spot_img
spot_img

ಆಷಾಢ ದೇವತೆ ಯಾರು?

Must Read

spot_img
- Advertisement -

ಆಷಾಢ ಮಾಸದ ಶುಕ್ರವಾರದಂದು ಆಷಾಢ ದೇವತೆಗೆ ಎಲ್ಲೆಡೆ ವಿಶೇಷ ಪೂಜೆ ಸಲ್ಲಿಸಲ್ಲಾಗುತ್ತದೆ. ಆಷಾಢ ದೇವತೆ ಯಾರು? ಪೌರಾಣಿಕ ಹಿನ್ನೆಲೆ ಏನು ಎಂಬುದರ ಕುರಿತ ಬರಹ ಇಲ್ಲಿದೆ. ಅದರಲ್ಲೂ ಮೇಘಣಿ ವಂಶಸ್ಥರು ವಿಶೇಷವಾಗಿ ಆಷಾಢ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಈ ಕುರಿತು ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಷಾಢ ಇಂದ್ರಲೋಕದ ದೇವತೆ. ಒಮ್ಮೆ ಆಷಾಢ ಶಿವನನ್ನು ನೋಡುವ ಬಯಕೆಯಿಂದ ನಾಗಕನ್ಯೆಯ ರೂಪವನ್ನು ತಾಳಿ ಕೈಲಾಸವನ್ನು ಪ್ರವೇಶಿಸುತ್ತಾಳೆ. ಆಗ ಶಿವ ಧ್ಯಾನಸ್ಥನಾಗಿರುತ್ತಾನೆ. ಶಿವನನ್ನು ಕಂಡೊಡನೆ ಆಕೆ ಪಾರ್ವತಿಯ ರೂಪವನ್ನು ಧರಿಸಿ ಶಿವನ ಪಕ್ಕ ಆಸೀನಳಾಗುತ್ತಾಳೆ.

ಎಲ್ಲವನ್ನು ಬಲ್ಲ ಆ ಮಹಾದೇವ ಆಕೆಯ ಕುತಂತ್ರವನ್ನು ತಿಳಿದು ಕೋಪನಿಷ್ಠನಾಗುತ್ತಾನೆ. ಕೋಪಾಗ್ನಿಯಿಂದ ಶಿವ ತ್ರಿಶೂಲದಿಂದ ಆಕೆಯನ್ನು ದೂರ ಸರಿಯೆಂದು ತಿವಿಯುತ್ತಾನೆ. ತ್ರಿಶೂಲದಿಂದ ಹೊರಟ ಜ್ವಾಲಾಗ್ನಿಯು ಆಷಾಢಳನ್ನು ಪರಿಶುದ್ಧಳನ್ನಾಗಿಸುತ್ತದೆ.

- Advertisement -

ಆದರೂ ಶಿವನ ಕೋಪ ಕಡಿಮೆಯಾಗುವುದಿಲ್ಲ. ಆಗ ಆಷಾಢ ಶಿವನಿಗೆ ತಲೆಬಾಗಿ ನಾನು ನಿಮ್ಮನ್ನು ಮೆಚ್ಚಿದ್ದರಿಂದ ಹೀಗೆ ಮಾಡಬೇಕಾಯಿತು. ನನ್ನ ತಪ್ಪನ್ನು ಮನ್ನಿಸಿ ಎಂದು ಶಿವನಲ್ಲಿ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದರೂ ಶಿವ ಆಕೆಯ ತಪ್ಪನ್ನು ಕ್ಷಮಿಸುವುದಿಲ್ಲ ಬದಲಿಗೆ ಭೂಲೋಕದಲ್ಲಿ ಕಹಿ ರುಚಿಯ ಬೇವಿನ ಮರವಾಗಿ ಜನಿಸು ಎಂದು ಶಾಪವನ್ನು ಕೊಡುತ್ತಾನೆ.

ಆಗ ಆಷಾಢ ಶಾಪ ವಿಮೋಚನೆಗಾಗಿ ಬೇಡಿಕೊಳ್ಳುತ್ತಾಳೆ. ಆಗ ಶಿವ ಭೂಲೋಕದಲ್ಲಿ ಬೇವಿನ ಮರವಾಗಿ ಜನಿಸಿದರೂ ಪೂಜಕ್ಕೆ ಅರ್ಹಳಾಗು ಎಂದು ಆಶೀರ್ವದಿಸುತ್ತಾನೆ. ಆ ಕಾರಣ ಆಷಾಢ ಮಾಸದಲ್ಲಿ ಪಾರ್ವತಿ ಸ್ವರೂಪಳಾದ ಬೇವಿನ ಮರವನ್ನು ಪೂಜಿಸುವ ವಾಡಿಕೆ ಇದೆ. ಹೀಗೆ ಭೂಮಿಯ ಮೇಲೆ ಬೇವಿನ ಮರವಾಗಿ ಜನಿಸಿದ ಆಷಾಢ ಪೂಜಾಹ೯ಳಾದಳು ಎನ್ನುತ್ತಾರೆ.

ಮೇಘಣಿ ವಂಶಸ್ಥರ ಬಗ್ಗೆ 

ಆಷಾಢ ಮಾಸದ ಸಮಯದಲ್ಲಿ ನಮ್ಮ ಮನೆದೇವತೆಯ ಪೂಜೆಯನ್ನು ಚಾಚು ತಪ್ಪದೆ ಆರಾಧಿಸಬೇಕು. ಏಕೆಂದರೆ ಸುಮಾರು 180-200  ವರ್ಷಗಳ ಹಿಂದೆ ನಮ್ಮ ತಾತಂದಿರು ಅಂದರೆ “ಮೇಘಣಿ ವಂಶಸ್ಥರು” ಕೊಲ್ಲೂರಿನ ಸಮೀಪದ ಮೇಘಣಿ ಎಂಬ ಹಳ್ಳಿಯಿಂದ ಕೃಷಿ ಕೆಲಸವನ್ನು ನಂಬಿಕೊಂಡು ಸಾಗರ ಸಮೀಪದ ಆವಿನಹಳ್ಳಿಯ ಪುಟ್ಟ ಗ್ರಾಮಕ್ಕೆ ವಲಸೆ ಬರಬೇಕಾಯಿತು. ಆ ಸಮಯದಲ್ಲಿ ಯಾವುದೇ ವಾಹನಗಳ ವ್ಯವಸ್ಥೆ ಇರುತ್ತಿರಲಿಲ್ಲ ಆದ ಕಾರಣ ಎತ್ತಿನ ಗಾಡಿಯನ್ನು ಬಳಸಿಕೊಂಡು ಬರುವ ಸಮಯದಲ್ಲಿ ಹಲವು ಕಷ್ಟಗಳು ಎದುರಾಗಿದ್ದವಂತೆ. ಅಂತಹ ಸಮಯದಲ್ಲಿ ಅಲ್ಲಿಯೇ ನೆಲೆಸಿರುವಂತಹ ಆದಿಮಾತೆ ಆಷಾಢಮ್ಮನ ಮೊರೆ ಹೋಗಬೇಕಾಯಿತು.

- Advertisement -

”ನಮ್ಮ ಕಷ್ಟಗಳು ಪರಿಹಾರವಾಗಿ ನಮ್ಮ ಈ ವಲಸೆ ಪ್ರಯಾಣವನ್ನು ಸುಗಮವಾಗಿ ನಡೆಸಿಕೊಟ್ಟಲ್ಲಿ ನಾವು ವಾಸಿಸುವಂತಹ ಸ್ಥಳದಿಂದ ನಿನಗೆ ಆಷಾಢ ಮಾಸದಲ್ಲಿ ತಪ್ಪದೆ ಪೂಜೆಯನ್ನು ಸಲ್ಲಿಸುತ್ತೇವೆ” ಎಂದು ನಮ್ಮ ಪೂರ್ವಜರು ಹೇಳಿಕೊಡಿದ್ದರಂತೆ ಎನ್ನುವ ವಾಡಿಕೆ ಇದೆ ಎನ್ನುತ್ತಾರೆ ಸಾಗರ ಸಮೀಪದ ಆವಿನಹಳ್ಳಿಯ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದು ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ  ಉದ್ಯೋಗದಲ್ಲಿರುವ” ಮೇಘಣಿ ವಂಶದ ಮಂಜುನಾಥ್ .ಎಂ.ಸಿ.

ಪೂಜಾ ವಿಧಾನ: ಆಷಾಢ ತಾಯಿಯನ್ನು ಕಂಚಿನ ಕಲಶದಲ್ಲಿ ಆವಾಹನೆ ಮಾಡಿ ಮತ್ತು ಅಲಂಕರಿಸಿ ಕುಟುಂಬದ ಎಲ್ಲಾ ಸದಸ್ಯರು ಸೇರಿ ಪೂಜೆ ಸಲ್ಲಿಸಿ ಊರಿನ ಜನರಿಗೆ ಅನ್ನಸಂತರ್ಪಣೆ ಮಾಡುವ ಒಂದು ವಿಶೇಷ ಪೂಜಾ ಪದ್ಧತಿಯನ್ನು ಮೇಘಣಿ ವಂಶಸ್ಥರು ನಡೆಸಿಕೊಂಡು ಬರುತ್ತಿರುತ್ತಾರೆ.


ನಿರೂಪಣೆ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group