ಬೀದರ್ – ಜಿಲ್ಲೆಯ ಭಾಲ್ಕಿ ತಾಲೂಕಿನ ತುಗಾವ್ (ಎಚ್) ಗ್ರಾಮದಲ್ಲಿ 39 ಗುಂಟೆ ಜಮೀನಿಗಾಗಿ ಮಹಿಳೆಯನ್ನು ಭಾನುವಾರ ಗುಂಡಿಟ್ಟು ಕೊಲೆ ಮಾಡಲಾಗಿದೆ , ಕವಿತಾ ಮೋಹನ್ ತುಲಜಾಪುರೆ ( 40) ಕೊಲೆಯಾದವಳು.
ಗ್ರಾಮದ ಬಬ್ರುವಾಹನ್ ಕೇರಬಾ ಜೊತೆ ಕೆಲದಿನ ಹಿಂದೆ ಈ ಜಮೀನು ಸಂಬಂಧ ವಾದ-ವಿವಾದ ನಡೆದಿತ್ತು. ಮೃತಳ ಪತಿ ಮೋಹನ್ ನೀಡಿದ ದೂರಿನನ್ವಯ 8 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಗಳಾದ ಬಬ್ರುವಾಹನ ಕೆರಬಾ, ಅಮೂಲ್ ಬಬ್ರುವಾಹನ್ ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ’.
ಸ್ಥಳಕ್ಕೆ ಭೇಟಿ ಕೊಟ್ಟ ತಹಶಿಲ್ದಾರರಾದ ಕೀರ್ತಿ ಚಾಲಕರು ಕುಟುಂಬದವರಿಗೆ ಸಾಂತ್ವನ ಹೇಳಿ ಈ ಘಟನೆಗೆ ಸಂಬಂಧಿಸಿದಂತೆ ಮನವಿ ಕೊಟ್ಟಿದ್ದು ಕಾನೂನಾತ್ಮಕವಾಗಿ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಬಹುಜನ್ ವಂಚಿತ ಅಖಾಡಿ ಜಿಲ್ಲಾಧ್ಯಕ್ಷರಾದ ಕೀರ್ತಿ ರತನ್ ಸೋನಾಲ್ ಅವರು, ಸರ್ಕಾರದಿಂದ ನಮಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ ಆದ್ದರಿಂದ ತಹಸಿಲ್ದಾರ್ ರಿಗೆ ಪೊಲೀಸ್ ಇಲಾಖೆಯವರಿಗೆ ಧನ್ಯವಾದ ತಿಳಿಸಿದರು.
ಇದೇ ಸಂದರ್ಭದಲ್ಲಿ ( ಎ ಎಸ್. ಪೀ ) ಪೃಥ್ವಿಕ್ ಶಂಕರ್, ಸಿಪಿಐ ವೀರಣ್ಣ ದೊಡ್ಡಮನಿ, ಪಿಎಸ್ಐ ಸೂರ್ಯಕಾಂತ್ ಕರಂಜಿ, ನಂದಕುಮಾರ್ ಬಿರಾದಾರ್, ಗ್ರಾಮಸ್ಥರಾದ ಕಾಳಿದಾಸ್ ,ನವನೀತ್ ಪಾಟೀಲ್ ಸೇರಿ ಹಲವಾರು ಗ್ರಾಮಸ್ಥರು ಹಾಜರಿದ್ದರು.