ಗ್ರಂಥಗಳನ್ನೂ ಸುಡುವಂಥ ದುಷ್ಟತನಕ್ಕೆ ಏನೆನ್ನಬೇಕು ?

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಮೈಸೂರು – ತನಗೆ ಓದು ಸಾಧ್ಯವಾಗದಿದ್ದರೂ ಬೆಳೆವ ಮಕ್ಕಳು, ಊರ ಜನ ಓದಲಿ ಎಂದು ಕೂಲಿ ಮಾಡುವ ಮಾನವಂತ ಮನುಷ್ಯ ತನ್ನ ದುಡಿಮೆಯ ಹಣದಲ್ಲಿ ಒಂದಷ್ಟು ಪಾಲು ತೆಗೆದು ಸಾರ್ವಜನಿಕ ಗ್ರಂಥಾಲಯ ನಡೆಸುತ್ತಿದ್ದರು.. ಇಂಥ ಜನೋಪಯೋಗಿ ಕಾರ್ಯ ಸಹಿಸದ ದುಷ್ಟ ಶಕ್ತಿಗಳು ಅವರು ಗ್ರಂಥಾಲಯ ನಡೆಸುತ್ತಿದ್ದ ತಟ್ಟೆಯನ್ನು ಸುಟ್ಟು ಹಾಕಿದ್ದಾರೆ. ಸರಸ್ವತಿಯ ಆವಾಸ ಸ್ಥಾನಕ್ಕೆ ಬೆಂಕಿ ಇಟ್ಟು ತಾವು ಯಾವ ರಾಕ್ಷಸರಿಗೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅದೆಂಥ ನೀಚತನವಿರಬೇಕು ಅವರ ಹೃದಯದಲ್ಲಿ ? ಮನುಷ್ಯ ಮನುಷ್ಯನಲ್ಲಿ ದ್ವೇಷ ಇರುವುದು ಸಹಜ. ಅದಕ್ಕಾಗಿ ಪರಸ್ಪರ ಹೊಡೆದಾಡಿ ಸಾಯುತ್ತಾರೆ. ಆದರೆ ಒಂದು ಸಂಸ್ಕೃತಿಯನ್ನು ಬೆಳಗಿಸುವ, ಒಂದು ಜೀವನಕ್ಕೆ ಬೆಳಕು ಬಣ್ಣ ಕೊಡುವ ಪುಸ್ತಕ ಸಂಸ್ಕೃತಿಯನ್ನೇ ಕೊಳ್ಳಿ ಇಟ್ಟು ಬೂದಿ ಮಾಡಿರುವ ದುರುಳರನ್ನು ಮಾನವ ರೂಪದ ನೀಚಾತಿನೀಚ ರಕ್ಕಸರೆನ್ನದೆ ವಿಧಿಯಿಲ್ಲ.

- Advertisement -

ಇದೆಲ್ಲ ನಡೆದಿದ್ದು ವಿದ್ಯಾನಗರಿ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಳ್ಳುವ ಮೈಸೂರಿನಲ್ಲಿ. (ರಾಜೀವ ನಗರ)

ಬಡಪಾಯಿ ಸೈಯದ್ ಇಸಾಕ್ ಅವರು ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯ ನಿನ್ನೆ ದುಶ್ಕರ್ಮಿಗಳಿಂದ ಸಂಪೂರ್ಣನಾಶವಾಗಿದೆ. ಇದೊಂದು ಸಾಂಸ್ಕೃತಿಕ ದುರಂತವೇ ಸರಿ. ಇಂಥ ಕೆಲಸ ಮಾಡುವ ವ್ಯಕ್ತಿಯನ್ನು ಸಾಹಿತ್ಯ ಪರಿಚಾರಿಕೆಗಾಗಿ ಗೌರವಿಸಬೇಕಾಗಿತ್ತು. ಬದಲಾಗಿ ಅವರು ತಮ್ಮ ದುಡಿಮೆಯ ಹಣದಲ್ಲಿ ಸಾರ್ವಜನಿಕರಿಗಾಗಿ ಗ್ರಂಥಾಲಯದಲ್ಲಿ ಸಂಗ್ರಹ ಮಾಡಿದ 11000 ಪುಸ್ತಕಗಳನ್ನು ನಾಶಮಾಡಲಾಗಿದೆ..

ಇದೊಂದು ಈ ಹಿಂದೆ ಸಿಂಹಳಿಯರು ಜಾಪ್ನಾದಲ್ಲಿ ತಮಿಳರ ಅಮೂಲ್ಯ ಸಂಗ್ರಹದ ಸಾಹಿತ್ಯವನ್ನು ಬೆಂಕಿಗಾಹುತಿ ಮಾಡಿದ ಸಂಗತಿಯನ್ನು ನೆನಪಿಸುತ್ತದೆ. ಕ್ಷುದ್ರ ಮನಸು ಮಾತ್ರ ಜ್ಞಾನಕ್ಕೆ ಒಳ್ಳೆಯತನಕ್ಕೆ ಬೆಂಕಿ ಇಡುತ್ತದೆ.

ಸೈಯದ್ ಇಸಾಕರು ಗ್ರಂಥಾಲಯದ ಪುನರ್ ನಿರ್ಮಾಣ ಮಾಡಲು ಮುಂದಾಗಬೇಕು. ನಾನು ಒಂದಷ್ಟು ಪುಸ್ತಕಗಳನ್ನು ಅವರಿಗೆ ಕಳಿಸಿಕೊಡುತ್ತೇನೆ..

ಸಹೃದಯಿಗಳಾದ ನೀವೂ ಕಳಿಸಿಕೊಡಿ. ಅಗತ್ಯವಿರುವ ನೆರವು ಕೊಡಲು ವಿನಂತಿಸುವೆ

ನಾವೆಲ್ಲ ಪುಸ್ತಕ ಓದುವ ಸಂಸ್ಕೃತಿ ಉಳಿಸಿ ಬೆಳೆಸೋಣ… ಪುಸ್ತಕ ಮತ್ತು ಕನ್ನಡ ಪ್ರೀತಿಯ ಆ ಮಹಾಜೀವದ ಜೊತೆಗೆ ಸಾಧ್ಯವಿದ್ದರೆ ಮಾತಾಡಿ

ಅವರ ಸಂಪರ್ಕ ವಿಳಾಸ ಮತ್ತು ನಂಬರ್

ಸಯ್ಯದ್ ಇಸಾಕ್,
ಮನೆ ನಂ. 304/2,
4ನೇ ಕ್ರಾಸ್, ಅಮ್ಮರ್ ಮಸೀದಿ ಹತ್ತಿರ,
ಶಾಂತಿನಗರ, ಮೈಸೂರು- 570019
ಮೊ.ಸಂ.‌ 9901266487

ಕಿಡಿಗೇಡಿಗಳ ವಿರುದ್ದ ಕ್ರಮಕೈಗೊಳ್ಳಬೇಕು.ಸಾಹಿತ್ಯಾಭಿಮಾನಿಗಳು ಸೈಯದ್ ಇಸಾಕ್ ಅವರಿಗೆ ಕೈಜೋಡಿಸಬೇಕು.ಮತ್ತೆ ಕನ್ನಡ ಗ್ರಂಥಾಲಯ ನಿರ್ಮಾಣಕ್ಕೆ ನಾಂದಿ ಹಾಡಬೇಕು-ಡಾ.ಭೇರ್ಯ ರಾಮಕುಮಾರ್,ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಮೈಸೂರು

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!