spot_img
spot_img

ಅರಭಾವಿ ಕ್ಷೇತ್ರದ ಅಶ್ವಮೇಧ ಕುದುರೆ ಕಟ್ಟುವವರು ಯಾರು?

Must Read

spot_img
- Advertisement -

ಮೂಡಲಗಿ: ಮತ್ತೊಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಅರಭಾವಿ ಕ್ಷೇತ್ರ. ಅರಭಾವಿ 1967 ರಲ್ಲಿ ಎ.ಆರ್.ಪಂಚಗಾವಿ( INC)ಕಾಂಗ್ರೆಸ್ ಪಕ್ಷದಿಂದ ಆಯ್ಕೆ.1972 ಕೆ.ವಿ.ಶಿವಲಿಂಗಪ್ಪ(INC)ಕಾಂಗ್ರೆಸ್ ಪಕ್ಷ ಮರು ಆಯ್ಕೆ ಮತ್ತು 1978 ರಿಂದ ಕಾಂಗ್ರೆಸ್ ಪಕ್ಷದಿಂದ ವ್ಹಿ.ಎಸ್.ಕೌಜಲಗಿ ಸತತವಾಗಿ ಐದು ಬಾರಿ ಆಯ್ಕೆ ಆಗಿರುತ್ತಾರೆ.1985 ರಲ್ಲಿ ವ್ಹಿ.ಎಸ್.ಕೌಜಲಗಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ “ಬಿ” ಫಾರ್ಮ್ ಸಿಗಲಿಲ್ಲ ಆದಕಾರಣ ಸ್ವತಂತ್ರ “ಆನೆ” ಚಿಹ್ನೆಗೆ ನಿಂತು,ಜನತಾ ಪಕ್ಷದ ಅಭ್ಯರ್ಥಿ ಆರ್.ಎಮ್.ಪಾಟೀಲ ಎದುರು ಸೋತರು. ಮತ್ತೆ 1989 ರಿಂದ ಕಾಂಗ್ರೆಸ್ ಪಕ್ಷದಿಂದ ವ್ಹಿ.ಎಸ್.ಕೌಜಲಗಿ ಅವರು 1999 ರವರೆಗೆ ಅಭ್ಯರ್ಥಿಯಾಗಿ ಆಯ್ಕೆ ಆದರು. ಒಟ್ಟು ಐದು ಬಾರಿ ಅರಭಾವಿ ಕ್ಷೇತ್ರದಿಂದ ಶಾಸಕರಾಗಿದ್ದರು.

2004 ರಲ್ಲಿ ಜೆಡಿಎಸ್ ಪಕ್ಷದಿಂದ ಮೊದಲ ಬಾರಿಗೆ ಬಾಲಚಂದ್ರ ಜಾರಕಿಹೊಳಿ ಶಾಸಕರಾದರು.2009 ರಿಂದ ಬಿಜೆಪಿಯಿಂದ ಸತತವಾಗಿ ಆಯ್ಕೆ ಆಗುತ್ತಿದ್ದಾರೆ.  ಯಾವುದೇ ಚುನಾವಣೆ ಬರಲಿ,ಯಾರೇ.. ಗೆಲ್ಲಲಿ  ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಮತದಾರರು ಹೇಳುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಮತದಾರರು ಬಹಳ ಬುದ್ದಿವಂತರು, ತಮ್ಮ ಗುಟ್ಟನ್ನು ಕೊನೆಯವರೆಗೂ ಬಿಟ್ಟು ಕೊಡುವುದಿಲ್ಲ. ಮತದಾರರು ಕೂಡಾ ನೆನಪಿಗೆ ಬರವುದು ಇದೇ ಸಮಯದಲ್ಲಿ. ದಿ.ವ್ಹಿ.ಎಸ್.ಕೌಜಲಗಿ ಪ್ರತಿನಿಧಿಸುವ ಅರಭಾವಿ ಮತಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತು ಒಂದು ಕಾಲದಲ್ಲಿ,ಈಗ ಬಿ.ಜೆ.ಪಿ ತನ್ನ ಮಡಿಲಿನಲ್ಲಿ ಹಾಕಿಕೊಂಡಿದೆ. ಚುನಾವಣೆಯ ಸಮಯದಲ್ಲಿ  ನಮ್ಮ ಅತಿಯಾದ ನಂಬಿಕೆ ಕೂಡಾ ಬುಡಮೇಲು ಆಗಿರುವುದು ಕಂಡಿದ್ದೇವೆ.

- Advertisement -

2023ರ ಚುನಾವಣೆಯಲ್ಲಿ ಯಾರಿಗೆ ಗೆಲುವಿನ ಮಾಲೆ ಮತದಾರರು ಹಾಕುತ್ತಾರೆ ಕಾದು ನೋಡಬೇಕು. ಚುನಾವಣೆಯಲ್ಲಿ ಸೋಲು- ಗೆಲುವು ಮತದಾರರೆ ನಿರ್ಣಾಯಕರಾಗಿರುತ್ತಾರೆ, ಕೊನೆಯ ಕ್ಷಣದಲ್ಲಿ ಯಾವುದೇ ಸಮೀಕ್ಷೆ ಯನ್ನು ಸುಳ್ಳು ಅಂತ ಸಹ ನಿರೂಪಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಆರು ಜನ ಅಭ್ಯರ್ಥಿಗಳ ಆಕಾಂಕ್ಷಿಗಳು ಇದ್ದಾರೆ ಅರವಿಂದ ದಳವಾಯಿ, ಭೀಮಶಿ ಗಡದ,ಭೀಮಶಿ ಹಂದಿಗುಂದ,ಲಕ್ಕಣ್ಣ ಸವಸುದ್ದಿ,ರಮೇಶ ಉಟಗಿ ಮತ್ತು ಮಲ್ಲಿಕಾರ್ಜುನ ಕಬ್ಬೂರ ಕೊನೆಯ ಕ್ಷಣದಲ್ಲಿ ಯಾರಿಗೆ “ಬಿ” ಫಾರ್ಮ ಸಿಗುವುದು ಕಾದುನೋಡಬೇಕು.ಜೆ ಡಿ ಎಸ್ ನಿಂದ ಸತೀಶ ಒಂಟಗೂಡಿ, ಈರಣ್ಣ ಕೊಣ್ಣೂರು ಮತ್ತು ಕಾಡಪ್ಪ ಕಾಳಶೆಟ್ಟಿ,ಇಂದಿನ ಸ್ಥಿತಿ ನೋಡಿದರೆ ಆಮ್ ಆದ್ಮಿ ಪಕ್ಷದ ಅಬ್ಬರ ಕಾಣುತ್ತಿಲ್ಲ ಅರಭಾವಿಯಲ್ಲಿ. ಬಿ.ಜೆ.ಪಿಯಿಂದ ಬಾಲಚಂದ್ರ ಜಾರಕಿಹೊಳಿಯವರು ಸ್ಫರ್ಧೆ ಖಚಿತ.ಒಂದೊಂದು ಕ್ಷೇತ್ರದಲ್ಲಿ ಹಣದ ಪ್ರಭಾವ, ಮತ್ತೊಂದು ಕ್ಷೇತ್ರದಲ್ಲಿ ಜಾತಿ ಪ್ರಭಾವದಿಂದಾಗಿ ಆಯ್ಕೆ ಆಗುತ್ತಿದ್ದರೆ, ಇನ್ನೊಂದು ಕಡೆ ಅವರ ಮಾಡಿದ ಒಳ್ಳೆಯ ಕಾರ್ಯಕೂಡಾ ಕೈಹಿಡಿದಿರುವುದು ಸುಳ್ಳಲ್ಲ.

ಅರಭಾವಿ ಕ್ಷೇತ್ರ  ಸುಮಾರು 2 ಲಕ್ಷ ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ. ಲೆಕ್ಕ ಹಾಕಿದರೆ ಲಿಂಗಾಯತರ ಸಂಖ್ಯೆ ಹೆಚ್ಚು ಕುರುಬರು ಮತ್ತು ಉಪ್ಪಾರ ಸಮುದಾಯದರು ನಿರ್ಣಾಯಕ ಆಗುತ್ತಾರೆ. ದಲಿತರು,ಮುಸ್ಲಿಮರು ಹಾಗೂ ಇನ್ನು ಹಲವಾರು ಚಿಕ್ಕ-ಪುಟ್ಟ ಜಾತಿಗಳನ್ನು ತನ್ನ ಮಡಿಲಿನಲ್ಲಿ ಇಟ್ಟುಕೊಂಡಿರುವ ಅರಭಾವಿ ಮತಕ್ಷೇತ್ರದಲ್ಲಿ ಯಾರ ಮಡಿಲಿಗೆ ಎಷ್ಟೆಷ್ಟು ಮತ ಬೀಳುವುದೋ ಕಾದು ನೋಡಬೇಕು. ಮತದಾನ ಫಲಿತಾಂಶ ಬರುವವರೆಗೂ. ಮತದಾರರನ್ನು ಸೆಳೆಯಲು ಪಕ್ಷಗಳ ಭರವಸೆಯ ಮಹಾಪೂರವೇ ಹರಿದು ಬರುತ್ತಿರುವುದು. ಅವುಗಳಲ್ಲಿ ಎಷ್ಟು ಭರವಸೆಗಳು ಈಡೇರಿಸಲ್ಪಡುತ್ತವೆ ನೋಡಬೇಕು.


- Advertisement -

ಸುಭಾಸ ಕಡಾಡಿ, ಮೂಡಲಗಿ

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group