spot_img
spot_img

ಯಾರೋ ತಿಳಿಸಿದ್ದಾರೆಂದು ಆಚರಣೆಯ ಉದ್ದೇಶ ತಿಳಿಯದೆ

Must Read

- Advertisement -

ಆಚರಣೆಗಳನ್ನು ಹೊರಗೆ ಯಾರನ್ನೋ ಬೇಡಿಕೊಂಡು ಸಾಲದ ಹಣದಲ್ಲಿ ಮಾಡೋ ಅಗತ್ಯವಿಲ್ಲ. ಹಾಗೆ ಯಾರೋ ಹೇಳಿದ್ದಾರೆಂದು ಸತ್ಯ ತಿಳಿಸುವ ಅಗತ್ಯವಿಲ್ಲ. ಇಲ್ಲಿ ಎಲ್ಲರೂ ಭಾರತೀಯ ಧರ್ಮಕ್ಕೆ ಸಹಕರಿಸುವ ಸ್ವಾತಂತ್ರ್ಯ ಪಡೆದ ಸಾಮಾನ್ಯ ಪ್ರಜೆ. ಸಹಕಾರ ನೀಡಿದರೆ ನಮ್ಮ ಜ್ಞಾನಕ್ಕೆ ನಾವೇ ನೀರೆರೆದು ಬೆಳೆಸಿಕೊಂಡು ಪುಣ್ಯ ಕಾರ್ಯ ನಡೆಸಬೇಕಿದೆ.

ಸತ್ಯ ತಿಳಿಸುವುದಕ್ಕೂ ಸ್ವಾತಂತ್ರ್ಯವಿಲ್ಲದ ದೇಶದಲ್ಲಿ ನಾವು ಧರ್ಮರಕ್ಷಕರಾಗಲು ಸಾಧ್ಯವೆ? ನಾವು ಸಮಸ್ಯೆಗಳಿಂದ ಹೊರಬರಬೇಕಾದರೆ ಸಮಸ್ಯೆಯ ಮೂಲ ತಿಳಿಯೋ ಜ್ಞಾನದಿಂದ ಸಾಧ್ಯ. ಹಣದಿಂದಾಗಲಿ ರಾಜಕೀಯ ಸಹಕಾರದಿಂದಾಗಲಿ ಇನ್ನಷ್ಟು ಸಮಸ್ಯೆ ಹೆಚ್ಚಾಗುತ್ತದೆ. ಇದು ಕೇವಲ ತಾತ್ಕಾಲಿಕ ಪರಿಹಾರ. ಅತಿಯಾದ ಸಂಪಾದನೆ ಮಾನವನಿಗೆ ಭೌತಿಕವಾಗಿ ಶ್ರೀಮಂತ ಗೊಳಿಸಬಹುದು.

ಆದರೆ, ಧಾರ್ಮಿಕವಾಗಿ ಇದೇ ಅವನಿಗೆ ದೊಡ್ಡ ಸಮಸ್ಯೆಗೆ ದಾರಿ ಮಾಡಿ ಕೊಡುತ್ತದೆ. ಸಂಪಾದನೆ ಜ್ಞಾನದಿಂದ ಮಾಡಿದರೆ ದಾನ, ಧರ್ಮಕ್ಕೆ ಹಣ ಸದ್ಬಳಕೆ ಆಗುತ್ತದೆ. ಅಜ್ಞಾನದ ಸಂಪಾದನೆಯ ಹಣದಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ.

- Advertisement -

ಇಂದು ಹಣವಂತರು ಹೆಚ್ಚಾಗಿದ್ದರೂ ಜ್ಞಾನದ ಅಭಾವದಿಂದ ಹಣ ಸದ್ಬಳಕೆಯಾಗದೆ ಲಕ್ಮಿ ಪೂಜೆಯೂ ಸಾಲದ ಹಣದಲ್ಲಿ ವೈಭವದಿಂದ ನಡೆಸುತ್ತಾರೆ. ಇದು ಭ್ರಷ್ಟರಿಗೆ ಶಕ್ತಿ ಹೆಚ್ಚಾಗಲುಕಾರಣವಾದರೆ ಪೂಜೆ ವ್ಯರ್ಥವಲ್ಲವೆ? ನಿರಾಕಾರ ಬ್ರಹ್ಮನ ಅರಿಯಲು ನಿಸ್ವಾರ್ಥ ನಿರಹಂಕಾರದ ಸತ್ಯ,ಸಾತ್ವಿಕವಾದ ಮಾನಸಪೂಜೆ ಅಗತ್ಯ.

ಒಳಗಿದ್ದ ಮುಖ್ಯ ದೇವರನ್ನು ಹೊರಗೆಳೆದು ಒಳಗಿನ ಸತ್ಯನಾಶ ಹೆಚ್ಚಾಗುತ್ತಿದೆ. ಶಿಕ್ಷಣದಲ್ಲಿಯೇ ಹೊರಗಿನ ಶಿಕ್ಷಣ ಮಕ್ಕಳಿಗೆ ನೀಡಿದ ಪೋಷಕರಿಗೆ ಕೊನೆಯಲ್ಲಿ ಮಕ್ಕಳು ಬಿಟ್ಟು ಹೊರ ನಡೆದಾಗಲೆ ತಪ್ಪಿನ ಅರಿವಾಗೋದು.ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಈಗ ನಮ್ಮ ಶಿಕ್ಷಣಕ್ಕೆ ಬದಲಾವಣೆ ಕಾಲಬಂದಿದೆ.

ಎಲ್ಲರೂ ನೇರವಾಗಿ ಸಹಕರಿಸಿದರೆ ಉತ್ತಮ. ಇದರಲ್ಲಿಯೂ ರಾಜಕೀಯ ಕ್ಕೆ ಬಲಿಯಾಗಿ ಮಧ್ಯವರ್ತಿಗಳು ವ್ಯವಹಾರಕ್ಕಿಳಿದರೆ ಸತ್ಯ ನಾಶವಾಗುವುದೆ? ವಿನಾಶಕಾಲೇ ವಿಪರೀತ ಬುದ್ದಿ.

- Advertisement -

ನುಡಿಮುತ್ತು

ನಮಗೆ ನಮ್ಮದೇ ಆದ ವೈಶಿಷ್ಟ್ಯಗಳಿವೆ ಎಂದು ಬೀಗುವ ಮೊದಲು, ಎಲ್ಲರಿಗೂ ಅವರದೇ ಆದ ವೈಶಿಷ್ಟ್ಯಗಳಿವೆ ಎಂಬ ಅರಿವು ನಮಗಿರಬೇಕು.ಯಾವತ್ತೂ ನಮಗೆ ಶತ್ರುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೊ ಆ ಕ್ಷಣದಿಂದ ನಾವು ನಡೆವ ಹಾದಿ ಮತ್ತು ನಮ್ಮ ಗುರಿ ನಿಖರವಾಗಿದೆ ಎಂದರ್ಥ..ಕಲ್ಲು ಸುಂದರ ಶಿಲ್ಪವಾಗಿ ಪೂಜೆಗೊಳ್ಳಲು ಉಳಿ,ಸುತ್ತಿಗೆಯ ಪೆಟ್ಟು ತಿನ್ನಬೇಕು. ಬದುಕು ಸುಂದರವಾಗಲು ಕಷ್ಟಗಳ ಪೆಟ್ಟು ಬೀಳಬೇಕು. ಜೀವನವು ನಾವು ಆರ್ಡರ್ ಮಾಡಿದ್ದನು ತಂದು
ಕೊಡುವ ಹೋಟೆಲ್ ಅಲ್ಲ, ದೇವಸ್ಥಾನದ ಪ್ರಸಾದದಂತೆ ಸಿಕ್ಕಷ್ಟೇ ಸವಿಯಬೇಕು!

ಬದುಕಿನ ಪ್ರಯಾಣದಲ್ಲಿ ಸಿಕ್ಕ ಯಶಸ್ಸನ್ನು ಅಳೆಯುವುದು ನಮ್ಮ ಕೆಲಸಗಳ ಮೂಲಕ.ಆದ್ದರಿಂದ ಸತ್ಕೆಲಸ, ಶ್ರಮದಿಂದ ವಿಮುಖರಾಗದೆ ಮುಂದುವರೆಯೋಣ. ಕಲ್ಪನೆಯ ಸುಖದ ಹಿಂದೇ ಬಿದ್ದು ನಿರಾಸೆ ಆಗುವುದಕ್ಕಿಂತ ವಾಸ್ತವದ ಬದುಕಿನ ಜೊತೆ ಹೊಂದಿಕೊಂಡು ಹೋಗುವುದೇ ಒಳಿತು.

ಒಬ್ಬ ಮನುಷ್ಯ ಸತ್ತು ಹೋದರೆ ಎಲ್ಲರಿಗೂ ಗೊತ್ತಾಗುತ್ತದೆ, ಅದೇ ಮನುಷ್ಯನ ಒಳಗಿರುವ ಮನಸ್ಸು ಸತ್ತು ಹೋದರೆ, ಯಾರಿಗೂ ಗೊತ್ತಾಗಲ್ಲ. ನೋವು ಅನುಭವಿಸಿದವರಿಗೆ ಮಾತ್ರಗೊತ್ತಿರುತ್ತದೆ. ಜಗತ್ತಿನಲ್ಲಿ ಮನುಷ್ಯತ್ವ ಮಾನವೀಯತೆ ಜನರಲ್ಲಿ ಕಡಿಮೆಯಾದಾಗ ಇಂತಹ ದುರಂತಗಳು ಸಾಮಾನ್ಯವಾಗಿರುತ್ತದೆ, ಜಗತ್ತಿನಲ್ಲಿ ನಾವು ಕೂಡ ಒಬ್ಬರು, ಈಗಲಾದರೂ ನಾವು ಜಾತಿ ಮತ ಪಂಗಡಗಳನ್ನು ಮೀರಿದ ಮನುಷ್ಯತ್ವದ ಜೀವನವನ್ನು ನಡೆಸಲು ಪ್ರಯತ್ನಿಸೋಣ.

ಮೋಸ ಮಾಡುವವರು ಪ್ರತಿಯೊಬ್ಬರೂ ಹೇಳೊ ಮೊದಲನೆಯ ಮಾತು ನಾನು ಎಲ್ಲರ ತರಹಅಲ್ಲ , ಇತರ ಎಲ್ಲರಿಗಿಂತ ನಾವು ಸಭ್ಯರು ಎಂದು ನಂಬಿಸಿ ತಮ್ಮ ಮೋಸದ ಬಲೆಗೆ ಸಿಲುಕಿಸಿ ನಮ್ಮನ್ನು ಬಲಿಪಶುವನ್ನಾಗಿ ಮಾಡಿಬಿಡುತ್ತಾರೆ. ಆದುದರಿಂದ ನಮ್ಮ ಜಾಗೂರಕತೆಯಿಂದ ಇರುವುದು ಒಳಿತು.

ಪ್ರತಿಷ್ಠೆ ಎಂಬುದು ಕಣ್ಣೊಳಗಿನ ಕಸವಿದ್ದಂತೆ. ಸ್ಪಷ್ಟವಾಗಿ ಕಾಣಿಸಬೇಕಾದರೆ ಕಸವನ್ನು ತೆಗೆಯಲೇಬೇಕು.ಬದುಕು ನಾವು ಬದುಕಲಿಕ್ಕೆ ಹೊರತು, ಪರರನ್ನು ಮೆಚ್ಚಿಸಲಿಕ್ಕೆ ಅಲ್ಲ..ಮೆಚ್ಚಿಸುವುದಾದರೆ ಒಳಗಿರುವ ಪರಮಾತ್ಮನ ಕಡೆ ನಡೆಯಬೇಕಿದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group