spot_img
spot_img

ಊರ ಉಸಾಬರಿ ಯಾಕ ಬೇಕು !

Must Read

spot_img
- Advertisement -

ಅರೆರೆ ! ಊರ ಉಸಾಬರಿ ಯಾರು ಮಾಡ್ತಿದಾರೆ, ಹೇಗೆ ಮಾಡ್ತಿದಾರೆ ಅಂದುಕೊಳ್ತೀರಾ? ಅಯ್ಯೋ ಅದರಲ್ಲೇ ಕಾಲ ಕಳೆಯುವವರು ಒಂದಷ್ಟು ಜನರು ಇರ್ತಾರೆ. ಊರ ಹರಟೆ ಕಟ್ಟೆಗೆ ಕೂತು ಹರಟುವವರಿಗೆ ಅವರಿವರ ಕಂಡ ಕಂಡವರ ಕಂಡಾಪಟ್ಟೆ ವಿಷಯಗಳೇ ಸಿದ್ಧ ಸರಕುಗಳು.

ತಮ್ಮ ಸುತ್ತಲೂ ಏನು ನಡೆಯುತ್ತಿದೆ, ನಾನು ಏನು ಮಾಡಬೇಕು, ನನಗಾಗಿ ನಾನು ನನ್ನ ಬದುಕಿನಲ್ಲಿ ಗೆಲ್ಲಲು ತಯಾರಿ ನಡೆಸಬೇಕು ಎನ್ನುವವರಿಗಿಂತ ಅವರೇನು ಮಾಡ್ತಿದಾರೆ, ಇವರೇನು ಮಾಡ್ತಿದಾರೆ ಎನ್ನುವವರೇ ಹೆಚ್ಚು. ಇನ್ನು ಚುಚ್ಚು ಮಾತನಾಡಿ ಏನಾದರು ಸಾಧಿಸಿಯೇ ತಿರುತ್ತೇನೆ ಎನ್ನುವವರ ಧೈರ್ಯವನ್ನು ಕುಂದಿಸುವ ಅತಿಮಾನುಷ ಶಕ್ತಿ ಎಂದರೆ ಕೆಲವರಿಗೆ ರಕ್ತಗತವಾಗಿ ಆಡಿಕೊಂಡು ಕೆಲವರ ಕನಸ್ಸನ್ನು ಕೊಲ್ಲುವ ತಂತ್ರಗಾರಿಕೆ ಜನ್ಮಗತವಾಗಿಯೇ ಜನನಿತವಾಗಿರುತ್ತದೆ.

ತಾವೇ ಸತ್ತು, ಸೋತು ಸುಣ್ಣವಾದರೂ ಮುಚ್ಚಿದರೂ ಮುಚ್ಚಲಾರದಷ್ಟು ಸಂಗತಿಗಳು ಬಾಧಿಸುತ್ತಿದ್ದರು ಅವುಗಳನ್ನು ಸರಿಪಡಿಸಿಕೊಳ್ಳುವ ಗೋಜಿಗೆ ಹೋಗದೆ ಕಂಡಕಂಡವರ ವಿಚಾರಗಳನ್ನು ಹೊಟ್ಟೆತುಂಬುವಷ್ಟು ಆಡಿಕೊಳ್ಳುವವರು ಮಾತ್ರ ಹೆಜ್ಜೆ ಹೆಜ್ಜೆಗೂ ಸಿಕ್ತಾರೆ. ಹಿತೈಷಿಗಳಿಗಿಂತ ಹಿತಶತ್ರುಗಳು ಹೆಚ್ಚಾಗಿ, ಪ್ರೀತಿಪಾತ್ರರಿಗಿಂತ ವಿಷಘಾತುಕರೆ ಹೆಚ್ಚಾಗಿ ಇರುವ ಈ ಕಲಿಯುಗದಲ್ಲಿ ಎಚ್ಚರಿಕೆಯಿಂದ ಇರಬೇಕಾದ ಬುದ್ದಿವಂತಿಕೆಯನ್ನು ಕಲಿಯಬೇಕಿದೆ. ಅದೇನೇ ಆಗಿರಲಿ ಆಯ್ಕೆ ನಮ್ಮದೇ ಆಗಿರುತ್ತದೆ ನಾವು ಎಡವಿದಾಗಲು, ಎದ್ದು ನಿಂತಾಗಲೂ ಎರಡಕ್ಕೂ ನಾವೇ ಕಾರಣೀಕರ್ತರು ಹಾಗಾಗಿ ಯಾರನ್ನು ದೂಷಿಸಲು ಹೋಗಲೇಬಾರದು.

- Advertisement -

ಪ್ರತಿ ಏಳ್ಗೆಗೂ, ಪ್ರತಿ ಬೀಳ್ಗೆಗೂ ಒಂದೊಂದು ಪಾಠ ಕಲಿಯುತ್ತೇವೆ ಮತ್ತು ಹೊಸದಾದ ಅಧ್ಯಯನಕ್ಕೆ ಎಡೆ ಇಡುತ್ತೇವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ. ಅರೆರೆ! ಬದುಕಿನಲ್ಲಿ ನಾವು ಯಾರಿಗೂ ನೋವು ಕೊಟ್ಟವರಲ್ಲ, ಯಾರಿಗೂ ಕೆಟ್ಟದ್ದನ್ನ ಬಯಸಿದವರಲ್ಲ ಹೀಗಿರುವಾಗ ನಮಗೇಕೆ ಇಷ್ಟು ಕಷ್ಟ, ನಮಗೆ ಏಕೆ ಪ್ರತಿ ಸರಿ ನೋವು ಎಂದೆನಿಸ್ತಿದೆಯಾ, ಎಸ್ ಅವಾಗವಾಗ ಹೀಗೆ ಅನ್ನಿಸ್ತಿದೆ ಅಂದ್ರೆ ನೀವು ನಿಜವಾಗ್ಲೂ ಮನುಷ್ಯರಾಗಿ ಇದ್ದೀರಿ ಅನಿಸತ್ತೆ.

ಯಾಕೆ ಗೊತ್ತ ನಾನಾಯ್ತು ನನ್ನ ಕೆಲಸವಾಯ್ತು ಅಂದುಕೊಂಡವರಿಗೆ ಸಹಜವಾಗಿ ಹೀಗೆ ಅನ್ಸತ್ತೆ. ಒಳ್ಳೆಯತನ, ತನ್ನ ಕಾಯಕದ ಮೇಲೆ ನಿಷ್ಠೆ ಇರುವವರಿಗೆ ಇದ್ದಬದ್ದೋರ ವಿಚಾರಗಳನ್ನು ಆಡಿಕೊಳ್ಳಲು ಸಮಯವೂ ಇರುವುದಿಲ್ಲ ಅದು ಅವರ ಕೆಲಸವೂ ಅಲ್ಲ ಹಾಗಾಗಿ ನಿಷ್ಠೆ, ಮತ್ತು ತಾಳ್ಮೆಯನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕಿದೆ. ಜೊತೆಗೆ ಎಲ್ಲರನ್ನೂ ನಮ್ಮವರೆಂದು ತಿಳಿದು ಮೂರ್ಖರಾಗುವುದನ್ನು ಬಿಡಬೇಕು. ಕಷ್ಟ ನಷ್ಟ ಯಾರಿಗು ಹಂಚಿಕೊಟ್ಟದ್ದಲ್ಲ ಆದರೆ ಈಗಿನ ಕಾಲದಲ್ಲಿ ಕಷ್ಟ ಅಂತಾನೋ, ನೋವು, ಸಂಕಟ ಅಂತಾನೋ ಯಾರ ಬಳಿಯೂ ನಿಮ್ಮ ಅಮೂಲ್ಯವಾದ ಅಳಿದುಳಿದ ವಿಚಾರಗಳನ್ನು ಹಂಚಿಕೊಳ್ಳಬೇಡಿ. ಏಕೆಂದರೆ ನೀವು ಭಾವಿಸಿದಂತೆ ಬಹುತೇಕರು ಯಾರು ನಮ್ಮವರೆನಿಸಿಕೊಂಡವರು ನಮ್ಮವರಾಗಿರುವುದಿಲ್ಲ ಬದಲಿಗೆ ಕಂಡ ಕಂಡವರ ವಿಚಾರಗಳನ್ನು ಎಲೆ ಅಡಿಕೆ ಅಗಿದುಗಿದ ಹಾಗೆ ಎಲ್ಲೆಂದರಲ್ಲೇ ನಿಮ್ಮತನದ ಸಂಗತಿಗಳನ್ನು ಹರಟೆಕಟ್ಟೆಗೆ ಕೂತು ಹರಟಿ ಹರಾಜಾಕುತ್ತಾರೆ. ಅಷ್ಟು ಮಾತ್ರವಲ್ಲ ತಾವು ಮಾಡುವ ಈ ಪರರ ಕುರಿತ ಈ ಹರಟೆಯನ್ನು ನಮಗೂ ತಿಳಿಯದಂತೆ ನಮ್ಮ ಬೆನ್ನ ಹಿಂದೆ ಯಾರಾದರೂ ನಮ್ಮ ಕುರಿತಾಗಿಯೂ ಮಾಡುತ್ತಾರೆ ಎಂಬ ಸಣ್ಣ ಅರಿವು ಇಲ್ಲದಂತಹ ಮೂಢರು ಇದ್ದಾರೆ.

ನಾನೇ ಸರಿ ಎಂದು ಬೀಗುವ ಎಷ್ಟೋ ಹರಟೆ ಮನಸುಗಳಿಗೂ ಗೊತ್ತಿಲ್ಲ “ನಮ್ಮ ಬೆನ್ನು ನಮಗೆ ಕಾಣದು” ಎಂಬ ಕಟು ಸತ್ಯ ಅದನ್ನರಿಯದ ದಡ್ಡಶಿಖಾಮಣಿಗಳು ಸಂಭ್ರಮಿಸಿ ಪರರ ಕಷ್ಟವನ್ನು, ನೋವನ್ನೂ ಬಾಯಿಗೆ ಬಂದಂತೆ ಮಾತನಾಡಿ ಊಳಿಡುತ್ತವೆ. ಆದರೆ ನಾವು ಮಾಡಿದ ಪಾಪ ನಮಗೆ ತಿರುಗಿ ಬರುತ್ತದೆ ಎಂಬ ಹಿರಿಯರ ಮಾತು ಎಂದಿಗೂ ಸುಳ್ಳಾಗುವುದಿಲ್ಲ. ಊರ ಉಸಾಬರಿ ಮತ್ತು ಬೇರೆಯವರ ವಿಚಾರಗಳು ಜನರಿಗೆ ಶರಾಬು ಕೊಡುವಷ್ಟು ಕಿಕ್ ಕೊಡುತ್ತದೆ ಎನಿಸುತ್ತದೆ ಅದನ್ನೇ ಕಾಯಕವಾನ್ನಾಗಿಸಿಕೊಂಡವರು ಇದ್ದಾರೆ.

- Advertisement -

ಕಾಯಕದ ನಿಷ್ಠೆಗಿಂತ ಇತ್ತೀಚೆಗೆ ಗುಂಪಿನಲ್ಲಿ ಕಾಲಹರಣ ಮಾಡುವವರು ಬಹುತೇಕರಲ್ಲಿ ಕೆಲವರು ಇರ್ತಾರೆ ಸದಾ ಗುಂಪಿನಲ್ಲಿ ಇರಲು ಬಯಸುವವರು ಕಾಯಕಕ್ಕಿಂತ ಒಣಹರಟೆ ಹೆಚ್ಚು ಮಾಡುತ್ತಾರೆ. ತನ್ನ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ. ತನ್ನ ಸಮಯವನ್ನು ಗುಂಪಿನಲ್ಲೇ ಹೆಚ್ಚು ವಿನಿಯೋಗಿಸುತ್ತಾರೆ. ಪ್ರಗತಿಪರ ವಿಚಾರ ಗುಂಪಿನ ಚರ್ಚೆಗಿಂತ ಒಣ ಹರಟೆಯ ಚರ್ಚೆ ಹೆಚ್ಚುತ್ತಿದ್ದು ಅವ್ರು ಹೀಗಂತೆ, ಇವ್ರು ಹಾಗಂತೆ ಎನ್ನುವ ಅಂತೇ ಕಂತೆಗಳು ಹೆಚ್ಚುತ್ತಿವೆ. ಇದರಿಂದ ಗುಂಪಿನಲ್ಲಿ ಹಲವರಲ್ಲಿ ಕೆಲವರ ಮಾನಸಿಕ ಸ್ಥಿತಿ ಏಡಿ ಮನಸ್ಥಿತಿಯಂತೆ ಇರುತ್ತದೆ. ಯಾವುದೇ ಕೆಲಸ ಮಾಡಲು ಹೊರಟರೂ ಕಾಲಿಡಿದು ಜಗ್ಗುವ ಕೆಲಸ ಮಾಡ್ತವೆ ಅದ್ರಿಂದ ನೀ ಇರುವ ಜಾಗಕ್ಕಿಂತಲೂ ಕೆಳಗೆ ಸರಿಯುವ ಕಾಲವೇ ಹೆಚ್ಚೆಂದು ಅರಿತುಕೊಳ್ಳಬೇಕಿದೆ. ಯಾವುದೇ ಕಾರಣಕ್ಕೂ ಸಣ್ಣ ಪುಟ್ಟ ವಿಷಯಗಳಿಗೆ, ಅವರಿವರ ಮಾತುಗಳಿಗೆ ನೊಂದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಲೇಬಾರದು. ಅವೆಲ್ಲ ನೀವು ಹೊರಟ ದಾರಿಯನ್ನು ತಪ್ಪಿಸುವ ಕೆಲಸ ಮಾಡುತ್ತವೆ.

ಯಾರಿಗಾಗಿಯೂ ಅಮೂಲ್ಯವಾದ ಕಣ್ಣೀರನ್ನು ಹಾಳು ಮಾಡಿಕೊಳ್ಳದಿರಿ, ಏಕೆಂದರೆ ಆ ಕಣ್ಣೀರು ಬತ್ತುವುದರ ಜೊತೆಗೆ ನಿಮ್ಮ ಕನಸುಗಳು ಕರಗುತ್ತವೆ. ನಿನ್ನ ಬದುಕಿನಲ್ಲಿ ಸಾಧ್ಯವಾದಷ್ಟು ಪರರ ಸಹವಾಸದಿಂದ ದೂರವಿದ್ದು,ನಿನ್ನ ಕುರಿತಾಗಿ ಕೇವಲ ನಿನ್ನದೇ ಕುರಿತಾಗಿ ಯಾರಿಗೂ ಹಗೆ(ಕೆಟ್ಟದ್ದು ದ್ವೇಷ)ಬಯಸದೆ ಬದುಕಿದರೆ ಅದಕ್ಕಿಂತ ಬದುಕಲ್ಲಿ ಇನ್ನೇನಿದೆ. ಅರ್ಧ ಬದುಕನ್ನೇ ಗೆದ್ದಂತೆ. ಹರಟೆ ಕಟ್ಟೆಯ ಅಜೆಂಡಾಗಳು ನಿಮ್ಮನ್ನು ಒಂದು ವಿಷಯವೆಂದೇ ಪರಿಗಣಿಸುತ್ತವೆ. ಆದರೆ ನೀವೆಂದಿಗೂ ಯಾರನ್ನೂ ಅವರು ಒಂದು ವಿಷಯವೆಂದು ಗಣಿಸಿ ಕಾಲಹರಣ ಮಾಡದೆ ಮುಂದೆ ಸಾಗುತ್ತಲಿರಬೇಕು. ನಮ್ಮ ಬಗ್ಗೆ ಯಾರಿಗೆ ಏನು ಅಭಿಪ್ರಾಯವಿದೆ, ನನ್ನನ್ನು ಏನೆಂದು ಪರಿಗಣಿಸಿದ್ದಾರೆ, ನನ್ನನು ಕೆಟ್ಟವರೆಂದು ಭಾವಿಸಿದ್ದಾರಾ? ನನ್ನ ಬಗ್ಗೆ ಅವರಿಗೆ ಕೆಟ್ಟ ಅಭಿಪ್ರಾಯವಿದೆಯಾ? ಎಂದೆಲ್ಲ Nonsense ಆಗಿ ಯಾವತ್ತೂ ಯೋಚಿಸಬೇಡಿ, ನಿಮ್ಮ ಬದುಕು ನಿಮ್ಮ ಆಯ್ಕೆ ಸರಿಯಾಗಿದ್ದರೆ ಯಾರಿಗೂ ಜವಾಬ್ ಕೊಡುವ ಅವಶ್ಯಕತೆ ಇಲ್ಲ ಮತ್ತು ಯಾರ ಅಭಿಪ್ರಾಯವನ್ನು ಕಟ್ಟಿಕೊಂಡು ನಿಮಗೇನು ಆಗ್ಬೇಕಿಲ್ಲ. ನಿಮ್ಮ ಬದುಕನ್ನು ನೀವು ಸಂಭ್ರಮಿಸಿ ಸಾಗುತ್ತಲಿರಬೇಕು ಅಷ್ಟೆ. ನಿಮಗೆ ಯಾವುದೇ ಸಂಧರ್ಭ ಕಠಿಣ ಎನಿಸಿದ್ದಲ್ಲಿ it out or get out ಅನ್ನುವ ಹಾಗೆ ಅಂತಹ ಸಂದರ್ಭದಿಂದ ಆಚೆಗೆ ಬಂದುಬಿಡಿ. ಅಯ್ಯೋ ಇದು ನಮ್ಮದೇ ಬದುಕು ಕಣ್ರೀ life is Beautiful ಯಾವಾಗ ಗೊತ್ತ ಅವ್ರೆನ್ ಅನ್ಕೊಂಡ್ರೋ, ಇವ್ರೆನ್ ಅನ್ಕೊಂಡ್ರೋ ಇದೆಲ್ಲಾದ್ರಿಂದ ಹೊರಗ್ ಬಂದು ನೋಡಿ ನಿಮ್ಮಷ್ಟಕ್ಕೆ ನೀವು ಖುಷಿಕೊಡೊ ಕಾಯಕ ಮತ್ತು ನಿಷ್ಠೆ ಇವೆರಡರ ಜೊತೆ ಜೀವಿಸಿ ನೋಡಿ ಯಾಕ್ರೀ ಬದುಕು ಸುಂದರವಾಗಿದೆ ಅನ್ಸಲ್ಲ Of course ಅನ್ಸೆ ಅನ್ಸತ್ತೆ. ಇನ್ನು ಬದುಕಿನಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಏನೋ ತಪ್ಪು ಮಾಡಿದ್ರೆ, ಸಂದರ್ಭಗಳು ನಿಮ್ಮನ್ನ ತಪ್ಪಾಗಿ ನಡೆಸಿದ್ರೆ ಅದನ್ನ ತಿದ್ದಿಕೊಂಡು ಒಮ್ಮೆ ಮನ್ಸಿಗೆ ಅದು ತಪ್ಪನಿಸಿದಾಗ ಪಶ್ಚಾತಾಪ ಪಟ್ಟಿದ್ರೆ ನಿಜಕ್ಕೂ ನೀವು ನಿಮ್ಮನ್ನ ನೀವು ಅರ್ಥಮಾಡಿಕೊಂಡ ಹಾಗೆ ಅದನ್ನ ಮತ್ತ್ಯಾರಿಗೋ ಬಿಡಿಸಿ ಹೇಳುವ ಗೋಜಿಗೆ ಹೋಗುವ ಅನಿವಾರ್ಯವಿಲ್ಲ. ನಾರದರಂತೆ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಹಾರಾಡಿ ನಿಮ್ಮ ಸಂಗತಿಗಳನ್ನೇ ಆಳುವವರಿಗೆ ದೂರದಿಂದಲೇ ಸಲಾಂ ಹೇಳಿಬಿಡಿ, ಬಿಡಿಗಾಸಿಲ್ಲದೆ ನಿಮ್ಮನ್ನು ಜಾಗೃತರನ್ನಾಗಿಸುತ್ತಾರೆ ಅವರೆಲ್ಲ ಅವರುಗಳಿಗೆ ಗೊತ್ತಿಲ್ಲದ ಹಾಗೆ ಎಚ್ಚರಗೊಳ್ಳಿ ಅಷ್ಟೆ. ನಿಮ್ಮನ್ನು ಆಗಾಗ ನೆನಪಿಸಿಕೊಳ್ತಾರೆ ಗುಂಪಾಗಿ ಕುಳಿತು ಕನಿಷ್ಠಪಕ್ಷ ಒಂದು ಒಳ್ಳೆಯ ಮಾತನ್ನಾಡದವರು ಇದ್ದಾರೆ ಎಂದರೆ ಇನ್ನೆಷ್ಟು ನೀವು ಹರಟೆ ಕಟ್ಟೆಗಳ ಅಜೆಂಡಾಗಳ ನಿದ್ರೆಗೆಡಿಸಿರಬೇಡ ನೀವೇ ಒಮ್ಮೆ ಯೋಚಿಸಿ ನೋಡಿ ನಿಮಗೆ ಅನ್ಸತ್ತೆ ನನ್ನ ಸಂಗತಿ ಬಾಯಲ್ಲಾಡದೆ ಕೆಲವರಿಗೆ ತಿಂದದ್ದು ಅರಗೋದಿಲ್ಲ ಅಂತ ಇಷ್ಟೇ ನೋಡಿ ಬದುಕಿನಲ್ಲಿ ಯಾರು ಯಾರನ್ನೂ ಬಿಟ್ಟಿಲ್ಲ, ಬೇಡಿದ್ದನ್ನು ಕರುಣಿಸಿಲ್ಲ ಅಂದ್ರೆ ನಮ್ಮ ಜನ ದೇವರನ್ನೇ ಬಿಡಲ್ಲ ಶಪಿಸಿ ಪಾಪಿ ಭಗವಂತನೆಂದು ದೂಷಿಸುವಾಗ ಇನ್ನು ಮನುಷ್ಯ ಯಾವ ಲೆಕ್ಕ ಅಲ್ವಾ ಇದನ್ನರಿತುಕೊಳ್ಳಬೇಕಿದೆ. ಒಳ್ಳೆಯತನ ನಮ್ಮನ್ನು ಕೈಲಿಡಿದು ನಡೆಸುತ್ತದೆ ಎಂಬುದನ್ನು ಮರೆಯಲೇಬಾರದು.

ಒಮ್ಮೊಮ್ಮೆ ಒಳ್ಳೆಯತನವು ನಮಗೆ ಘಾಸಿ ಮಾಡಬಹುದು ಆದರೆ ಎಂದಿಗೂ ನಮ್ಮನ್ನ ಸೋಲಿಸುವುದಿಲ್ಲ ಎಂಬುದನ್ನು ಅರಿಯಬೇಕಿದೆ. ಅತಿಯಾಗಿ ಯಾರ ಕುರಿತು ಒಣ ಹರಟೆಗೆ ಹೋಗಬಾರದು ನಮ್ಮ ಕೆಲಸವಾಯ್ತು ನಾವಾಯ್ತು ಎಂದಿರಬೇಕು. ಯಾರಾದರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ ಎಂದರೆ ತಲೆಕೆಡಿಸಿಕೊಳ್ಳದೆ ಖಾಸ ಅದನ್ನು ಒಪ್ಪುತ್ತಲೇ ಮುನ್ನಡಿ. ಆದರೆ ನಿನ್ನ ಕೆಲಸ ನೀನು ಮಾಡುವ ಕೆಲಸವನ್ನು ಪ್ರೀತಿಸುವುದು ಮಾತ್ರ ಆಗಿರಲಿ, ದ್ವೇಷ, ಹಗೆತನ ನಿನ್ನ ಕಾಲ ಕೆಳಗಿರಲಿ. ನಿನ್ನ ತನ ನೋಡುಗರಿಗೆ ಅಹಂಕಾರವಾಗಿ ಪರಿಣಮಿಸಿದರೆ ಅದನ್ನು ಜೈಕಾರವೆಂದು ಭಾವಿಸು. ಯಾಕೆಂದರೆ ನಿನ್ನನ್ನು ದ್ವೇಷಿಸಲು ಶುರು ಮಾಡಿದ್ದಾರೆ ಎಂದರೆ ನೀನು ಅವರನ್ನು ಬದಿಗೊತ್ತಿರುವೆ ಎಂದರ್ಥ.ನಮ್ಮಿಂದ ಒಳ್ಳೆಯದನ್ನು ಮಾಡಲು ಆಗಿಲ್ಲವೆಂದರೂ ಪರವಾಗಿಲ್ಲ ಕೆಟ್ಟದ್ದನ್ನಂತು ಎಂದಿಗೂ ಬಯಸಬಾರದು. ಬಸವಣ್ಣನವರು ಹೇಳಿದಂತೆ “ದಯವೇ ಧರ್ಮದ ಮೂಲವಯ್ಯಾ” ಎಂಬ ಉಕ್ತಿಯಂತೆ ಸಕಲ ಜೀವಿಗಳಲ್ಲಿ ದಯೆ ತೋರುವುದು ತಪ್ಪಲ್ಲ, ನಿನ್ನ ತನಕೆ ಧಕ್ಕೆ ತರುವಂತಿರುವ ಸಂಧರ್ಭಗಳಲ್ಲಿ, ಸಕಲರು ನಿನ್ನನ್ನು ನಿನ್ನಂತೆ ಕಾಣದ ಸಂಧರ್ಭದಲ್ಲಿ ನಿನಗೆ ಕಂಡರೂ ಕಾಣದಂತೆ, ಯಾರ ಹಂಗಿಗೂ ಸಿಗದಂತೆ ನಿನ್ನದೇ ದಾರಿಯಲ್ಲಿ ಸಾಗು. ಏಕೆಂದರೆ ಸಕಲ ಜೀವಿಗಳಲ್ಲಿ ದಯೆ ತೋರೆಂಬ ಉಕ್ತಿಯಂತೆ ಎಲ್ಲವೂ ಸಮಾನವಾಗಿದ್ದಾಗ ತೋರಿದ ದಯೆ, ಕೊಟ್ಟ ಗೌರವ ಸಿಗುತ್ತದೆ. ಹೊರತಾಗಿ ಮಿಕ್ಕುಳಿದ ಸಂದರ್ಭಗಳಲ್ಲಿ ಬಸವಣ್ಣನವರೇ ಹೇಳಿದಂತೆ “ಪರರ ಚಿಂತೆ ನಮಗೇಕಯ್ಯ” ಎಂಬಂತೆಯೂ ಇರುವುದನ್ನು ಕಲಿಯಬೇಕಿದೆ. ಹಗೆ ತುಂಬಿಕೊಂಡು ಬದುಕುವ ಮನುಷ್ಯನಿಗೆ ಎಲ್ಲರೂ ಕೊನೆಗೆ ಶೂನ್ಯದಿಂದಲೇ ಬಂದಿದ್ದೇವೆ ಶೂನ್ಯದಿಂದಲೇ ನಮ್ಮ ಪಯಣ ಮುಗಿಸುತ್ತೇವೆ ಕೊನೆಗೆ ಹೋಗುವಾಗ ಬರಿಗೈಯಲ್ಲಿ ಎಂಬ ಸಣ್ಣ ಸಂಗತಿಯನ್ನು ಬದುಕಿನ ಒಟ್ಟು ಸಾರಾಂಶವನ್ನು ಅರಿಯದೆ ಅತಿಯಾಸೆಯಿಂದ ಬದುಕು ನಡೆಸುತ್ತಿದ್ದು ತನ್ನ ಬದುಕಿನ ಕುರಿತ ಆಸಕ್ತಿಗಿಂತ ಊರ ಉಸಾಬರಿ ಮಾಡುತ್ತಲೇ ಕಾಲಹರಣ ಮಾಡುವವರು ಮತ್ತು ಅದರಲ್ಲೇ ಖುಷಿಪಡುವವರು ಹೆಚ್ಚಿದ್ದಾರೆ. ಇರಲಿ ಇರಬೇಕು ನಮ್ಮ ಕುರಿತು ಒಳ್ಳೆಯದೋ ಕೆಟ್ಟದ್ದೋ ಒಟ್ಟಿನಲ್ಲಿ ನಮ್ಮ ಕುರಿತ ವಿಚಾರದಲ್ಲೇ ತೊಡಗಿರುವವರು ಹೆಚ್ಚಿದ್ದಾರೆ ಎಂದರೆ ಏನೋ ಅವರಿಗಿಂತ ನೀವು ವಿಶೇಷವಾಗಿ, ಭಿನ್ನವಾಗಿ ಇದ್ದೀರಿ ಎಂದು ಭಾವಿಸಿ. ನಾವಾಯ್ತು ನಮ್ಮ ಕಾಯಕವಾಯ್ತು ಎಂದು ಇದ್ದುಬಿಡೋಣ ನಮಗ್ಯಾಕ ಬೇಕು ಊರ ಉಸಾಬರಿ ಇರುವಷ್ಟು ದಿನ ಚಂದದ ಬದುಕು ಬದುಕೋಣ. ಊರ ಉಸಾಬರಿಯ ಗೋಜಿಗೆ ಹೋಗದೆ ಇರೋಣ.

ಡಾ ಮೇಘನ ಜಿ
ಕೂಡ್ಲಿಗಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group