ಸವದತ್ತಿ – “ಗ್ರಾಮಗಳಲ್ಲಿನ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಮತ್ತು ಎಲ್ಲೇ ಹೋದರು ಕಡ್ಡಾಯವಾಗಿ ರಸ್ತೆ ಸಂಚಾರದ ನಿಯಮಗಳನ್ನು ಪಾಲಿಸಬೇಕು. ಅಲ್ಲದೇ ಬಹು ಮುಖ್ಯವಾಗಿ ಬೈಕ್‍ಗಳನ್ನು ಚಲಾಯಿಸಬೇಕಾದರೆ ಕಡ್ಡಾಯವಾಗಿ ವಾಹನ ಚಾಲನಾ ಪರವಾನಿಗೆ ಪತ್ರವನ್ನು ಇಟ್ಟುಕೊಂಡೇ ಹೆಲ್ಮೆಟ್ ಧರಿಸಿಕೊಂಡು ವಾಹನ ಚಲಾಯಿಸಬೇಕು.
ಪರವಾನಿಗೆ ಪತ್ರ ಇಲ್ಲದೇ ವಾಹನ ಚಲಾಯಿಸುವುದು ಕಾನೂನಿನ ಪ್ರಕಾರ ಅಪರಾಧ..ಹಾಗೂ ಈಗ 112 ತುರ್ತು ಸೇವೆಗೆ ಸಾರ್ವಜನಿಕರು ಕರೆ ಮಾಡಿದರೆ ಅದರಿಂದ ನಮ್ಮ ಪೋಲಿಸ 112 ಸೇವೆಯ ಮೂಲಕ ನಾವು ಸಮಸ್ಯೆಗಳನ್ನು ಪರಿಹರಿಸುತ್ತೇವೆ” ಎಂದು ಸವದತ್ತಿ ಪಿ ಎಸ್ ಐ ಶಿವಾನಂದ ಗುದುಗನಟ್ಟಿ ಯವರು ಮಾತನಾಡಿದರು.
ಅವರು ಸವದತ್ತಿ ತಾಲೂಕಿನ ಬೈಲಹೊಂಗಲ ಮತ ಕ್ಷೇತ್ರದ ಅಸುಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ 112 ತುರ್ತುಸೇವೆಯ ತಿಳಿವಳಿಕೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಕುರಿತು ಮಾತನಾಡಿದರು.
ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಜಗದೀಶ ತೋಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಪ್ರಶಾಂತ ಹಂಪಣ್ಣವರ.ಶ್ರೀಶೈಲ.ಮಲ್ಲೂರ.ಶಂಕರ ಮಡಿವಾಳರ.ಅಜ್ಜಪ್ಪ ತೊರಗಲ್ಲ.ಸೇರಿದಂತೆ ಗ್ರಾಮದ ಮುಖಂಡರು ವೇದಿಕೆ ಮೇಲೆ ಉಪಸ್ಥಿತರಿದ್ದರು ಶಿಕ್ಷಕ ಆನಂದ ಬಾನಿ ಕಾರ್ಯಕ್ರಮ ನಿರೂಪಿಸಿದರು.