ಭೂಮಿ ತಾಯಿಯ ಮಗಳಾಗಿ ಜನಿಸುವ ಸ್ತ್ರೀ ಕುಲಕ್ಕೆ ಪುರಾಣ ಇತಿಹಾಸ ಕಾಲದಿಂದಲೂ ಪೂರ್ಣ ಸ್ವಾತಂತ್ರ್ಯ ಇಲ್ಲದೆ ಕಷ್ಟಗಳೇ ಹೆಚ್ಚಾಗಿರೋದನ್ನು ಕಲಿಯುಗದವರೆಗೂ ಹೇಳಿ, ಕೇಳಿಕೊಂಡು ಬಂದಿರೋದರ ಹಿಂದಿನ ಸತ್ಯ ಧರ್ಮ ಏನಿದೆ? ಇದನ್ನು ಭೌತಿಕ ವಿಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಕಷ್ಟ.
ಕಣ್ಣಿಗೆ ಕಾಣದ ಅಧ್ಯಾತ್ಮ ಸತ್ಯ ಕಣ್ಣಿಗೆ ಕಾಣುವ ಭೌತಿಕ ಸತ್ಯಕ್ಕೆ ವಿರುದ್ದವಾಗಿದೆ. ಇಲ್ಲಿ ಮಾನವನ ಜೀವನಕ್ಕೆ ಭೂಮಿಯೇ ಆಧಾರ. ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳಲ್ಲಿಯೂ ಅಡಗಿರುವ ಶಕ್ತಿ ಭೂಮಿಯ ಅಂಶವೆ ಆಗಿದೆ.
ಇದರಲ್ಲಿ ಮುಖ್ಯವಾಗಿರುವ ಮನುಕುಲಕ್ಕೆ ಮಾತ್ರ ಆತ್ಮಜ್ಞಾನವಿರುವುದರಿಂದ ಈ ಭೂಮಿಯ ಮೇಲೆ ಬಂದ ಕಾರಣ ತಿಳಿದು ಭೂಮಿಯನ್ನು ಸದ್ಬಳಕೆ ಮಾಡಿಕೊಂಡು ಭೂಮಿಯನ್ನು ಧರ್ಮದ ಹಾದಿಯಲ್ಲಿ ನಡೆಸೋ ಶಕ್ತಿಯಿರುವುದರಿಂದ ಸ್ತ್ರೀ ಪುರುಷರಿಗೆ ಕಷ್ಟಪಟ್ಟು ಜೀವನ ನಡೆಸದೆ ವಿಧಿಯಿಲ್ಲ.
ಹಿಂದಿನ ಮಹಾತ್ಮರೆಲ್ಲರಲ್ಲಿಯೂ ನಾವು ಕಾಣುವುದು ಆಧ್ಯಾತ್ಮ ಸಾಧನೆಯಲ್ಲಿ ದೇಹದಂಡನೆ ಮುಖ್ಯವಾಗಿತ್ತು. ಪಂಚಭೂತಗಳಿಂದಾದ ಶರೀರವನ್ನು ದಂಡಿಸುವುದರಿಂದ ಆಂತರಿಕ ಶಕ್ತಿ ಜಾಗೃತವಾಗಿ ಆತ್ಮ ಪರಮಾತ್ಮನ ಸೇರಬಹುದೆನ್ನುವುದೆನ್ನುವುದಾಗಿತ್ತು.
ಹೀಗಾಗಿ ಭೂಮಿ ಮೇಲಿದ್ದರೂ ಅದರ ಋಣ ತೀರಿಸಲು ಕಷ್ಟವೆಂದು ಮಹಾತಪಸ್ವಿಗಳು ಭೂಮಿಯಿಂದ ಮೇಲೆ ನಿಂತು ವರ್ಷಗಟ್ಟಲೆ ತಪಸ್ಸು ಮಾಡಿ ಅದೃಶ್ಯರಾದರೆಂಬ ಪುರಾಣ ಕಥೆಗಳಿವೆ. ಊಹಿಸಲಾಗದ ಸತ್ಯವನ್ನು ಒಪ್ಪಲು ಕಷ್ಟವಾದರೂ ಇದು ಸತ್ಯ.
ಸ್ತ್ರೀ ಯನ್ನು ಕೆಲವು ಋಷಿಮುನಿಗಳು, ರಾಜರು, ತಪಸ್ವಿಗಳು ಕಟ್ಟುನಿಟ್ಟಾಗಿ ನೋಡಿಕೊಂಡಿರುವ ಉದಾಹರಣೆಗಳಿವೆ. ಕಷ್ಟಪಡದೆ ಸುಖವಿಲ್ಲ ಎನ್ನುವ ಹಾಗೆ ಭೂಮಿಯಿಂದ ಜೀವನ್ಮುಕ್ತಿ ಪಡೆಯಲೆಂದೇ ಈ ಎಲ್ಲಾ ಸಾಧಕರು ತಪಸ್ಸು ಮಾಡಿ ಮೋಕ್ಷ ಹೊಂದಿದರು.
ಸಂಸಾರಕ್ಕೆ ಬಂದವರಲ್ಲಿ ಸ್ತ್ರೀಶಕ್ತಿಯನ್ನು ಕಷ್ಟದಲ್ಲಿ ಮುಳುಗಿಸಿ ,ಸಂಸಾರ ತೊರೆದು ಸಂನ್ಯಾಸಿಗಳಾದವರನ್ನು ಭೂಮಿಯ ಜನಕ್ಕೆ ಈಗಲೂ ಪೂಜನೀಯರೆ. ಅದೇ ಕೆಲಸ ಸ್ತ್ರೀ ಮಾಡಿದ್ದರೆ ತಪ್ಪು. ಭೂಮಿಯಲ್ಲಿ ಸ್ತ್ರೀ ಶಕ್ತಿಯಿಲ್ಲದೆ ಜೀವವಿಲ್ಲ,ಜೀವನವಿಲ್ಲ ಆಕಾಶತತ್ವದ ಪುರುಷಶಕ್ತಿ ತಿರುಗಿ ಆಕಾಶದೆಡೆಗೆ ಹೋಗಬೇಕಾದರೆ ಸ್ತ್ರೀ ಋಣ ತೀರಿಸುವುದು ಅಗತ್ಯ.
ಇದರಲ್ಲಿ ಕೆಲವರಷ್ಟೇ ಋಣ ತೀರಿಸಲಾಗಿದೆ. ಉಳಿದವರಿಗೆ ಮತ್ತೆ ಭೂಮಿ ತಾಯಿಯ ಮಡಿಲಲ್ಲಿ ಪುನಜನ್ಮ. ಧರ್ಮ ಹಾಗು ಸತ್ಯದಿಂದ ಮಾತ್ರ ಭೂಮಿ ಋಣ ತೀರಿಸಲು ಸಾಧ್ಯ. ಹೀಗಾಗಿ ಈ ದಾರಿಯಲ್ಲಿ ನಡೆಯುವುದಕ್ಕೆ ಪುರುಷರಿಗೆ ಸಹಕಾರಿಯಾಗಿ ನಿಲ್ಲುವ ಜ್ಞಾನಶಕ್ತಿ ಸ್ತ್ರೀ ಗೆ ನೀಡಿ. ಬಂದ ಕಷ್ಟಗಳನ್ನು ಸಹಿಸಿಕೊಂಡು ಸದಾಚಾರ, ಸತ್ಯ, ಧರ್ಮ, ನ್ಯಾಯ ನೀತಿ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ ಮುಂತಾದ ಶಾಸ್ತ್ರ ಗಳು ಅಂದಿನಿಂದಲೂ ಬೆಳೆಯುತ್ತಾ ಬಂದವು.
ಸ್ತ್ರೀ ಅದಕ್ಕೆ ವಿರುದ್ದವಾದರೆ ಭೂಮಿಯ ಸತ್ಯ ಸತ್ವ ಹಾಳಾಗುತ್ತದೆನ್ನುವುದೂ ಒಂದು ಮುಖ್ಯಕಾರಣ. ಪವಿತ್ರತೆಯಿಂದ ಇನ್ನಷ್ಟು ಆತ್ಮಜ್ಞಾನ ಹೆಚ್ಚುವುದರಿಂದ ಕಾಲಕ್ರಮೇಣ ಭೂಮಿಯ ಮಾಯೆಗೆ ಬಲಿಯಾದವರ ಸಂಖ್ಯೆ ಬೆಳೆದು, ಜೀವನ್ಮುಕ್ತಿಗಾಗಿ ಹೆಣ್ಣು, ಹೊನ್ನು, ಮಣ್ಣಿನಿಂದ ದೂರವಿದ್ದು ತಪಸ್ವಿಗಳಾದರು. ಸ್ತ್ರೀ ಮಾಯೆ ಎನ್ನುವವರಿಗೆ ಒಳಗೇ ಅಡಗಿದ್ದ ಮೋಹವನ್ನು ತಡೆಯಲಾಗದೆ ಸಂಸಾರದೊಳಗೆ ಬಂದು ಭೌತಿಕಾಸಕ್ತಿ ಹೆಚ್ಚಾಯಿತು.
ಇದೊಂದು ಸೃಷ್ಟಿಯ ಸಹಜತೆ.ಪ್ರಕೃತಿ ಪಂಚಭೂತಗಳಿಂದಾದ. ಶರೀರದೊಳಗಿನ ಎಲ್ಲಾ ಶಕ್ತಿ ಮನಸ್ಸನ್ನು ಮಾನವನನ್ನು ನಡೆಸುವಾಗ ಪ್ರಕೃತಿಯ ಸಣ್ಣ ಭಾಗವಾದ ಸ್ತ್ರೀ ಗೆ ಸ್ವಾತಂತ್ರ್ಯ ನೀಡದೆ ಅವಳನ್ನು ತಮ್ಮ ಆಧ್ಯಾತ್ಮ ಸಾಧನೆಗೆ ಬಳಸಿಕೊಂಡವರು ಮಹಾತ್ಮರಾದರು.
ಆದರೂ,ಸ್ತ್ರೀ ತನ್ನದೇ ಆದ ಚೌಕಟ್ಟಿನಲ್ಲಿ ಎಲ್ಲಾ ಕಷ್ಟವನ್ನು ಆಧ್ಯಾತ್ಮದ ಪ್ರಕಾರ ಧರ್ಮದ ಪ್ರಕಾರ ತಿಳಿದು ಆಗಿನ ಕಾಲದಿಂದಲೂ ಸೃಷ್ಟಿಯಲ್ಲಿದ್ದಾಳೆ. ಹೀಗೆ ಎಲ್ಲಾ ದೇವತೆಗಳೂ ಸ್ತ್ರೀ ಶಕ್ತಿಯಿಂದಲೇ ಭೂಮಿಯಲ್ಲಿ ಇದ್ದು ಪುರಾಣಗಳಾಗಿವೆ.
ಇಲ್ಲಿ ಈಗಿನ ಕಲಿಗಾಲದಲ್ಲಿ ಸ್ತ್ರೀ ತನ್ನ ಅಸ್ತಿತ್ವಕ್ಕೆ ಹೋರಾಟ ಮಾಡಿ ಗೆದ್ದಿರುವುದನ್ನು ಸಾಧನೆ ಎನ್ನಬಹುದು.ಆದರೂ ಸ್ತ್ರೀ ಶೋಷಣೆ ಮಿತಿ ಮೀರಿರೋದಕ್ಕೂ ಸ್ತ್ರೀ ಕಾರಣವಾಗಿರೋದು ವಿಪರ್ಯಾಸ. ಸ್ತ್ರೀ ಗೆ ಸ್ತ್ರೀ ಯೆ ವೈರಿ. ಈ ವೈರತ್ವದ ಫಲ ಜನ್ಮ ಜನ್ಮಕ್ಕೆ ದಾರಿ ಮಾಡಿಕೊಟ್ಟಿತು.
ಹೀಗೇ ಅಜ್ಞಾನ ಬೆಳೆಯುತ್ತಾ ಪುರುಷರನ್ನೂ ಅಜ್ಞಾನದಲ್ಲಿಯೇ ಬೆಳೆಸಿbಸಹಕಾರ ನೀಡುತ್ತಾ ಸ್ತ್ರೀ ರಾಜಕೀಯ ನಡೆಸಿ ಭೂಮಿಯ ಮೂಲ ಸತ್ಯ,ಸತ್ವ ಹಿಂದುಳಿದಿದೆ. ಸತ್ವ ಹಾಳಾದಂತೆ ಮನುಕುಲಕ್ಕೆ ಆತ್ಮಶಕ್ತಿ ಕುಸಿಯುತ್ತದೆ. ಭೌತಿಕಾಸಕ್ತಿ ಹೆಚ್ಚಾದಂತೆ ಅಸುರತೆ ಬೆಳೆದು ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳುವ ಸಂತಾನ ಹೆಚ್ಚುವುದು.
ಇದಕ್ಕೆ ಸಹಕರಿಸುವ ಸ್ತ್ರೀ ಶಕ್ತಿ ತನ್ನ ಜೀವರಕ್ಷಣೆಗಾಗಿ ಆತ್ಮವಂಚನೆ ಮಾಡಿಕೊಂಡರೆ ಭೂಮಿಗೆ ಕಷ್ಟ ನಷ್ಟ. ಯಾರೇ ಆಗಿರಲಿ ಕರ್ಮಕ್ಕೆ ತಕ್ಕಂತೆ ಫಲಾಫಲ ಎಂದರೆ ಹೆಚ್ಚು ಹೆಚ್ಚು ಆಸೆ ಆಕಾಂಕ್ಷೆಗಳಿಂದ ಸ್ತ್ರೀ ಜ್ಞಾನ ಕುಸಿದು ಅಜ್ಞಾನದ ರಾಜಕೀಯಕ್ಕೆ ಇಳಿದು ಪುರುಷರನ್ನು ಅಧರ್ಮದಲ್ಲಿ ನಡೆಸುವುದರಿಂದ ಅದೇ ಮುಂದೆ ಕರ್ಮ ಫಲವಾಗಿ ಕಷ್ಟನಷ್ಟಗಳಿಗೆ ತಿರುಗಿದಾಗ ಸ್ತ್ರೀ ಕಾರಣವಾಗುತ್ತಾಳೆ.
ಹೀಗಾಗಿ ಭೂಮಿ ಪುತ್ರಿಯರು ಭೂತಾಯಿ ಸೇವೆ ಮಾಡುವ ಭೂಮಿ ಪುತ್ರರನ್ನು ಧರ್ಮದ ಕಡೆ ನಡೆಸುವುದಕ್ಕೂ ಪುರುಷರ ರಾಜಕೀಯ ಶಕ್ತಿ ಬಿಡುತ್ತಿರಲಿಲ್ಲ. ಎಂತೆಂತಹ ಮಹಾಮಾತೆಯರು ಭಾರತ ಭೂಮಿಯಲ್ಲಿದ್ದು ಪತಿವ್ರತೆ,ಧರ್ಮಪತ್ನಿಯರಾಗಿದ್ದರೂ ಅವರುಗಳು ಪಟ್ಟ ಕಷ್ಟಕ್ಕೆ ಕಾರಣವೆ ಧರ್ಮರಕ್ಷಣೆ. ಇದರ ಆಳ ಅಗಲ ಈಗ ಅರ್ಥ ವಾಗದ ಕಾರಣ ಸ್ತ್ರೀ ವಿರೋಧಿಸಿ ಹೊರಬಂದಿರೋದು.
ಆಧ್ಯಾತ್ಮಿಕ ಸಾಧನೆಆಂತರಿಕ ಹೋರಾಟದಿಂದ ಮಾಡಬೇಕೆನ್ನುವುದೆ ಅಂದಿನ ಸ್ತ್ರೀ ಯರ ಧರ್ಮ ವಾಗಿತ್ತು. ಅತಿಯಾದ ಅಜ್ಞಾನದಲ್ಲಿ ಇದನ್ನು ಅಪಾರ್ಥ ಮಾಡಿಕೊಂಡ ಪುರುಷ ಸ್ತ್ರೀ ಯ ಜ್ಞಾನವನ್ನು ಹಿಂದುಳಿಸಿ ಆಳೋ ತನಕ ಮುಂದೆ ನಡೆದು ಕಲಿಗಾಲದಲ್ಲಿ ಸ್ತ್ರೀ ತನ್ನ ಅಸ್ತಿತ್ವಕ್ಕೆ ತಿರುಗಿ ನಿಂತ ಮೇಲೆ ಸಂಸಾರದಲ್ಲಿ ಸಮಸ್ಯೆಗಳು ಹೆಚ್ಚಾಗಿದೆ. ಭೂಮಿಯ ಮೇಲಿರುವ ಮನುಕುಲಕ್ಕೆ ಭೂಮಿ ಋಣ ತೀರಿಸೋ ಜ್ಞಾನವಿಲ್ಲವಾದರೆ ಮುಕ್ತಿ ಯಿಲ್ಲ.
ಹೀಗಾಗಿ ಧಾರ್ಮಿಕ ಕಾರ್ಯಕ್ರಮ ದ ಮೂಲಕ ಮನುಕುಲದ ಒಳಿತನ್ನು ಕಾಣಬಹುದು. ಇದರಲ್ಲಿ ಸ್ತ್ರೀ ಗೆ ಸ್ವಾತಂತ್ರ್ಯ ಹೆಚ್ಚಿದ್ದು ಭೂಮಿಯನ್ನು ಸದ್ಭಳಕೆ ಮಾಡಿಕೊಳ್ಳಲು ಪುರುಷರಿಗೆ ಸರಿದಾರಿ ತೋರಿಸುವ ಜ್ಞಾನವಿದ್ದರೆ ಭೂಮಿಯಲ್ಲಿ ಧರ್ಮ,ಸತ್ಯ,ನ್ಯಾಯ, ನೀತಿ ಇದ್ದು ಜೀವ ಶಾಂತಿ ಪಡೆಯುತ್ತದೆ.
ಇದಕ್ಕೆ ಸ್ತ್ರೀ ಗೆ ಆಧ್ಯಾತ್ಮ ಶಿಕ್ಷಣ ಜ್ಞಾನದ ಶಿಕ್ಷಣ ನೀಡುವುದು ಅಗತ್ಯ. ವಿಪರ್ಯಾಸವೆಂದರೆ, ಸ್ತ್ರೀ ಯರ ಸಹಕಾರ ಬೇಕು ಸತ್ಯ ಬೇಡ ಎನ್ನುವ ರೀತಿಯಲ್ಲಿ ಸತ್ಯವನ್ನು ಹಿಂದೆ ನಿಲ್ಲಿಸಿ ಧರ್ಮವನ್ನು ವ್ಯವಹಾರಕ್ಕೆ ಬಳಸಿದರೆ ಭೂಮಿಯಲ್ಲಿ ಧರ್ಮ ರಕ್ಷಣೆ ಆಗುವುದೆ? ನಾರಿಯನ್ನು ಮರೆತರೆ ಮಾರಿಯ ದರ್ಶನವಾಗುವುದೆನ್ನುವುದು ಸತ್ಯ.
ಸ್ತ್ರೀ ಗೆ ವ್ಯಾಮೋಹ,ಆಸೆ,ಆಕಾಂಕ್ಷೆಗಳು ಹೆಚ್ಚಾಗಿ ಸ್ತ್ರೀ ಗೆ ಸ್ತ್ರೀ ಯೇ ಶತ್ರುಗಳಾದಂತೆ ಭೂಮಿಯಲ್ಲಿ ಅಧರ್ಮ ಬೆಳೆಯುತ್ತದೆ. ಎಲ್ಲಿಯವರೆಗೆ ಸ್ತ್ರೀ ಗೆ ಜೀವನದ ಮುಖ್ಯ ಉದ್ದೇಶಆತ್ಮಜ್ಞಾನದಿಂದ ಅರ್ಥವಾಗುವುದಿಲ್ವೋ ಅಲ್ಲಿಯವರೆಗೆ ಸಂಸಾರದಲ್ಲಿ ಸಮಾನತೆಯೂ ಇರದೆ ಒಬ್ಬರನ್ನೊಬ್ಬರು ತುಳಿದು ಆಳುವ ರಾಜಕೀಯವಿದ್ದು ಶಾಂತಿ ಕೆಡುತ್ತದೆ.
ಒಟ್ಟಿನಲ್ಲಿ ಭೂಮಿ ನಡೆದಿರೋದೆ ಸ್ತ್ರೀ ಶಕ್ತಿಯ ಜ್ಞಾನ ವಿಜ್ಞಾನದಿಂದ. ಇದನ್ನು ಸದ್ಬಳಕೆ ಮಾಡಿ ಜೀವನ ನಡೆಸೋ ಅಧಿಕಾರ ಸ್ವಾತಂತ್ರ್ಯ. ಸ್ತ್ರೀ ಗೆ ಇಲ್ಲದ ಮೇಲೆ ಭೂಮಿ ಋಣ ತೀರಿಸಲಾಗುವುದೆ?
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು