spot_img
spot_img

ಮೋದಿಯವರ ಪ್ರಯತ್ನದಿಂದ ನಾವು ಉಕ್ರೇನ್ ನಿಂದ ಮರಳುವಂತಾಯಿತು – ವಿದ್ಯಾರ್ಥಿನಿ ವೈಷ್ಣವಿ

Must Read

- Advertisement -

 

ಬೀದರ – ಉಕ್ರೇನ್ ಯುದ್ಧಭೂಮಿಯಲ್ಲಿ ಸಿಲುಕಿಕೊಂಡಿದ್ಧ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಕೇಂದ್ರ ವಿದ್ಯಾರ್ಥಿನಿ ವೈಷ್ಣವಿ ರೆಡ್ಡಿ ತನ್ನ ಮನೆಗೆ ಮರಳಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರದ ಸಹಾಯದಿಂದ ನಾನು ಮರುಜನ್ಮ ಪಡೆದಂತಾಗಿದೆ ಎಂದು ವಿದ್ಯಾರ್ಥಿನಿ ಭಾವುಕರಾದರು.

ಬಿದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ವಿದ್ಯಾರ್ಥಿನಿ ಕಳೆದ ಕೆಲವು ದಿನಗಳಿಂದ ಉಕ್ರೆನ್ ಯುದ್ಧ ಭೂಮಿಯಲ್ಲಿ ಸಿಲುಕಿಕೊಂಡಿದ್ಧು ಬಸವಕಲ್ಯಾಣ ನಗರಕ್ಕೆ ಬರುತ್ತಿದ್ದ ಹಾಗೆ ಶಾಸಕ ಶರಣು ಸಲಗರ್ ಹಾಗೂ ತಹಶೀಲ್ದಾರ್ ಸಾವಿತ್ರಿ ಸಲಗರ್ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಸ್ವಾಗತ ಮಾಡಿಕೊಂಡರು.

- Advertisement -

ಈ ಸಮಯದಲ್ಲಿ ವಿದ್ಯಾರ್ಥಿನಿ ಮಾತನಾಡಿ, ನಾನು ನನ್ನ ಮನೆಗೆ ಬಂದಿರುವುದೆ ಒಂದು ಪವಾಡ ನಾನು ಮನೆಗೆ ಬಂದು ನನ್ನ ಕುಟುಂಬವನ್ನು ನೊಡುತ್ತೇನೆ ಎಂಬ ಭರವಸೆ ಇರಲಿಲ್ಲ ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯದಿಂದ ನನಗೆ ಮರುಜೀವ ಸಿಕ್ಕಂತಾಗಿದೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪುತಿನ್ ಅವರ ಜೊತೆ ಮಾತನಾಡಿದ ನಂತರ ನಾವು ತವರೂರಿಗೆ ಬರಲು ಸುಲಭವಾಯಿತು ಎಂದು ತಿಳಿಸಿದಳು.

ಉಕ್ರೆನ್ ಯುದ್ಧ ಭೂಮಿಯಲ್ಲಿ ನಮ್ಮ ರಾಷ್ಟ್ರ ಧ್ವಜ ತೋರಿಸಿ ನಾವು ನಮ್ಮ ಜೀವವನ್ನು ಕಾಪಾಡಿಕೊಂಡಿದ್ಧೇವೆ ಎಂದು ತಿಳಿಸಿದ ಅವರು, ಇನ್ನು ಹಲವು ವಿದ್ಯಾರ್ಥಿಗಳು ಉಕ್ರೇನ್ ಯುದ್ಧ ಭೂಮಿಯಲ್ಲಿ ಸಿಲುಕಿಕೊಂಡಿದ್ಧು ಅವರ ರಕ್ಷಣೆಗೆ ಕೇಂದ್ರ ಸರ್ಕಾರಕ್ಕೆ ವೈಷ್ಣವಿ ಮನವಿ ಮಾಡಿದರು.

- Advertisement -

ಕೇಂದ್ರ ಸರ್ಕಾರದ ಮೇಲೆ ನಮಗೆ ವಿಶ್ವಾಸ ಇತ್ತು. ನಮ್ಮನ್ನು ಭಾರತಕ್ಕೆ ಆದಷ್ಟು ಬೇಗ ಕರೆ ತರುತ್ತೇವೆ ಎಂದು ತಿಳಿಸಿದರೂ ಕೊಟ್ಟ ಮಾತಿನಂತೆ ನಮ್ಮನ್ನು ಕರೆ ತರಲು ಹರಸಾಹಸ ಪಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿ ಧನ್ಯವಾದಗಳನ್ನು ತಿಳಿಸಿದರು.

ಇನ್ನು ಬಸವಕಲ್ಯಾಣ ನಗರದ ಮಹಾದ್ವಾರದ ಬಳಿ ವಿದ್ಯಾರ್ಥಿನಿಯನ್ನು ಸ್ವಾಗತಿಸಿ ಬರಮಾಡಿಕೊಂಡ ಶಾಸಕ ಶರಣು ಸಲಗರ್ ಮಾತನಾಡಿ ನಮ್ಮ ಮನೆಯ ಮಗಳು ತವರೂರಿಗೆ ಮರಳಿ ಬಂದಿರುವುದು ಹೆಮ್ಮೆಯ ಮತ್ತು ಖುಷಿಯ ವಿಚಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಹಸದಿಂದ ನಮ್ಮ ಸಹೋದರಿ ಸುರಕ್ಷಿತವಾಗಿ ಮನೆ ತಲುಪಿದ್ಧಾಳೆ ಹೀಗಾಗಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಮತ್ತು ಇನ್ನು ಯುದ್ಧ ಭೂಮಿಯಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆತರುವ ಕೆಲಸ ಮಾಡುತ್ತಿದೆ ಹಾಗಾಗಿ ಯಾರೂ ಹೆದರುವ ಅವಶ್ಯಕತೆಯಿಲ್ಲ ಎಂದು ವಿಶ್ವಾಸದ ಮಾತುಗಳನ್ನು ಆಡಿದರು.

ಇನ್ನು ಮುಂದಿನ ದಿನಗಳಲ್ಲಿ ಸರ್ಕಾರದ ಜೊತೆ ಮಾತನಾಡಿ ವೈಷ್ಣವಿ ರೆಡ್ಡಿ ಅವರಿಗೆ ನಮ್ಮ ದೇಶದಲ್ಲಿಯೇ ವೈದ್ಯಕೀಯ ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group