ಸವದತ್ತಿ- ಮಹಿಳೆಯರು ಹಿಂದುಳಿದರೆ ಯಾವುದೇ ರಾಷ್ಟ್ರ ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯವಿಲ್ಲ. ಲಿಂಗ ತಾರತಮ್ಯ ಅಸ್ತಿತ್ವದಲ್ಲಿದ್ದರೆ ಮಹಿಳೆಯರು ಶಿಕ್ಷಣ ಪಡೆಯದಿದ್ದರೆ ರಾಷ್ಟ್ರದ ಪ್ರಗತಿ ಮತ್ತು ಏಳಿಗೆ ಸಾಧ್ಯವಿಲ್ಲ ಎಂದು ಡಾ.ನಯನಾ ಭಸ್ಮೆ ತಿಳಿಸಿದರು.
ಅವರು ಪಟ್ಟಣದ ಗಂಗಾ ಶಂಕರ ಕಲ್ಯಾಣ ಮಂಟಪದಲ್ಲಿ ಜೈಂಟ್ಸ್ ರೇಣುಕಾ ಸಹೇಲಿ ವತಿಯಿಂದ ಹಮ್ಮಿಕೊಳ್ಳಲಾದ ಮಹಿಳಾ ಸಬಲೀಕರಣ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪಲ್ಲವಿ ಪದಕಿಯವರು “ಮಹಿಳಾ ಸಬಲೀಕರಣ ಎಂಬ ಪದವನ್ನು ಸಮಾಜದಲ್ಲಿ ಮಹಿಳೆಯರ ಸ್ಥಿತಿಯನ್ನು ಸುಧಾರಿಸಲು ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಲಿಂಗ ವ್ಯತ್ಯಾಸವನು ಕಡಿಮೆ ಮಾಡಲು ತಗೆದುಕೊಂಡ ಕ್ರಮಗಳ ಬಗ್ಗೆ ಅಧ್ಯಯನ ಮಾಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು.
ಶಿಲ್ಪಾ ವೆರ್ಣೇಕರ್ “ಮಹಿಳೆಯರು ಲಿಂಗ ತಾರತಮ್ಯ ಮತ್ತು ಇತರ ವಿಭಜನೆಗಳಿಂದ ಮುಕ್ತರಾಗದ ಹೊರತು ಸಮಾನ ಮತ್ತು ನ್ಯಾಯಯುತ ಸಮಾಜದ ಪ್ರಗತಿ ಅಸಾಧ್ಯ ಎಂದು ಮಹಿಳಾ ಸಬಲೀಕರಣದ ಮಹತ್ವ ಕುರಿತು ತಿಳಿಸಿದರು. ಶಿಲ್ಪಾ ವೆರ್ಣೇಕರ್ ಅವರು ಮಹಿಳಾ ಸಬಲೀಕರಣದ ಮಹತ್ವ ಕುರಿತು ಇದೇ ಸಂದರ್ಭದಲ್ಲಿ ತಿಳಿಸಿದರು.
ಉಷಾ ಪಾಟೀಲ “ಮದುವೆ ಮತ್ತು ದಾಂಪತ್ಯ ಕುರಿತು” ಮಾತನಾಡಿದರು ಈ ಸಂದರ್ಭದಲ್ಲಿ ದಿನಕರ್ ಅಮೀನ್, ಡಾ ಪಲ್ಲವಿ ನಾವದಗಿ, ಲಗಮಣ್ಣ ದೊಡಮನಿ, ಶಿಲ್ಪಾ ವೆರ್ಣೇಕರ್, ಉಷಾ ಪಾಟೀಲ, ತಾರದೇವಿ ವಾಲಿ, ಮೋಹನ್ ಕರೆಕರ, ಅರುಣ್ ಪಾಟೀಲ, ಉಲ್ಲಾಸ ತಲ್ವೇಕರ್, ರಾಜು ಮಾಳವಾದೆ, ಶಿವಕುಮಾರ್ ಹಿರೇಮಠ, ಪ್ರವೀಣ ತ್ರಿವೇದಿ, ಮಹಮ್ಮದ್ ಎಲಿಗಾರ, ಜಗದೀಶ ಹಂಪನ್ನವರ,ನಾಗರಾಜ್ ಬೋನಗೇರಿ, ಸುನೀತಾ ಶಿಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪಲ್ಲವಿ ಪದಕಿಯವರು ಸ್ವಾಗತಿಸಿದರು. ಕೀರ್ತಿ ಕರೋಶಿವರು ನಿರೂಪಿಸಿದರು. ಸುಮಿತ್ರಾ ಕಾರದಗಿ ವಂದಿಸಿದರು.