ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಲಬುರ್ಗಿ ತಾಲೂಕ ಘಟಕದ ಉದ್ಘಾಟನೆಯನ್ನು ದಿ. 17 ರ ಬೆಳಗ್ಗೆ 11:45 ಕ್ಕೆ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ನಂದಿನಿ ಸನಬಾಲ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಹಿರಿಯ ಸಾಹಿತಿಗಳಾದ ಜಯದೇವಿ ಗಾಯಕವಾಡ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಕೀಯ ಉಪನಿರ್ದೇಶಕರಾದ ರವಿಕಾಂತಿ ಸಿ ಖ್ಯಾತನಾಳ, ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ನಂದಿನಿ ಸನಬಾಲ, ಜೆಸ್ಕಾಂ ಅಧಿಕಾರಿ ಧ್ರುವತಾರೆ ಸಿ. ತಿಗಡಿ, ಜಿಲ್ಲಾ ಸರ್ಕಾರಿ ಮಹಿಳಾ ನೌಕರರ ಸಂಘದ ಗೌರವಾಧ್ಯಕ್ಷೆ ಶಶಿಕಲಾ ಎಸ್. ನರೋಣಾಕರ್, ಸಂಘದ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಬಿ. ಸಂಗಾವಿ ಅವರು ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಬುರ್ಗಿ ತಾಲೂಕ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ಸವಿತಾ ಬಿ.ನಾಸಿಯವರು ವಹಿಸಲಿದ್ದಾರೆಂದು ನಂದಿನಿ ಸನಬಾಲ ತಿಳಿಸಿದ್ದಾರೆ.
ಕಾರ್ಯಕ್ರಮದ ಆರಂಭಕ್ಕೆ (ಬೆಳಿಗ್ಗೆ 9 ಗಂಟೆಗೆ) ಉಚಿತ ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.