12 ನೇ ಶತಮಾನವು ಜಗತ್ತಿನ ಸುವರ್ಣ ಯುಗದ ಕಾಲ ಇತಿಹಾಸದ ಕಾಲ ಗರ್ಭದಲ್ಲಿ ನಿರಂತರವಾಗಿ ಗೋಚರಿಸುವ ಅಪ್ಪಟ ಸಮತಾವಾದದ ಅಮರ ಸಂದೇಶ .
ಕಾರ್ಮಿಕರು ಶ್ರಮಜೀವಿಗಳು ಕನ್ನಡಿಗರು ಕಟ್ಟಿದ ಮೊದಲನೇಯ ಧರ್ಮ ಲಿಂಗಾಯತ ಧರ್ಮವು, ಅದನ್ನು ಹಾಳುಗೆಡಹದಿರಿ ನಿಜ ತತ್ವ ಅರಿಯಿರಿ.
ಇಂತಹ ವೈಜ್ಞಾನಿಕ ವೈಚಾರಿಕ ಧರ್ಮದ ಸೂತ್ರಗಳು ಏಕೆ ಮತ್ತು ಹೇಗೆ ಎಲ್ಲ ಧರ್ಮಕ್ಕಿಂತ ಭಿನ್ನವಾಗಿವೆ.ಬಸವಣ್ಣನವರ ಧರ್ಮದಲ್ಲಿ ಏನಿದೆ ಏನಿಲ್ಲ. ಇಡೀ ಜಗತ್ತೇ ಇಂದು ಬಸವ_ತತ್ವಕೆ ಏಕೆ ಜೋತು ಬೀಳುತ್ತಿದೆ. ಏನು ಕಾರಣ ಇರಬಹುದು..
ಈ ಕೆಳಗಿನ ವಿಷಯಗಳನ್ನು ಓದಿದರೆ ಅರ್ಥ ಆಗುತ್ತದೆ.
೧. ಬಸವ ತತ್ವದಲ್ಲಿ ಕಡ್ಡಾಯವಾಗಿ ದುಡಿದು ತಿನ್ನಬೇಕು –
ಇಲ್ಲ ಇಲ್ಲಿ ಬಿಟ್ಟಿ ಕೂಳು – ಶೋಷಣೆ, ಸುಲಿಗೆಗಳು.
೨. ಬಸವಣ್ಣನವರ ಧರ್ಮದಲ್ಲಿ ಇಲ್ಲ ಜಾತಿಗಳು –
ಆದರೆ ಕಸುಬು ಕಾಯಕಗಳಿವೆ.
೩. ಶರಣರು ದಾನವನ್ನು ವಿರೋಧಿಸಿದರು – ದಾಸೋಹವನ್ನು ಪುರಸ್ಕರಿಸಿದರು.
೪. ಲಿಂಗ ತತ್ವ ವಿರೋಧಿಸುತ್ತದೆ ಸ್ಥಾವರ –
ಸಕಲ ಜೀವಾತ್ಮರ ಚೈತನ್ಯದ ಜಂಗಮವೇ ಶ್ರೇಷ್ಠ.
೫. ಶರಣರು ಸನ್ಯಾಸ ಕಾವಿ ಒಪ್ಪಲಿಲ್ಲ –
ಸತಿ ಪತಿಗಳ ಭಕ್ತಿ ಹಿತವಾಗಿಪ್ಪುದು ಶಿವಂಗೆ.
೬. ಅಲ್ಲ ಇದು ಆಚಾರ್ಯರ ಸಂಸ್ಕೃತಿ –
ಹೌದು ಇದು ಅನುಭಾವಿಗಳ ಪ್ರತೀತಿ.
೭. ವ್ಯಕ್ತಿ ನಿಷ್ಠತೆ ದಿಕ್ಕರಿಸಿದ ಶರಣರು –
ತತ್ವ ಪ್ರಜ್ಞೆ ಮೆರೆದ ಲೋಕ ವಿರೋಧಿಗಳು.
೮. ಹಾಸಿ ದುಡಿದರು ಹಂಚಿ ತಿಂದರು –
ದಾನ ಧರ್ಮ ಭಿಕ್ಷೆ ಬೇಡಲಿಲ್ಲ.
೯. ಇಲ್ಲ ಇಲ್ಲಿ ಮಠ ಆಶ್ರಮ –
ಮನೆಯೇ ಅನುಭವ ಮಂಟಪಗಳು.
೧೦. ಒಪ್ಪಲಿಲ್ಲ ಕಾಶಿ ಕೇದಾರ ಗೋಕರ್ಣ –
ಭಕ್ತನ ಅಂಗಳವೇ ಪುಣ್ಯ ಕ್ಷೇತ್ರವು.
೧೧. ಜಗವು ಕಂಡ ಮೊದಲ ಸಂಸತ್ತು ಸ್ಥಾಪಿಸಿದ ಶರಣರು –
ಸ್ಥಾವರ ಗೋಪುರ ತಿರಸ್ಕರಿಸಿದರು.
೧೨. ವೇದ ಶಾಸ್ತ್ರ ನಿರಾಕರಿಸಿ –
ವಚನ ತತ್ವ ನುಡಿದರು.
೧೩. ನಡೆ ನುಡಿಯಲಿ ಏಕ ರೂಪವು –
ಇಲ್ಲ ದ್ವಂದ್ವ ಕತ್ತಲು.
೧೪. ಹೆಣ್ಣು ಗಂಡಿಗೆ ಏಕ ಸ್ಥಾನ –
ಮೇಲು ಕೀಳು ಬಳ್ಳಿ ಸುಟ್ಟರು.
೧೫. ಗುಡಿ ಗುಂಡಾರ ಸುತ್ತಲಿಲ್ಲ –
ದೇವನೊತ್ತು(ದೇಹವೇ ದೇವಾಲಯ) ದೇವರಾದರು.
೧೬. ಮೌಢ್ಯಗಳನ್ನು ಮೆಟ್ಟಿ ನಿಂತರು –
ಮೌಲ್ಯಗಳನ್ನು ಮೆರೆದರು.
೧೭. ಕರ್ಮ ಸಿದ್ಧಾಂತ ಮೂಢ ನಂಬಿಕೆಗೆ ಇಲ್ಲ ಇಲ್ಲಿ ಸ್ಥಾನ –
ಸತ್ಯ ಸಮತೆ ಶಾಂತಿ ಪ್ರೀತಿಗೆ ಜೀವ ಕೊಟ್ಟ ಮಾನ
ಬನ್ನಿ ಬಸವ ಬಂಧುಗಳೇ
ಒಂದಾಗ ಬನ್ನಿ
ಬಸವ ತತ್ವಕೆ ನೀವು
ಹೆಜ್ಜೆ ಹಾಕ ಬನ್ನಿ..
ಹೊಸ ಜಗಕೆ ಬಸವ ತತ್ವವು
ನಮ್ಮ ಶರಣರ ನೆನೆಯ ಬನ್ನಿ
ಡಾ. ಶಶಿಕಾಂತ ಪಟ್ಟಣ, ರಾಮದುರ್ಗ