ಕ್ಷುಲ್ಲಕ ಮಾತಿಗೆ ಜಗಳ ಮಾಡಿಕೊಂಡು ಮಹಿಳೆ ಸಾವು

Must Read

ಬೀದರ – ನಾವು ಈಗ ಬಿಹಾರದಲ್ಲಿ ಇದ್ದೇವೋ ಅಥವಾ ಕರ್ನಾಟಕದಲ್ಲಿ ಇದ್ದೇವೋ ಎಂಬುದು ಬೀದರ ಜಿಲ್ಲೆಯ ಜನರ ಆತಂಕವಾಗಿದೆ.

ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿ ಅತಿರೇಕಕ್ಕೆ ಹೋಗಿ ಮಹಿಳೆಯೊಬ್ಬಳ ಮೇಲೆ ಹಲ್ಲೆಯಾಗಿದ್ದು ಮಹಿಳೆ ಸಾವಿಗೀಡಾದ ಘಟನೆ ತಾಲೂಕಿನ ಗೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೀದರ್ ಬ್ರೀಮ್ಸ್ ಆಸ್ಪತ್ರೆಯಲ್ಲಿ ಶೋಭಾ (35 ) ಸಾವನ್ನಪ್ಪಿದ್ದು ಮಹಿಳೆ ಸಾವನ್ನಪ್ಪುತ್ತಿದ್ದಂತೆ ಅವರ ಸಂಬಂಧಿಕರು ಬ್ರೀಮ್ಸ್ ಆಸ್ಪತ್ರೆ ಮುಂಭಾಗ ಶವವಿಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.

ಹಿನ್ನೆಲೆ:

ಒಂದು ವಾರದ ಹಿಂದೆ ಮಕ್ಕಳ ವಿಷಯಕ್ಕೆ ಜಗಳವಾಗಿ ಮಹಿಳೆಯ ಮೇಲೆ ಹಲ್ಲೆಯಾಗಿತ್ತು.

ಈ ಪ್ರಕರಣದ ಆರೋಪಿ ಸುರೇಶ್ ಎಂಬಾತ ಸೇರಿದಂತೆ ಹಲವು ಆರೋಪಿಗಳು ಕಟ್ಟಿಗೆಯಿಂದ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ.

ಘಟನೆಯಲ್ಲಿ ಹಲ್ಲೆಯಾದ ಮೂವರ ಪೈಕಿ ಇನ್ನೂ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆಯೆನ್ನಲಾಗಿದ್ದು ಈ ಕುರಿತು ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಮತ್ತೆ ಪ್ರಕರಣ ಮಹಿಳೆಯೊಬ್ಬಳ ಸಾವಿನಲ್ಲಿ ಅಂತ್ಯ ಕಂಡಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group