ಯಾವತ್ತು ಆಗದ್ದು ಇವತ್ತು ಆಗಬೇಕೆಂದರೆ…?

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ನಾನು ಅಂದುಕೊಂಡ ಕೆಲಸ ನಿನ್ನೆ ಮಾಡೋಕೆ ಆಗಲಿಲ್ಲ. ಛೇ! ಇವತ್ತಾದರೂ ಆಗುತ್ತೋ ಇಲ್ವೋ? ಎಂಬ ಗೊಂದಲದ ಈ ಪ್ರಶ್ನೆ ಬಹುತೇಕ ಜನರ ಮನದಲ್ಲಿ ದಿನವೂ ಕಾಡುತ್ತದೆ. ಪ್ರತಿ ದಿನದ ಗೋಳು ಇದು. ಇವತ್ತೂ ಅಂದುಕೊಂಡ ಕೆಲಸ ಪೂರ್ಣ ಮಾಡೋಕೆ ಆಗಲಿಲ್ಲ ನಾಳೆ ಮಾಡ್ತಿನಿ ಎನ್ನುತ್ತ ದಿಂಬಿಗೆ ತಲೆ ಇಡುತ್ತೇವೆ. ದೀರ್ಘವಾಗಿ ಆಲೋಚಿಸಿ ಯೋಚಿಸಿ ಪೂರ್ಣ ಬದುಕಿಗಾಗಿ ಸಿದ್ಧರಾಗಿ. ನಿನ್ನೆಯ ದಿನ ನೆನದು ಇಂದು ಹಾಳು ಮಾಡಿಕೊಳ್ಳದಿರಿ. ದಿನವಿಡೀ ಮಾಡಲೇ ಬೇಕಾದ ಕೆಲಸಗಳನ್ನು ಮಾಡದೇ ಇದ್ದರೂ ಮೈಗೆಲ್ಲ ದಣಿವು ಆವರಿಸಿಕೊಳ್ಳುತ್ತದೆ. ಆಯಾಸ ನಿವಾರಿಸಿಕೊಳ್ಳಲು ಟಿವಿ ಮುಂದೆ ಕುಳಿತರೆ ಮೂರ್ನಾಲ್ಕು ಗಂಟೆ ಕಳದದ್ದೇ ಗೊತ್ತಾಗುವುದಿಲ್ಲ. ಟಿವಿ ಬಿಟ್ಟು ಎದ್ದಾಗ ಮೊದಲಿಗಿಂತಲೂ ಹೆಚ್ಚು ಆಯಾಸವೆನ್ನಿಸುವುದು. ನಮ್ಮ ಬದುಕಿಗೆ ಸಮತೋಲನ ಅತಿ ಮುಖ್ಯ. ಅಂದುಕೊಂಡದ್ದು ಮಾಡಲಾಗಲಿಲ್ಲ ಎಂಬ ತಪ್ಪಿತಸ್ಥ ಮನೋಭಾವ ಕಾಡುತ್ತದೆ. ನಾನೇ ನನಗಾಗಿ ಆರಿಸಿಕೊಂಡ ಕೆಲಸ ಆರಂಭದಿಂದ ಕೊನೆಯವರೆಗೆ ಚೆನ್ನಾಗಿ ಗಮನವಿಟ್ಟು ಮಾಡಬೇಕೆಂಬ ಛಲ ಮನದಲ್ಲಿ ಹೊತ್ತರೆ ಆ ಕೆಲಸ ನಿಮ್ಮಿಂದ ಖಂಡಿತ ಸಾಧ್ಯ. ಎಷ್ಟು ದಿನ ನೆಪ ಹೇಳುತ್ತ ಮೂಂದೂಡುತ್ತ ಸಾಗಿದ್ದು ಇಂದು ಹೂವು ಎತ್ತಿದಷ್ಟು ಸಲೀಸಾಗಿ ಆಗುತ್ತದೆ. ಸರ್ ಎಮ್ ವಿಶ್ವೇಶ್ವರಯ್ಯ ಹೇಳಿದಂತೆ’ ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.’ ಎಂಬುದು ಅಪ್ಪಟ ಸತ್ಯವಾದ ಮಾತು. ಮನಸ್ಸಿದ್ದಲ್ಲಿ ಮಾರ್ಗ ತಾನಾಗಿಯೇ ಕಾಣುತ್ತದೆ. ಕೈಯಲ್ಲಿರುವ ಕಾಲನ (ಸಮಯದ) ಪ್ರಯೋಜನ ಪಡೆದರೆ ಕಂಗಳು ಕಾಣುವ ಬೆಟ್ಟದಷ್ಟು ಕನಸುಗಳನ್ನು ನನಸಾಗಿಸಬಹುದು. ಜೊತೆಗೆ ಕನಸು ಬೆನ್ನಟ್ಟಿ ಹೋಗುವ ಧೈರ್ಯವಿದ್ದರಂತೂ ಪವಾಡವನ್ನೇ ಸೃಷ್ಟಿಸಿಬಿಡಬಹುದು. ವಿಶ್ವಾಸವೂ ಅತಿ ಮುಖ್ಯ. ಆತ್ಮವಿಶ್ವಾಸವಿದ್ದಲ್ಲಿ ಪ್ರತಿಯೊಂದನ್ನು ಸಾಧಿಸುವುದು ಸುಲಭ ಸಾಧ್ಯ.

2008 ರ ಬೀಜಿಂಗ್ ಓಲಂಪಿಕ್ಸ್‍ನ ಶೂಟಿಂಗ್ ನಲ್ಲಿ ಭಾರತಕ್ಕೆ ವೈಯುಕ್ತಿಕ ಸ್ವರ್ಣ ಪದಕದ ಗರಿ ಮೂಡಿಸಿದ ಅಭಿನವ ಬಿಂದ್ರಾನನ್ನು 2004 ರ ಓಲಂಪಿಕ್ಸ್ ನಲ್ಲಿ ಪದಕ ಏಕೆ ಗೆಲ್ಲಲಾಗಲಿಲ್ಲ? ಎಂಬ ಪ್ರಶ್ನೆ ಕೇಳಿದಾಗ ‘ತಾನು ತನ್ನ 13 ನೇ ವಯಸ್ಸಿನಲ್ಲಿಯೇ ಶೂಟಿಂಗ್ ಕಲಿಯತೊಡಗಿದ್ದ. 2004ರ ಅಥೆನ್ಸ್ ಒಲಂಪಿಕ್ಸ್ ನಲ್ಲಿ ಅರ್ಹತಾ ಸುತ್ತಿನಲ್ಲಿ ಸ್ವಲ್ಪದರಲ್ಲಿಯೇ ಗೆಲುವು ಕೈ ತಪ್ಪಿತ್ತು..’ಅಚಲ ನಿರ್ಧಾರ ತೀವ್ರವಾದ ಬಯಕೆ ಗೆಲುವಿನ ತೀರದ ದಾಹ ಸಾಧನೆಯ ಮೇಲೆ ತಮ್ಮದೇ ಪ್ರಭಾವ ಬೀರುತ್ತವೆ. ಬೀಜಿಂಗ್ ನಲ್ಲಿ ಪದಕ ಗೆಲ್ಲಲೇಬೇಕೆಂಬ ತೀವ್ರ ಅಗತ್ಯತೆ ನನ್ನಲ್ಲಿತ್ತು. 2004 ರಲ್ಲಿ ಕೇವಲ ಬಯಕೆ ನನ್ನಲ್ಲಿತ್ತು. ಎಂದರು ಬಿಂದ್ರಾ,’ಅಂದರೆ ಬಯಕೆಗೂ ಅಗತ್ಯತೆಗೂ ಅಗಾಧವಾದ ವ್ಯತ್ಯಾಸವಿದೆ ಎಂದಂತಾಯಿತು. ಯಾವತ್ತು ಆಗದ್ದು ಇವತ್ತು ಆಗಬೇಕೆಂದರೆ ನಾನೇನಾದರೂ ಸಾಧಿಸಿ ತೋರಿಸಲೇಬೇಕೆಂಬ ತೀವ್ರ ಕಾತುರವೂ ಕಾಡಬೇಕು. ಯಾವಾಗಲೂ ವಿಷಯದ ಕೇಂದ್ರಕ್ಕೆ ಲಗ್ಗೆ ಇಡಬೇಕು. ಯಾವುದೇ ಕೆಲಸವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಗೆಲುವು ಪಡೆಯುವುದು ಅಸಾಧ್ಯ.ನಾವು ಏನನ್ನಾದರೂ ಮಾಡಬಹುದು ಎಂಬುದು ಜ್ಞಾನದ ನಂಬಿಕೆ. ನಾವೇನನ್ನು ಅಗತ್ಯವಾಗಿ ಮಾಡ ಬಯಸುತ್ತೇವೆಯೋ ಅದನ್ನು ಸಾಧಿಸುತ್ತೇವೆ ಎನ್ನುವುದು ಆಂತರ್ಯದ ಭಾವನೆ.ಸಿದ್ಧವಾಗಿರುವ ಮನಸ್ಸಿಗೆ ಅವಕಾಶವು ಅನುವಾಗುತ್ತದೆ ಯಾವತ್ತು ಆಗದ್ದು ಇವತ್ತು ಆಗಬೇಕೆಂದರೆ ಮೇಲೆ ಹೇಳಲಾದ ಅಂಶಗಳೊಂದಿಗೆ ಕೆಲಸ ಕೇವಲ ಆಸೆ ಬಯಕೆ ಆಗಿರದೇ ಮನದಲ್ಲಿ ಅಚ್ಚೊತ್ತಿದ ತೀವ್ರ ಅಗತ್ಯತೆ ಆಗಿರಬೇಕು ಎಂಬುದು ನೆನಪಿರಲಿ.


ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ
9449234142

- Advertisement -
- Advertisement -

1 COMMENT

Comments are closed.

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!