spot_img
spot_img

ಅದ್ವೈತ ಸಿದ್ದಾಂತ ಎಂದರೇನು? ಅದ್ವೈತ ಸಿದ್ಧಾಂತದ ತತ್ವಗಳು

Must Read

- Advertisement -

ಭೇದರಹಿತವಾದ ತತ್ವ, ಹಲವನ್ನು ಒಂದು ಮಾಡುವ ತತ್ವ, ಅಹಂಕಾರವನ್ನು ಬಿಟ್ಟು ನಡೆಯುವ ತತ್ವ, ರಾಜಕೀಯದಿಂದ ದೂರವಿದ್ದು ರಾಜಯೋಗದೆಡೆಗೆ ನಡೆಸುವ ತತ್ವ, ಭೂಮಿಯಲ್ಲಿ ಶಾಂತಿ, ಸಮಾನತೆ, ಸತ್ಯಧರ್ಮ, ನ್ಯಾಯ, ನೀತಿ, ಸಂಸ್ಕೃತಿ, ಸಂಪ್ರದಾಯ, ಧರ್ಮದ ಉದ್ದೇಶ, ಪರಾಶಕ್ತಿಯನ್ನರಿತು ಎಲ್ಲರೊಳಗಿರುವ ಆ ಪರಮಾತ್ಮ ತತ್ವವನ್ನು ಬೆಳೆಸುವ ತತ್ವ.

ಭಾರತವನ್ನು ಭಾರತೀಯರಾಗಿದ್ದು ಬೆಳೆಸಿದರೆ ಅದ್ವೈತ, ವಿದೇಶಿಗರು ಬೆಳೆಸಿದರೆ ದ್ವೈತ. ಈಗಿನ ನಮ್ಮ ಪರಿಸ್ಥಿತಿಗೆ ಕಾರಣವೆ. ಭಾರತೀಯ ಶಿಕ್ಷಣವು ಹಿಂದುಳಿದು,ವಿದೇಶಿ ಶಿಕ್ಷಣವನ್ನು ಬೆಳೆಸಿರುವ ಭಾರತೀಯರು.

ಇಲ್ಲಿ ಅದ್ವೈತ ತತ್ವವನ್ನು ಶಿಕ್ಷಣದಿಂದ ಬೆಳೆಸಬೇಕಾದರೆ, ಧಾರ್ಮಿಕ ಕ್ಷೇತ್ರದವರು ಶಿಕ್ಷಣವನ್ನು ನೇರವಾಗಿ ಜನಸಾಮಾನ್ಯರವರೆಗೆ ತಲುಪಿಸಿ ಬೆಳೆಸಿದರೆ ಸಾಧ್ಯವಿದೆ. ಇದಕ್ಕೆ ಪ್ರಜೆಗಳಾದ ಭಾರತೀಯರು ಸಹಕರಿಸುವುದೆ ಪ್ರಜಾಧರ್ಮ.

- Advertisement -

ಧರ್ಮದಲ್ಲಿಯೇ ಭಿನ್ನಾಭಿಪ್ರಾಯ ಹುಟ್ಟಿರುವಾಗ ದೇಶ ಒಂದು ಕಾಣೋದಿಲ್ಲ.ಅದ್ವೈತ ತತ್ವದ ಪ್ರಕಾರ ಈಗಿನ ಪರಿಸ್ಥಿತಿಗೆ ತತ್ವದಲ್ಲಿಯೇ ರಾಜಕೀಯ ಬೆರೆತುಹೋಗಿದೆ. ತತ್ವಜ್ಞಾನ ಹೋಗಿ ತಂತ್ರಜ್ಞಾನದ‌ ಶಿಕ್ಷಣ ಎಲ್ಲರೊಳಗಿದೆ.

ಒಳಗಿನ ತತ್ವಕ್ಕೆ ವಿರುದ್ದವಾಗಿ ತಂತ್ರಶಕ್ತಿ ಬೆಳೆಸಿಕೊಂಡು ಯಾರನ್ನೂ ಆಳಲು ಹೋಗಿ ನಾವೇ ಆಳಾಗಿ ನಿಂತರೆ ಸ್ವಾತಂತ್ರ್ಯವನ್ನು ಎಲ್ಲಿಂದ ಪಡೆಯಬೇಕು? ಇದನ್ನು ನಾನೇ ಮಾಡಿಕೊಂಡೆನೋ? ನಾವು ಮಾಡಿಕೊಂಡೆವೋ? ನಾನೆಂಬುದಿಲ್ಲ ಎನ್ನುವ ಅದ್ವೈತ ತತ್ವವನ್ನು ಸರಳವಾಗಿ ಸುಲಭವಾಗಿ ತಿಳಿದು ನಡೆಯಲು ಮಕ್ಕಳಿಗೆ ಅವರವರ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಜ್ಞಾನ,ಪ್ರತಿಭೆಗೆ ತಕ್ಕಂತೆ ಸ್ವಾವಲಂಬನೆ ಯ ಶಿಕ್ಷಣ ನೀಡಿ ಬೆಳೆಸಿದರೆ ಒಳಗಿನ ಸತ್ಯವೆ ದೇವರಾಗಿ ಕಾಣುತ್ತಾನೆ.

ಪರಮಾತ ಇರೋದು ಪರದೇಶದಲ್ಲಲ್ಲ. ಸ್ವದೇಶದಲ್ಲಿ ಕಾಣದ ದೇವರನ್ನು ಪರದೇಶದಲ್ಲಿ ಹುಡುಕಿಕೊಂಡು ಹೋಗಿ, ಸ್ವಧರ್ಮ ಕರ್ಮದಲ್ಲಿಯೇ ರಾಜಕೀಯ ಬೆರೆಸಿ ಸಾಮಾನ್ಯಜ್ಞಾನವನ್ನು ಮರೆತು ಹೊರನಡೆದವರ ಹಿಂದೆ ನಡೆದವರಿಗೆ ಸಿಕ್ಕಿರುವುದು ಅಜ್ಞಾನದ ಜೀವನವಷ್ಟೆ.

- Advertisement -

ತತ್ವಜ್ಞಾನಿಗಳ ನಡೆ ನುಡಿಯ ಒಂದಂಶ ನಾವು ಹಿಡಿದು ನಡೆದರೆ ನಮ್ಮೊಳಗಿನ ಪರಮಾತ್ಮನ ಅರಿವಾಗುತ್ತದೆ.ಆತ್ಮಜ್ಞಾನ ಹೊರಗಿನಿಂದ ಓದಿ, ಕೇಳಿ ಪಡೆಯುವುದು ತಾತ್ಕಾಲಿಕವಾದರೆ, ಒಳಗಿನಿಂದ ತಿಳಿದು ಅಳವಡಿಸಿಕೊಂಡು ಸತ್ಯ ಅರ್ಥ ಮಾಡಿಕೊಳ್ಳಲು ಪ್ರಜಾಪ್ರಭುತ್ವದ ಸಾಮಾನ್ಯಪ್ರಜೆಗಳಿಗೆ ಮಾತ್ರ ಸಾಧ್ಯ.

ಕಾರಣವಿಷ್ಟೆ, ಅದ್ವೈತ ದಲ್ಲಿ  ರಾಜಕೀಯತೆ,ಅಧಿಕಾರ,ಹಣ,ಸ್ಥಾನ ಮಾನ ಇರೋದಿಲ್ಲ ಇಲ್ಲಿ ಎಲ್ಲರೂ ಎಲ್ಲವೂ ಪರಮಾತ್ಮನೆ ನಡೆಸಿರುವಾಗ ನಾನೆಂಬುದಿಲ್ಲ. ನಡೆಸುವವನೆ ಎಲ್ಲದ್ದಕ್ಕೂ ಕಾರಣ. ನಾನೇ ಬೇರೆಯಾಗಿ ನಿಂತು ದೇಶ ನೋಡುವುದು ಬೇರೆ ದೇಶದೊಳಗೆ ಇದ್ದು ದೇಶವನ್ನು ನೋಡುವುದು ಬೇರೆ.

ಹಾಗೆ ದೇವರೊಳಗಿದ್ದ ಜೀವಾತ್ಮ ಬೇರೆಯಲ್ಲ. ದೇವರನ್ನು ಬೇರೆ ಬೇರೆ ಮಾಡಿಕೊಂಡು ಜೀವಾತ್ಮನು ದೇವರನ್ನಾಗಲಿ,ಪರಮಾತ್ಮನನ್ನಾಗಲಿ, ಭಗವಂತನನ್ನಾಗಲಿ ಸರಿಯಾಗಿ ತಿಳಿಯುವುದು ಕಷ್ಟ. ಅದ್ವೈತ, ದ್ವೈತ, ವಿಶಿಷ್ಟಾದ್ವೈತ ಎಲ್ಲವೂ ಆ ಮಹಾಶಕ್ತಿಯೊಳಗಿರುವ ತತ್ವಜ್ಞಾನವೆ.

ಬ್ರಹ್ಮ ವಿಷ್ಣು ಮಹೇಶ್ವರರೂ ಆ ಶಕ್ತಿಯ ಪ್ರೇರಕರೆ, ಭೂಮಿ ಒಂದೆ ಇಲ್ಲೇ ಪುರಾಣ, ಇತಿಹಾಸವು ನಡೆದಿರೋದು. ದೇವಾನುದೇವತೆಗಳು ಹುಟ್ಟಿರುವುದು. ಹಾಗಾದರೆ ಅದ್ವೈತ ಎಂದರೆ ಒಂದು ಎಂದಾದರೆ ಮೊದಲು ಮಾನವ ಭೂಮಿಯನ್ನು ಅರ್ಥ ಮಾಡಿಕೊಂಡು ನಡೆಯುವುದನ್ನು ಕಲಿಯಬೇಕಲ್ಲವೆ? ಆಕಾಶದೆತ್ತರ ಹಾರಿದರೂ ಜೀವ ಹುಟ್ಟಿ ಸಾಯೋದು ಭೂಮಿ ಮೇಲೇ.

ಸ್ತ್ರೀ ಜ್ಞಾನವನ್ನು ವಿರೋಧಿಸಿದರೂ ಅದ್ವೈತ ಆಗೋದಿಲ್ಲ. ಜ್ಞಾನದೇವತೆಯನ್ನು ಪ್ರತಿಮೆಯಲ್ಲಿಟ್ಟು ಎಷ್ಟೇ ಪೂಜಿಸಿದರೂ ಜೀವಂತವಾಗಿ ಇರುವ ಸ್ತ್ರೀ ಯನ್ನು ಸನ್ಮಾನದಿಂದ,ಸನ್ಮಾರ್ಗದಲ್ಲಿ ,ಸತ್ಯ ಧರ್ಮದಲ್ಲಿ ನಡೆಯಲು ಬಿಡದಿದ್ದರೆ ಯಾವ ಧರ್ಮ ರಕ್ಷಣೆ ಆಗೋದಿಲ್ಲವಲ್ಲ.

ಇದನ್ನು ಇಂದಿನ ಧಾರ್ಮಿಕ ಜನತೆ ಅರ್ಥ ಮಾಡಿಕೊಂಡರೆ ಭಾರತೀಯರಾಗಿದ್ದಕ್ಕೆ ಸಾರ್ಥಕ. ಹಣಕ್ಕಾಗಿ ಧರ್ಮವಲ್ಲ. ಜ್ಞಾನದಿಂದ ಧರ್ಮ ಉಳಿಸಬೇಕು. ಶಿಕ್ಷಣವನ್ನು ಹಾಳು ಮಾಡಿ ರಾಜಕೀಯ ನಡೆಸುವವರಿಗೆ ಕೊಡುವ ಗೌರವ, ಶಿಕ್ಷಣವನ್ನು ಸರಿಮಾಡಿ ಎನ್ನುವ ಸಾಮಾನ್ಯರಿಗೆ ನೀಡದಿದ್ದರೆ ಇಲ್ಲಿ ರಾಜಕೀಯವಿದೆ ಎಂದರ್ಥ.

ರಾಜಯೋಗವೆಂದರೆ ರಾಜರ ಹಾಗೆ ನಡೆಯುವುದಲ್ಲ.ನಮ್ಮನ್ನ ನಾವರಿತು ನಡೆಯುವುದಷ್ಟೆ. ಇತರರನ್ನು ಆಳೋದಲ್ಲ.ನನ್ನ ನಾನು ಆಳಿಕೊಳ್ಳಲು ಬೇಕಾದ ಜ್ಞಾನಪಡೆದು ಸ್ವತಂತ್ರವಾಗಿ ಜೀವನ ನಡೆಸುವುದು. ಸ್ವತಂತ್ರಜ್ಞಾನಕ್ಕೆ ಸತ್ಯವೆ ದೇವರು ಎನ್ನಬಹುದು.

ನಮ್ಮ ಅರ್ಧಸತ್ಯದ ವಿಷಯ ಹೊರಗೆ ವಿಷವಾಗಿ ಕೊಂದರೆ ಪಾಪ ಯಾರಿಗೆ? ಸಾವು ನಿಶ್ಚಿತವಾದರೂ ಸತ್ಯಧರ್ಮದ ಅರಿವಿಲ್ಲದೆ ಹೋಗುವ ಜೀವ ಮತ್ತೆ ಹುಟ್ಟಲೇ ಬೇಕು. ಭೂಮಿಯ ಪವಿತ್ರತೆ ಸ್ತ್ರೀ ಜ್ಞಾನದೊಳಗಿದ್ದರೂ ಅವಳಿಗೆ ಸತ್ಯ ತಿಳಿಸದೆ ದಾಸಿಯಾಗಿ ನಡೆಸಿಕೊಂಡವರು ಈಗಲೂ ಭೂಮಿಯ ಮೇಲೇ ಇದ್ದರೂ ಕಾಣಿಸುತ್ತಿಲ್ಲ. ಭೂಮಿ ಋಣ ತೀರಿಸಲು ಕಷ್ಟವೆ.

ಅದಕ್ಕೆ ಬೇಕಿದೆ ಜ್ಞಾನ ವೈರಾಗ್ಯ.ಅನ್ನಪೂರ್ಣೆಯ ಶಕ್ತಿಯನ್ನು ಸಾತ್ವಿಕವಾಗಿ ಬಳಸಿಕೊಂಡರೆ ಉತ್ತಮ. ಅನ್ನನೀಡುವ ದೇವತೆಯನ್ನು ರೈತರಾದವರು ಗೌರವದಿಂದ ಕಂಡಾಗಲೆ ಭೂಮಿಯ ಸಾಲಮನ್ನಾ ಆಗುತ್ತದೆ. ಆದರೆ, ಅವರ ಜ್ಞಾನವನ್ನು ಹಿಂದೆ ತಳ್ಳಿ ಬಡವ ಎಂದು ಸಾಲಕ್ಕೆ ದೂಡಿ ಇನ್ನಷ್ಟು ಕಷ್ಟ ನಷ್ಟಕ್ಕೆ ಗುರಿಪಡಿಸಿ ಭೂಮಿಯನ್ನೇ ಮಾರೋ ಸ್ಥಿತಿಗೆ ತಂದಿರುವ‌ ಅಜ್ಞಾನದ ಶಿಕ್ಷಣವೆ ಭಾರತವನ್ನು ಹಿಂದುಳಿದವರಿಂದ ನಡೆಯುವಂತೆ ಮಾಡಿ ಪರಕೀಯರಿಗೆ ಮಣೆ ಹಾಕಿದೆ.

ಈಗಲಾದರೂ ಅದ್ವೈತ ತತ್ವವನ್ನುಸಾಮಾನ್ಯ ಜ್ಞಾನದಿಂದಲೆ ಅರ್ಥ ಮಾಡಿಕೊಂಡು ಪ್ರಜಾ ಪ್ರಭುತ್ವ ರಾಜಪ್ರಭುತ್ವ ಆಗದಂತೆ ಮಾಡುವ ಧರ್ಮ ನಮ್ಮಲ್ಲಿದ್ದರೆ ನಾವೇ ರಾಜಯೋಗಿಗಳು. ಯೋಗಿಗಳ ತತ್ವವನ್ನು ಭೋಗಿಗಳಾಗಿ ಅರ್ಥ ಮಾಡಿಕೊಂಡರೆ ರೋಗ ಹೆಚ್ಚಾಗುತ್ತದೆ. ಪರಮಾತ್ಮನಿರೋದು ಸತ್ಯದಲ್ಲಿ. ಮಿಥ್ಯದ ಅರ್ಧಸತ್ಯದ ರಾಜಕೀಯ ಅಸತ್ಯವನ್ನು ಎತ್ತಿ ಹಿಡಿದಿದೆ ಎನ್ನಬಹುದಲ್ಲವೆ? ಯಾರಾದರೂ ಪ್ರಶ್ನೆ ಮಾಡುವವರಿದ್ದರೆ ಮಾಡಬಹುದು. ಇದೊಂದು ಪ್ರಜಾಪ್ರಭುತ್ವದ ಸಾಮಾನ್ಯಪ್ರಜೆಯ ಅನುಭವದ ಸತ್ಯ.

ಅನುಭವವಿಲ್ಲದೆ ತತ್ವ ಪ್ರಸಾರ ಮಾಡುವುದರಿಂದ ಅನಾಹುತಗಳಾಗುತ್ತದೆ. ಹಿಂದಿನ ಎಲ್ಲಾ ಗುರು ಹಿರಿಯರ ಸತ್ಯಜ್ಞಾನ  ನಮಗೆ ಗ್ರಂಥಗಳಿಂದ ತಿಳಿದಿದೆ. ಆದರೆ ಕಲಿಯುಗದ ಮಾನವನ ಅಲ್ಪ ಬುದ್ದಿಗೆ ಸಾಮಾನ್ಯಜ್ಞಾನವಿಲ್ಲವಾದರೆ ಅರ್ಥ ಆಗದೆ ರಾಜಕೀಯ ಬೆಳೆದರೆ ಅದ್ವೈತದ ರಾಜಯೋಗ ಮರೆಯಾಗುತ್ತದೆ.

ಇಂದಿನ ಧಾರ್ಮಿಕ ಆಚರಣೆಗಳಲ್ಲಿ ವಿದೇಶಿಗರ ಹಣ ಹೆಚ್ಚಾಗಿದೆ ಭಾರತೀಯರ ಸಾಮಾನ್ಯಜ್ಞಾನ ಕುಸಿದಿದೆ. ವಿಶ್ವಭಾರತವನ್ನು ನೋಡುತ್ತಿದೆ, ಭಾರತೀಯರೆ ಭಾರತ ಮಾತೆಯನ್ನು ಕಡೆಗಣಿಸಿದರೆ ಅದ್ವೈತ ತತ್ವ ವಿಶ್ವಕ್ಕೆ ಪ್ರಚಾರ ಮಾಡಿದ್ದರೂ, ವಿದೇಶಿಗಳನ್ನು ಅವಲಂಬಿಸಿದ್ದರೆ ಭಾರತಮಾತೆಯ ಜ್ಞಾನಕ್ಕೆ ಬೆಲೆ ಕೊಡುವವರು ಯಾರು? ನಮ್ಮೊಳಗಿನ ಭಾರತೀಯತೆ ನಮ್ಮ ಮನಸ್ಸು, ಮನೆ, ಮಕ್ಕಳು, ಮಹಿಳೆಯರಲ್ಲೇ ಹಿಂದುಳಿದರೆ ಹಿಂದೂ ಧರ್ಮ ವನ್ನು ಆಳಲು ಪರರಿಗೆನಾವೇ ದಾರಿಮಾಡಿಕೊಟ್ಟ ಹಾಗೆ.

ಅಜ್ಞಾನವನ್ನು ಎತ್ತಿ ಹಿಡಿದ ಶಿಕ್ಷಣದಿಂದ ಭಾರತ ಮುನ್ನೆಡೆದ ದೇಶ ಹಿಂದುಳಿದ ದೇಶವಾಗೋದರಲ್ಲಿ ಸಂಶಯವಿಲ್ಲ. ವಿಜ್ಞಾನ ಯುಗ ಮಾನವನಿಗೆ ತಂತ್ರಜ್ಞಾನ ಯಂತ್ರಜ್ಞಾನದತ್ತ ಎಳೆದು, ಪರಾವಲಂಬನೆಯನ್ನೇ ಸ್ವಾವಲಂಬನೆ ಎನ್ನುವ ಭ್ರಮೆಯಲ್ಲಿ ಪರಕೀಯರ ವ್ಯವಹಾರ, ಸಾಲ, ವಿಜ್ಞಾನ ಶಿಕ್ಷಣ,ಬಂಡವಾಳದ ಜೊತೆಗೆ ರೋಗವನ್ನು ದೇಶದಲ್ಲಿ ಸ್ವಾಗತಿಸುತ್ತಾ ಅತಿಥಿ ಸತ್ಕಾರ ಮಾಡಿದರೆ, ಅತಿಥಿಗಳೆ ತಿಥಿ ಮಾಡೋ ಕಾಲ ಬರಬಹುದು.

ವಿದೇಶಿಗಳಿಗಿರುವ ಆಸಕ್ತಿ ನಮ್ಮವರಿಗಿಲ್ಲ. ನಮ್ಮವರನ್ನೇ ದ್ವೇಷ ಮಾಡುತ್ತಾ ಕಾಲೆಳೆದುಕೊಂಡು ಕಾಲಕಳೆದರೆ ಜೀವನದ ಸತ್ಯ ಅರ್ಥ ಆಗದೆ ಅತಂತ್ರಸ್ಥಿತಿಗೆ ಮನುಕುಲ ತಲುಪಬಹುದು. ಈಗಾಗಲೆ ಎಷ್ಟೋ ಮಹಾತ್ಮರುಗಳು ಮಕ್ಕಳಿಗಾಗಿ ಉಚಿತವಾಗಿ ಧಾರ್ಮಿಕ ಶಿಕ್ಷಣ ಶಾಲೆ ನಡೆಸಿದ್ದಾರೆ.

ಆದರೆ, ಭಾರತ ನಡೆದಿರುವುದು ಸ್ತ್ರೀ ಜ್ಞಾನದಿಂದ ಸ್ತ್ರೀ ಯರಲ್ಲಿರುವ ಪವಿತ್ರವಾದ ಜ್ಞಾನ ಹೆಚ್ಚಿಸಲು ಅವಕಾಶ ನೀಡದೆ ಹಿಂದೆ ನಿಲ್ಲಿಸಿ ರಾಜಕೀಯ ನಡೆಸಿದರೆ ಸಂಸಾರದಲ್ಲಿ ಸಾರವಿಲ್ಲದೆ ಸೊರಗುತ್ತದೆ. ಸ್ತ್ರೀ ಶಕ್ತಿ ಒಳಗೆ ಹೊರಗೆ ದುಡಿದುಕೊಂಡು ಸಮಾಜದ ಜೊತೆಗೆ ಸಂಸಾರವನ್ನೂ ನಡೆಸಿದ್ದರೂ ಅದರೊಳಗಿನ ಹುಳುಕನ್ನು ಎತ್ತಿ ಹಿಡಿಯುವವರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವವರನ್ನು ಭಾರತೀಯರೆಂದರೆ ಸರಿಯಾಗುವುದೆ? ಒಟ್ಟಿನಲ್ಲಿ ಆತ್ಮಶಕ್ತಿಗೆ ಲಿಂಗ ಬೇಧ ವಿಲ್ಲ. ಯಾರೊಳಗೆ ಯಾವ ದೇವರಿರುವರೋ ಯಾವಮಹಾತ್ಮರಿರುವರೋ ತಿಳಿಯಲು ಬೇಕಿದೆ ಶಿಕ್ಷಣದಲ್ಲಿ ಬದಲಾವಣೆ.

ಮಾನವರಾದ ಮೇಲೇ ಮಹಾತ್ಮರಾಗಲು ಸಾಧ್ಯ. ಮಕ್ಕಳಿಗೆ ಮಾನವೀಯತೆಯ ಶಿಕ್ಷಣ ನೀಡಿ, ಸಾಮಾನ್ಯಜ್ಞಾನವನ್ನು ಹೆಚ್ಚಿಸಿದರೆ ಭಾರತಮಾತೆಯ ದರ್ಶನ ವಾಗುತ್ತದೆ. ಇಲ್ಲವಾದರೆ ವಿದೇಶಿಗರ ಘರ್ಷಣೆ.

ಯಾವುದು ಬೇಕೆನ್ನುವುದು ನಮಗೆ ಬಿಟ್ಟದ್ದು. ಸ್ವತಂತ್ರ ಜ್ಞಾನದಿಂದ ಅದ್ವೈತ ತತ್ವ ಅರ್ಥ ಆಗುತ್ತದೆನ್ನಬಹುದು. ಸ್ಥಿತಪ್ರಜ್ಞ ಎಂದರೆ ಇಂದಿನ ಸ್ಥಿತಿಯನ್ನರಿತು ತಿಳಿದು ನಡೆಯುವುದು. ಇಲ್ಲಿ ಯಾರೂ ಪೂರ್ಣಪ್ರಜ್ಞಾವಂತರಿಲ್ಲದ ಕಾರಣ‌ ಎಲ್ಲರೂ ಎಚ್ಚರಿಕೆ ಇಂದ ಸತ್ಯ ತಿಳಿದರೆ ಉತ್ತಮ ಬದಲಾವಣೆ ಸಾಧ್ಯ. ಇದಕ್ಕೆ ಬೇಕಿದೆ ಸಹಕಾರ,ಒಗ್ಗಟ್ಟು, ಏಕತೆ, ಐಕ್ಯತೆ,ತ್ಯಾಗ ಸತ್ಯ, ಸಮಾನತೆಯನ್ನು ಹೆಚ್ಚಿಸುವ ಸದ್ವಿದ್ಯೆ. ನಮ್ಮ ತಪ್ಪು ತಿದ್ದಿಕೊಳ್ಳಲು ಸರ್ಕಾರ ಬೇಕೆ? ಜೀವ ಉಳಿಸಲು ಸರ್ಕಾರ ಬೇಕೆ? ಆತ್ಮರಕ್ಷಣೆಗೆ ಸರ್ಕಾರ ಬೇಕೆ?

ಭಾರತ ಒಂದೆ ದೇಶ.ಈಗಿನ ಸ್ಥಿತಿಯನ್ನು ಸರಿಪಡಿಸಲು ಭಾರತೀಯರು ಭಾರತದ ಪ್ರಜೆಗಳಿಗೆ ಭಾರತೀಯ ಶಿಕ್ಷಣ ನೀಡಿದರೆ ಧರ್ಮ. ಸರ್ಕಾರದ ಶಿಕ್ಷಣದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಎಷ್ಟು ಇದನ್ನು ಅನುಸರಿಸಲಾಗಿದೆ? ಪ್ರಜೆಗಳೆ ಇದಕ್ಕೆ ವಿರೋಧಿಗಳಾದರೆ ಅಧರ್ಮಕ್ಕೆ ಜಯವಲ್ಲವೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group