spot_img
spot_img

ಮೂಡಲಗಿ ನಗರದಲ್ಲಿ ಹಂದಿಗಳ ಕಾಟ; ಪುರಸಭೆಗೆ ನಾಗರಿಕರಿಂದ ಮುತ್ತಿಗೆ

Must Read

- Advertisement -

ಜಿಲ್ಲಾಧಿಕಾರಿಗಳಿಗೆ ದೂರು

ಮೂಡಲಗಿ: ನಗರದಲ್ಲಿ ಹಂದಿಗಳ ಹಾಗೂ ಬಿಡಾಡಿ ದನಗಳ ಕಾಟ ವಿಪರೀತವಾಗಿದ್ದು ಇವುಗಳ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿ ನಗರದ ಸಾರ್ವಜನಿಕರು ಪುರಸಭೆಗೆ ಮುತ್ತಿಗೆ ಹಾಕಿದರು.

ಮಂಗಳವಾರ ಬೆಳಿಗ್ಗೆ ತಮ್ಮ ಹಲವು ಬೇಡಿಕೆಗಳಲ್ಲಿ ಪ್ರಮುಖವಾದ ಹಂದಿಗಳ ಕಾಟದ ಬಗ್ಗೆ ಹಾಗೂ ಬಿಡಾಡಿ ದನಗಳ ಕಾಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಪುರಸಭೆಯವರಿಗೆ ನಾಗರಿಕರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ದೂರಿದರು.

- Advertisement -

ನಗರದಲ್ಲಿ ಎಲ್ಲೆಂದರಲ್ಲಿ ಅಷ್ಟೇ ಯಾಕೆ ಪುರಸಭೆಯ ಆವರಣದಲ್ಲಿ ಕೂಡ ಹಂದಿಗಳು ರಾಜಾರೋಷವಾಗಿ ಓಡಾಡುತ್ತಿವೆ, ಬೆಳೆ ಹಾನಿ ಮಾಡುತ್ತಿವೆ, ಕಾಯಿಪಲ್ಲೆ ಸಂತೆಯಲ್ಲಿ ಎಲ್ಲೆಂದರಲ್ಲಿ ಬಾಯಿ ಹಾಕುತ್ತಿವೆ, ವಾಹನಗಳಿಗೆ ಅಡ್ಡ ಬಂದು ಕೆಡವಿ ಹಾಕುತ್ತಿವೆ, ಸಿಕ್ಕಸಿಕ್ಕಲ್ಲಿ ಬಾಯಿ ಹಾಕಿ ಗಲೀಜು ಮಾಡುತ್ತಿವೆ. ಇನ್ನು ಬಿಡಾಡಿ ದನಗಳ ಮಾಲೀಕರು ಅವುಗಳನ್ನು ಊರ ತುಂಬ ತಿರುಗಾಡಲು ಬಿಟ್ಟು ಮೇಯಿಸುತ್ತಿದ್ದಾರೆ ಆದರೆ ಅವುಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಹಲವು ಬಾರಿ ದೂರು ಸಲ್ಲಿಸಿದರು ಪುರಸಭೆಯವರು ಕಿವಿಗೆ ಹಾಕುತ್ತಿಲ್ಲ. ಈ ಸಲ ಹಂದಿಗಳನ್ನು ನಿಯಂತ್ರಿಸದೇ ಇದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪುರಸಭೆಯವರು ಕಾಲಕಾಲಕ್ಕೆ ಆಡಳಿತ ಮಂಡಳಿ ಸಭೆ ಕರೆಯದೆ ಬೇಕಾಬಿಟ್ಟಿ ನಿರ್ಣಯ ಕೈಗೊಂಡು ಯೋಜನೆಗಳ ಅನುದಾನವನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾರೆ. ತಮಗೆ ಬೇಕಾದವರಿಗೆ ಕಾಮಗಾರಿಗಳ ಟೆಂಡರ್ ನೀಡಿ ಕಳಪೆ ಕಾಮಗಾರಿಗೆ ಕಾರಣರಾಗುತ್ತಿದ್ದಾರೆ ಇದು ನಿಲ್ಲಬೇಕು, ಪುರಸಭೆ ಗೆ ಪೂರ್ಣಾವಧಿ ಮುಖ್ಯಾಧಿಕಾರಿ ಬೇಕು, ಇಂಜಿನೀಯರ್ ಇದ್ದೂ ಸತ್ತಂತೆ ಇದ್ದಾರೆ ದಕ್ಷ ಇಂಜಿನೀಯರ್ ಬೇಕು, ಹಲವು ವರ್ಷಗಳಿಂದ ಬೇರು ಬಿಟ್ಟಿರುವ ಅಧಿಕಾರಿಗಳ ಎತ್ತಂಗಡಿಯಾಗಬೇಕು, ಪುರಸಭೆಯ ನಿವೇಶನಗಳನ್ನು ತಮಗೆ ಬೇಕಾದವರ ಹೆಸರಿಗೆ ದಾಖಲು ಮಾಡುತ್ತಿದ್ದಾರೆ, ಸಾರ್ವಜನಿಕರ ಅಹವಾಲು ಸ್ವೀಕರಿಸಲು ಯಾರೂ ಸಿದ್ಧವಿಲ್ಲ, ನಗರದಲ್ಲಿ ರಸ್ತೆ, ಚರಂಡಿ, ಸ್ಮಶಾನ ಅಭಿವೃದ್ಧಿ ಮಾಡುತ್ತಿಲ್ಲ ಎಂಬ ಅನೇಕ ಬೇಡಿಕೆಗಳನ್ನು ಇಟ್ಟು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

- Advertisement -

ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾದ ದೂರನ್ನು ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿಯವರು, ಒಂದು ವಾರದಲ್ಲಿ ಹಂದಿಗಳು ಹಾಗೂ ಬಿಡಾಡಿ ದನಗಳ ಕಾಟಕ್ಕೆ ಬ್ರೇಕ್ ಹಾಕಲಾಗುವುದಾಗಿ ಹೇಳಿದರು. ಬೇರೆ ಊರಿಂದ ಹಂದಿ ಹಿಡಿಯುವ ಜನರನ್ನು ಕರೆಸುವುದಾಗಿ ಹೇಳಿ ಅವರಿಗೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಪಿಎಸ್ಐ ಬಾಲದಂಡಿ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು.

ತಮ್ಮ ಬೇಡಿಕೆಗಳು ಒಂದು ವಾರದಲ್ಲಿ ಈಡೇರದಿದ್ದರೆ ಮತ್ತೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಪ್ರತಿಭಟನೆಯಲ್ಲಿ ಮಲ್ಲಪ್ಪ ಮದಗುಣಕಿ, ಚನ್ನಪ್ಪ ಅಥಣಿ, ಪ್ರಕಾಶ ತೇರದಾಳ,ಶ್ರೀಶೈಲ ಜೈನಾಪೂರ, ಈರಪ್ಪ ಢವಳೇಶ್ವರ, ಗುರು ಗಂಗಣ್ಣವರ, ಇಜಾಜ ಅಹ್ಮದ ಕೊಟ್ಟಲಗಿ, ಶ್ರೀಶೈಲ ಗಾಣಿಗೇರ ಮುಂತಾದವರು ಭಾಗವಹಿಸಿದ್ದರು.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group