- Advertisement -
ಹೊಸದಿಲ್ಲಿ – ತಮ್ಮ ಆಮ್ ಆದ್ಮಿ ಪಕ್ಷದಲ್ಲಿನ ಯಾರೋ ಒಬ್ಬರು ದೆಹಲಿ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಲಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಆಪ್ ನ ಎರಡನೆ ದೊಡ್ಡ ನಾಯಕ ಮನೀಷ್ ಸಿಸೋಡಿಯಾ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು
ಸಾರಾಯಿ ಹಗರಣದಲ್ಲಿ ತಮಗೆ ಜಾಮೀನು ಸಿಕ್ಕು ಜೈಲಿನಿಂದ ಹೊರಬಂದಿದ್ದ ಕೆಜ್ರಿವಾಲ್ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿ, ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರನ್ನು ಭೇಟಿಯಾಗುವುದಾಗಿ ಪ್ರಕಟಿಸಿದ್ದಾರೆ.
- Advertisement -
ಮೂಲಗಳ ಪ್ರಕಾರ ದೆಹಲಿ ಮುಖ್ಯಮಂತ್ರಿ ರೇಸ್ ನಲ್ಲಿ ಆಪ್ ಸಚಿವರಾದ ಆತಿಶಿ, ಗೋಪಾಲ ರಾಯ್, ಹಾಗೂ ಕೈಲಾಶ್ ಗೆಹಲೋಟ್ ಇದ್ದು ಮನೀಷ್ ಸಿಸೋಡಿಯಾ ಮುಖ್ಯಮಂತ್ರಿಯಾಗುವ ಸಾಧ್ಯತೆಯನ್ನು ಕೇಜ್ರಿವಾಲ್ ತಳ್ಳಿಹಾಕಿದ್ದಾರೆ.