spot_img
spot_img

ರೈತರಿಗೆ ಬಂತು ಇದೆಂಥ ದುರವಸ್ಥೆ ? ನಾವು ಎಚ್ಚರಗೊಳ್ಳುವುದು ಯಾವಾಗ ?

Must Read

spot_img
- Advertisement -

ಎಂಥ ದುರವಸ್ಥೆ ಕರ್ನಾಟಕದ ರೈತರಿಗೆ ಬಂದಿತು ನೋಡಿ. ಶತಮಾನಗಳ ಕಾಲದಿಂದಲೂ ತಮ್ಮ ಅಜ್ಜ ಮುತ್ತಜ್ಜನ ಕಾಲದಿಂದಲೂ ಅನುಭವಿಸುತ್ತ ಬಂದಿದ್ದ ಜಮೀನು ಒಂದೇ ರಾತ್ರಿಯಲ್ಲಿ ವಕ್ಫ್ ಎಂಬ ಸಂಸ್ಥೆಯ ಹೆಸರಿಗೆ ಬದಲಾವಣೆಯಾಗಿದೆ ! ಅಲ್ಲ, ಒಬ್ಬರು ಜಮೀನು ಖರೀದಿ ಮಾಡಿ, ನೋಂದಣಿ ಮಾಡಿದ ಮೇಲೆ ಅದು ಅವರ ಹೆಸರಿಗೆ ಬದಲಾವಣೆಯಾಗಬೇಕಾದರೆ ಕನಿಷ್ಠ ಒಂದು ತಿಂಗಳಾದರೂ ಸಮಯ ಬೇಕು ಆದರೆ ಇಲ್ಲಿ ಆಗಿದ್ದೇನು ? ನಿನ್ನೆ ತಮ್ಮದೆಂದುಕೊಂಡ ರೈತರ ಜಮೀನು ಇವತ್ತು ವಕ್ಫ್ ಹೆಸರಿನಲ್ಲಿ ಆಗಿ ಬಂದಿದೆ. ಒಂದು ಉತಾರದಲ್ಲಿ ಹೆಸರು ಬದಲಾವಣೆಯಾಗಬೇಕಾದರೆ ಅದು ಸರ್ಕಾರದ ಗಮನಕ್ಕೆ ಬರದೇ ಆಗಿರುತ್ತದೆಯೆ ? ಇದಕ್ಕೆ ಕಾಂಗ್ರೆಸ್ ಸರ್ಕಾರ, ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರ ನೀಡಬೇಕು.

ವಕ್ಫ್ ಎನ್ನುವುದು ಏನು ? ಅದೊಂದು ಸಂಸ್ಥೆ. ಅದು ಸಾವಿರಾರು ಎಕರೆ ಜಮೀನು ಹೊಂದಬಹುದು ಅದೂ ಖರೀದಿ ಮಾಡಿ, ನೋಂದಣಿ ಮಾಡಿಕೊಂಡು ಅನುಭವಿಸಬಹುದು. ಆದರೆ ಏಕಾಏಕಿ ರೈತರ ಜಮೀನುಗಳ ಉತಾರದಲ್ಲಿ ಇದು ವಕ್ಫ್ ಜಮೀನು ಅಂತ ಬರಹ ಬಂದರೆ ರೈತ ಕಂಗಾಲಾಗದೆ ಇನ್ನೇನು ಮಾಡಬೇಕು? ಇದು ಎಂಥ ದರಿದ್ರ ಸರ್ಕಾರ ? ಒಂದು ವರ್ಗದ ಓಲೈಕೆಗಾಗಿ, ಮತಗಳಿಗಾಗಿ ಬಹುಸಂಖ್ಯಾತರ ಬದುಕಿಗೇ ಕೊಳ್ಳಿ ಇಡಬಹುದೇ ? ಸರ್ಕಾರದ ನಾಯಕರೂ ಮನುಷ್ಯರೇ ಅಲ್ಲವೆ ಇವರಿಗೆ ಮನುಷ್ಯತ್ವವೆನ್ನುವುದೇ ಇಲ್ಲವೆ ? ತಮಗೆ ಓಟು ಹಾಕುತ್ತಾರೆ ಎಂಬ ಕಾರಣಕ್ಕೆ ಒಂದೇ ವರ್ಗಕ್ಕೆ ಎಕರೆಗಟ್ಟಲೆ ಸರ್ಕಾರಿ ಜಮೀನನ್ನು ಕಬಳಿಸಲು ಬಿಡಬಹುದೇ ? ಮುಗ್ಧ ರೈತರ ಜಮೀನನ್ನು ಕಬಳಿಸಲು ಬಿಡಬಹುದೇ ? ವಿಚಿತ್ರ ನೋಡಿ, ಈ ವಕ್ಫ್ ಎಂಬ ಸಂಸ್ಥೆ ಕಾಲಿಟ್ಟ ಜಮೀನು ಅದರದೇ ಅಂತೆ, ಅದು ತನಗೆ ಹೇಗೆ ಬಂತು ಅಂತ ಅದು ದಾಖಲೆ ತೋರಿಸುವ ಅಗತ್ಯ ಇಲ್ಲವಂತೆ, ಜಮೀನು ಕಳಕೊಂಡವರು ದೇಶದ ಯಾವುದೇ ಕೋರ್ಟಿಗೆ ಹೋಗಲು ಬರುವುದಿಲ್ಲವಂತೆ ಹೋದರೆ ತನ್ನ ದಾಖಲೆ ತೆಗೆದುಕೊಂಡು ವಕ್ಫ್ ಕೋರ್ಟಿಗೇ ಹೋಗಬೇಕಂತೆ, ನ್ಯಾಯ ಕೇಳಬೇಕಂತೆ. ಇದು ಒಂಥರ ಇಲಿಯು ನ್ಯಾಯ ಕೇಳಲು ಬೆಕ್ಕಿನ ಹತ್ತಿರ ಹೋದಂತಾಗಲಿಲ್ಲವೆ ? ಇಂಥ ಕಾನೂನು ಮಾಡಿ ಇಟ್ಟಂಥ ಕಾಂಗ್ರೆಸ್ ನಾಯಕರು ಹಾಗೂ ಅವರನ್ನು ಹೆತ್ತ ತಂದೆ ತಾಯಿಯರ ಜೀವನ ಧನ್ಯವೇ ಅಲ್ಲವೆ ?
ಈ ವಕ್ಫ ಪ್ರಕರಣ ನೋಡಿದಾಗ ಇವರಿಗೆ ಮನುಷ್ಯತ್ವವೇ ಇಲ್ಲ ಅಂತ ಅನ್ನಿಸುತ್ತದೆ. ಯಾಕೆಂದರೆ, ಉತಾರದಲ್ಲಿ ಇದು ವಕ್ಫ್ ಆಸ್ತಿ ಅಂತ ತೋರಿಸಿ ರೈತರಿಗೆ ನೋಟೀಸು ಕೊಟ್ಟ ನಂತರ ಒಂದು ಸರ್ಕಾರದ ಜವಾಬ್ದಾರಿಯುತ ಸಚಿವರಾದ ಎಮ್ ಬಿ ಪಾಟೀಲರು ತಪ್ಪಾಗಿ ನೋಟಿಫಿಕೇಶನ್ ಆಗಿದೆ ಎಂಬ ಹೇಳಿಕೆ ಕೊಡುತ್ತಾರೆ. ನೋಟೀಸು ಕೊಟ್ಟಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ಕೊಡುತ್ತಾರೆ. ಆಮೇಲೆ ನೋಟೀಸನ್ನು ಹಿಂತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ, ಮೊದಲು ನೋಟೀಸು ಯಾಕೆ ಕೊಡಬೇಕಿತ್ತು ? ಮುಡಾದಲ್ಲಿ ನಿವೇಶನ ನುಂಗಿದ ಕೇಸಿನಲ್ಲಿ ಬಿಸಿಯಾಗಿರುವ ಮುಖ್ಯಮಂತ್ರಿಗಳು ಬಾಯಿ ಬಿಡುತ್ತಿಲ್ಲ. ಇದರರ್ಥ ರೈತರ ಜಮೀನು ಹೋಗಿದ್ದಕ್ಕೆ ಇವರದು ಮೌನ ಸಮ್ಮತಿಯೇ ?
ಮೊದಲೇ ರೈತ ಸಂಕಷ್ಟದಲ್ಲಿದ್ದಾನೆ. ಅನಿಯಮಿತ ಹವಾಮಾನ, ಬೆಲೆ- ಬೆಳೆ ಕುಸಿತ, ಸಾಲಸೋಲದ ಒತ್ತಡದಲ್ಲಿ ಸಿಲುಕಿ ನರಳುತ್ತಿರುವಾಗಲೇ ಈ ವಕ್ಫ್ ದಾಳಿ ಎಂಬ ಭೂತವನ್ನು ರೈತನ ಮೈಮೇಲೆ ಎಸೆದರೆ ರೈತ ಹೇಗೆ ತಾಳಬೇಕು ? ಇದು ಆಳುವ ನಾಯಕರಿಗೆ ಅರ್ಥವಾಗುವುದಿಲ್ಲವೆ ? ಅಷ್ಟಕ್ಕೂ ಈ ಅನ್ಯಾಯದ ವಿರುದ್ಧ ಹೇಳಿಕೆ ನೀಡಲು ಬಿಜೆಪಿ ನಾಯಕರಷ್ಟೇ ಬೇಕಾ ? ಯಾವ ಕಾಂಗ್ರೆಸ್ ನಾಯಕರಿಗೂ ರೈತರ ಬಗ್ಗೆ ಕಾಳಜಿ ಇಲ್ಲವೆ ? ರೈತರು ಕಾಂಗ್ರೆಸ್ ನಾಯಕರಿಗೆ ಮತ ಹಾಕಿಲ್ಲವೆ…..?
ಭಯವಾಗುತ್ತಿದೆ. ಇಂಥ ಬೇಜವಾಬ್ದಾರಿ, ಅಧಿಕಾರ ದಾಹಿ ಸರ್ಕಾರ, ವ್ಯಕ್ತಿಗಳು ಇದ್ದರೆ ಭವಿಷ್ಯದಲ್ಲಿ ನಮ್ಮ ಅಸ್ತಿ, ಪಾಸ್ತಿ, ಬಾಳು-ಬದುಕು, ಮಾನ- ಪ್ರಾಣಗಳ ಗತಿಯೇನು ? ಇವರು ಹಗರಣಗಳನ್ನು ಮಾಡುತ್ತಾರೆ ತನಿಖೆಗೆ ನಿಂತ ಸಂಸ್ಥೆಯನ್ನೇ ನಿರ್ಬಂಧಿಸುತ್ತಾರೆ. ನಿವೇಶನಗಳನ್ನು ನುಂಗಿದರೂ ನೈತಿಕತೆ ಹೊರದೇ ಭಂಡತನ ತೋರಿ ಅಧಿಕಾರ ನಡೆಸುತ್ತಾರೆ, ಹಿಂದೆ ಅಂಥವರು ತಿಂದಿಲ್ಲವಾ? ನಾನೇಕೆ ತಿನ್ನಬಾರದು ? ಎಂಬ ಭಂಡತನ ಬೇರೆ !, ದಲಿತರ, ಹಿಂದುಳಿದವರ ಉದ್ಧಾರದ ಮಾತನಾಡಿ ಅವರದೇ ಹೆಸರಿನಲ್ಲಿ ಕೋಟ್ಯಂತರ ಹಣ ನುಂಗಿ ಜೈಲು ಸೇರಿದರೂ ಅಂಥವರಿಗೆ ಸನ್ಮಾನ ಮಾಡುತ್ತಾರೆ. ಬಾಂಬ್ ಸ್ಫೋಟ ಮಾಡಿದವರನ್ನು, ಕಲ್ಲೆಸೆದವರನ್ನು ಅಮಾಯಕರು ಎನ್ನುತ್ತಾರೆ, ಸರ್ಕಾರದ ದುಡ್ಡು ಪುಕ್ಕಟ್ಟೆಯಾಗಿ ಕೆಲವೇ ಜನರಿಗೆ ಕೊಟ್ಟಂತೆ ಮಾಡಿ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ, ಮುಗ್ಧ ಯುವಕರಿಗೆ ಉಚಿತದ ಚಟ ಹಚ್ಚಿ ಹಾಳುಗೆಡವಿ ನಗೆ ಬೀರುತ್ತಾರೆ, ಉಚಿತ ಕೊಡಲು ಇತರೆ ದರಗಳನ್ನು ಹೆಚ್ಚಿಸಿ ಮಧ್ಯಮ ವರ್ಗದವರ ಬದುಕಿಗೆ ಬೆಂಕಿ ಇಡುತ್ತಾರೆ….. ಹೀಗೆ ಒಂದೇ ಎರಡೇ
ನಿಜವಾಗಲೂ ಭಯವಾಗುತ್ತಿದೆ. ಇದಕ್ಕೆ ಪರಿಹಾರವೇನು ? ನಮ್ಮಲ್ಲಿ ಪ್ರಜ್ಞಾವಂತಿಕೆ ಬೆಳೆಯುವುದು ಯಾವಾಗ ? ಒಗ್ಗಟ್ಟು ಮೂಡುವುದು ಯಾವಾಗ ? ಯಾಕೆಂದರೆ, ಇವರು ನಮ್ಮಲ್ಲಿ ಮಾತ್ರ ಜಾತ್ಯತೀತತೆ, ಉದಾರತೆ ಎಂಬ ಬೀಜಗಳನ್ನು ಬಿತ್ತಿದ್ದಾರೆ. ಇತರೆ ಧರ್ಮದವರಿಗೆ ಅದು ಅನ್ವಯಿಸದಂತೆ ತುಂಬ ಚಾಕಚಕ್ಯತೆಯಿಂದ ಮೋಸ ಮಾಡಿದ್ದಾರೆ. ನಾವು ಎಚ್ಚರಗೊಳ್ಳುವುದು ಯಾವಾಗ ?

ಉಮೇಶ ಬೆಳಕೂಡ, ಮೂಡಲಗಿ
ಅಧ್ಯಕ್ಷರು, ಭಾರತೀಯ ಕಿಸಾನ್ ಸಂಘ, ತಾಲೂಕಾ ಘಟಕ.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group