿ ಪಾಶ್ಚಿಮಾತ್ಯ ರಾಜ್ಯಗಳ ಜನರಿಗೆ ಪ್ರಾಶಸ್ತ ನೀಡಿ ಕನ್ನಡಿಗರು ಓಲೈಕೆಗೆ ಪಾತ್ರರಾಗಿ ಕನ್ನಡ ನಲುಗಿ ಹೋಗಿದ್ದು ಕಾರಣ ಈ ರಾಜ್ಯಗಳಲ್ಲಿ ಅನ್ಯ ಭಾಷಿಕರ ಅಟ್ಟಹಾಸ ಅಡಗಿಸಲು ಕನ್ನಡ ಪತ್ರಿಕೆಗಳ ಹೋರಾಟ, ಪೊಲೀಸರ ರಕ್ಷಣೆಯಿಂದ ಕನ್ನಡ ಉಳಿದಿದೆ. ಕನ್ನಡ ಉಳಿವಿಗೆ ರಾಜಕಾರಣಿಗಳು, ಸಾಹಿತಿಗಳು, ಕನ್ನಡಪರ ಸಂಘಟನೆಗಳು ಪ್ರಗತಿಪರ ಚಿಂತಕರು ಬರೀ ಬಾಷಣದಲ್ಲಿ ಮಾತನಾಡದೇ ಕಾರ್ಯರೂಪದಲ್ಲಿ ಪ್ರಯತ್ನಿಸಿದ್ದಾಗ ಮಾತ್ರ ಕನ್ನಡ ಅಸ್ತಿತ್ವದಲ್ಲಿ ಉಳಿಯಲು ಸಾಧ್ಯ ಇಲ್ಲದಿದ್ದರೆ ಕನ್ನಡವನ್ನು ದಾಖಲೆಗಳಲ್ಲಿ ನೋಡುವ ಪ್ರಸಂಗ ದೂರ ಉಳಿಯದು ಎಂದಿದ್ದಾರೆ ಕಾರಣ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎನ್ನುವ ನುಡಿ ಎಲ್ಲರು ಕೈಜೋಡಿಸಬೇಕು ಎಂದು ಒತ್ತಾಯಿಸಿದರು.