spot_img
spot_img

ಸಾಲದ ಸಮಸ್ಯೆಗೆ ಯಾವ ಮಂತ್ರ ಪಠಿಸಬೇಕು?

Must Read

ಸಾಲದಿಂದ ಮುಕ್ತರಾಗುವಿರಿ.. ಸಾಲದ ಸಮಸ್ಯೆ ನಿಮ್ಮಲ್ಲಿದ್ದರೆ ಹೀಗೆ ಮಾಡಿ..

🍀ನಮ್ಮ ಅಗತ್ಯತೆಗಳನ್ನು ನಮ್ಮಲ್ಲಿ ಪೂರೈಸಿಕೊಳ್ಳಲು ಸಾಧ್ಯವಾಗದಿದ್ದಾಗ ನಾವು ಹಣವನ್ನು ಸಾಲ ಪಡೆಯುತ್ತೇವೆ. ಕೆಲವೊಮ್ಮೆ ನಾವು ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಸ್ಯೆಗೆ ಪರಿಹಾರವೇನು ಗೊತ್ತೇ? ಸಾಲದ ಸಮಸ್ಯೆಗೆ ಯಾವ ಮಂತ್ರ ಪಠಿಸಬೇಕು..? ಇಲ್ಲಿ ಹೇಳಲಾದ ಕೆಲವು ಕ್ರಮಗಳು ಮತ್ತು ಮಂತ್ರಗಳನ್ನು ಬಳಸಿದರೆ, ಸಾಲದಿಂದ ಸ್ವಾತಂತ್ರ್ಯವನ್ನು ಸಾಧಿಸಬಹುದು. ಆ ಸರಳ ಪರಿಹಾರ ಮತ್ತು ಮಂತ್ರಗಳಾವುವು..?

🌻ಮಂಗಳವಾರ ಹೀಗೆ ಮಾಡಿ:

🌾ಮಂಗಳವಾರ, ಶಿವ ದೇವಸ್ಥಾನಕ್ಕೆ ಹೋಗಿ ಶಿವಲಿಂಗದ ಮೇಲೆ ಮೊಸರು ಮತ್ತು ನೀರನ್ನು ಅರ್ಪಿಸಿ. ಶಿವನಿಗೆ ಇದನ್ನು ಅರ್ಪಿಸಿದ ನಂತರ ” ಓಂ ಋಣ ಮುಕ್ತೇಶ್ವರ ಮಹಾದೇವಾಯ ನಮಃ” ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ. ಇದರಿಂದ ನೀವು ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತೀರಿ.

🌻ಈ ಸ್ತೋತ್ರವನ್ನು ಪಠಿಸಿ:

🌾ನಿರಂತರವಾಗಿ ಸಾಲದಿಂದ ಬಳಲುತ್ತಿರುವ ಜನರು, ಋಣಮೋಚಕ ಮಂಗಳ ಸ್ತೋತ್ರ ವನ್ನು ಪ್ರತಿದಿನ ಪಠಿಸಬೇಕು. ಈ ಸ್ತೋತ್ರವನ್ನು ಪಠಿಸುವುದಕ್ಕಾಗಿ ನೀವು ಶುಕ್ಲ ಪಕ್ಷದ ಮೊದಲ ಮಂಗಳವಾರದಿಂದ ಪ್ರಾರಂಭಿಸಬೇಕು. ನಿಮಗೆ ಪ್ರತಿದಿನ ಈ ಸ್ತೋತ್ರವನ್ನು ಪಠಿಸಲು ಸಾಧ್ಯವಾಗದಿದ್ದರೆ, ನೀವು ಅದನ್ನು ಪ್ರತಿ ಮಂಗಳವಾರದಂದು ತಪ್ಪದೇ 9 ಬಾರಿ ಪಠಿಸಬೇಕು.

🪷ಇದನ್ನು ನೀರಿನಲ್ಲಿ ಬಿಡಿ:

🌾ಮೊದಲು ಕೆಂಪು ಗುಲಾಬಿಗಳ 5 ಪೂರ್ಣ ಹೂವುಗಳನ್ನು ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಈ ಹೂವು ತುಂಡಾಗಿರಬಾರದು ಅಥವಾ ಎಳೆಗಳು ಬಿದ್ದು ಹೋಗಿರಬಾರದು. ಇದರ ನಂತರ, ಒಂದೂವರೆ ಮೀಟರ್ ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಮುಂದೆ ಹರಡಿ. ಈ ಐದು ಗುಲಾಬಿಗಳನ್ನು ಅದರಲ್ಲಿ ಕಟ್ಟಿ, ಗಾಯತ್ರಿ ಮಂತ್ರವನ್ನು 21 ಬಾರಿ ಪಠಿಸಿ. ನಂತರ ಹರಿಯುವ ನೀರಿನಲ್ಲಿ ಇದನ್ನು ಹರಿಬಿಡಿ. ಇದರಿಂದ ದೇವರ ಅನುಗ್ರಹದಿಂದ ನೀವು ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತೀರಿ.

🌻ಸೂರ್ಯೋದಯಕ್ಕೂ ಮುಂಚಿತವಾಗಿ ಇದನ್ನು ಓದಿ:

🌾ಪ್ರತಿದಿನ ನೀವು ಸೂರ್ಯೋದಯಕ್ಕೂ ಮುಂಚಿತವಾಗಿ ಗಜೇಂದ್ರ ಮೋಕ್ಷ ಸ್ತೋತ್ರವನ್ನು ಓದಬೇಕು. ಇದರಿಂದ ನೀವು ಸಾಲದಿಂದ ಪರಿಹಾರವನ್ನು ಪಡೆದುಕೊಳ್ಳುತ್ತೀರಿ. ಸಾಲದ ಸಮಸ್ಯೆಯಿಂದ ಬಳಲುತ್ತಿರುವವರು ಈ ಸ್ತೋತ್ರವನ್ನು ಪಠಿಸಬೇಕು.

🌻ಋಣಮುಕ್ತ ಮಂತ್ರ:

🌾ಈ ಮಂತ್ರವನ್ನು ರುದ್ರಾಕ್ಷಿ ಮಾಲೆ ಅಥವಾ ಪನ್ನಾ ಅಥವಾ ಹಸಿರು ಮಣಿ ಮಾಲೆಯನ್ನು ಹಿಡಿದು ಜಪಿಸಬೇಕು. ಶುಕ್ಲ ಪಕ್ಷದ ಮೊದಲ ಮಂಗಳವಾರದಿಂದ ಕನಿಷ್ಠ 5 ಮಾಲೆಗಳು ಪೂರ್ಣಗೊಳ್ಳುವವರೆಗೆ ಜಪಿಸಬೇಕು. ಸಾಧ್ಯವಾದರೆ, ಸಂಜೆ ಸಮಯದಲ್ಲಿ ಹನುಮಂತನ ದೇವಸ್ಥಾನಕ್ಕೆ ಅಥವಾ ಶಿವ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪಶ್ಚಿಮಕ್ಕೆ ಮುಖ ಮಾಡಿ ಈ ಮಂತ್ರವನ್ನು ಪಠಿಸಿ.

” ಓಂ ಋಣ – ಮುಕ್ತೇಶ್ವರ ಮಹಾದೇವಾಯ ನಮಃ”

“ಓಂ ಮಂಗಲಮೂರ್ತಯೇ ನಮಃ”

“ಓಂ ಗಂ ಋಣಹರ್ತಾಯೈ ನಮಃ:

“ಓಂ ಶ್ರೀ ಗಣೇಶ ಋಣಂ ಛಿಂಧಿ ವರೇಣ್ಯಂ ಹುಂ ನಮಃ ಫಟ್”

🍀ಇವುಗಳ ಜೊತೆಗೆ ಕಲ್ಲುಪ್ಪು ಹಾಗೂ 1/4 ಕೆಜಿಗಿಂತ ಹೆಚ್ಚು ತೊಗರಿಯನ್ನು ದಕ್ಷಿಣೆ ಸಮೇತವಾಗಿ ಸತ್ಪಾತ್ರರಿಗೆ ದಾನ ಮಾಡಿ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!