ಮಹಿಳೆಯರು ಸಂಘಟಿತರಾಗಿ ಸರ್ವ ಕ್ಷೇತ್ರ ಗಳಲ್ಲಿ ಸಾಧನೆ ಮಾಡಲಿ : ಸೈಯದಾ ಬಳ್ಳಾರಿ 

0
70

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ

ಬೆಳಗಾವಿ :-ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಾತೆ ಸಾವಿತ್ರಿ ಬಾಯಿ ಫುಲೆ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚೆಗೆ ಬೆಳಗಾವಿ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಜರುಗಿತು

ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಮಾರ್ಟ್ ಸಿಟಿ ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸೈಯದಾ ಆಫ್ರಿನ್ ಬಾನು ಬಳ್ಳಾರಿ ಯವರು ಉದ್ಘಾಟನೆಮಾಡಿ ಮಾತನಾಡಿ, ಇಂದು ಬದುಕಿನ ಪ್ರತಿಯೊಂದು ಕ್ಷೇತ್ರ ದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ, ಆರ್ಥಿಕ ವಾಗಿ ಸಬಲ ರಾಗಬೇಕು,ಹೊಸ ಹೊಸ ಸಾಧನೆ ಮಾಡಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿ ಕೊಳ್ಳ ಬೇಕು, ಯಾವುದೇ ಕಾರ್ಯದಲ್ಲಿ ಹಿಂದೆ ಬೀಳದೆ ಛಲದಿಂದ ಮುಂದೆ ಬರಬೇಕು ಎಂದರು, ಸಂಘಟನೆ ಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಶೈಕ್ಷಣಿಕ ರಂಗದಲ್ಲಿ ಸಾಧನೆ ಮಾಡಿದ 67 ಶಿಕ್ಷಕಿಯರಿಗೆ ಸಾವಿತ್ರಿ ಬಾಯಿ ಫುಲೆ ಜಿಲ್ಲಾ ಆತ್ಯುತ್ತಮ ಶಿಕ್ಷಕಿ ಹಾಗೂ ಶೈಕ್ಷಣಿಕ ರಂಗದಲ್ಲಿ ಉತ್ತಮ ವಾಗಿ ಕಾರ್ಯ ಮಾಡುತ್ತಿರುವ 16 ಶಾಲೆಗಳಿಗೆ ಜಿಲ್ಲಾ ಆದರ್ಶ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಡಿ ಡಿ ಪಿ ಐ ರವರಾದ ಶ್ರೀಮತಿ ಎಲ್ ಎಸ್ ಹಿರೇಮಠ ರವರು ಭಾವಚಿತ್ರ ಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಶಿಕ್ಷಕಿಯರು ಸಂಘಟಿಕ ರಾಗಿ ತಮ್ಮ ಸಮಸ್ಯೆ ಗಳಿಗೆ ಪರಿಹಾರ ಕಂಡು ಕೊಳ್ಳುವುದು ಅಭಿಮಾನದ ಸಂಗತಿ ಯಾಗಿದೆ, ಈ ಸಂಘದ ಕಾರ್ಯಕ್ರಮ, ಕಾರ್ಯ ಚಟುವಟಿಕೆ ಗಳು ಇತರರಿಗೆ ಮಾದರಿ ಯಾಗಿವೆ ಎಂದರು.

ಪ್ರತಿ ಯಶಸ್ವಿ ಪುರುಷನ ಹಿಂದೆ ಹೆಣ್ಣುಮಕ್ಕಳಿದ್ದರೆ, ಯಶಸ್ವಿ ಹೆಣ್ಣು ಮಕ್ಕಳ ಹಿಂದೆ ಪುರುಷನಿರುವನು, ಯಾರು ಹೆಚ್ಚು ಕಡಿಮೆ ಭಾವನೆ ಬೇಡ ಸರ್ವರೂ ಸಮಾನರು ಹೀಗಾಗಿ ಹೊಂದಾಣಿಕೆ ಸಾಮರಸ್ಯದ ಬದುಕು ಇರಬೇಕು ಎಂದರು

ಸಮಾರಂಭದ ಅಧ್ಯಕ್ಷತೆ ಯನ್ನು ಜಿಲ್ಲಾಧ್ಯಕ್ಷ ರಾದ ಶ್ರೀಮತಿ ನಸ್ರಿನಬಾನು ಎಚ್ ಕಾಶಿಮನವರ (ಖುದ್ದನ್ನವರ )ರವರು ವಹಿಸಿದ್ದರು ವಿಶೇಷ ಆಹ್ವಾನಿತರಾಗಿ ಬೆಳಗಾವಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ದಾಸಪ್ಪನವರ , ಬೈಲಹೊಂಗಲದ ಎ ಎನ್ ಪ್ಯಾಟಿ, ಚನ್ನಮ್ಮನ ಕಿತ್ತೂರಿನ ಸಿ ವಾಯ್ ತುಬಾಕಿ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ರಾಯವ್ವ ಗೋಳ, ಜಿಲ್ಲಾ ಬರಹಗಾರ ಸಂಘದ ಗೌರವಾಧ್ಯಕ್ಷರಾದ ಬಸವರಾಜ ಫಕೀರಪ್ಪ ಸುಣಗಾರ, ಅಧ್ಯಕ್ಷರಾದ ಸುರೇಶ ಸಕ್ರೆನವರ ಹಾಗೂ ಜಿಲ್ಲಾ ಎಸ್ ಸಿ, ಎಸ್ ಟಿ ಶಿಕ್ಷಕರ ಕ್ಷೇಮಾಭಿವೃ ದ್ಧಿ ಸಂಘದ ಅಧ್ಯಕ್ಷರಾದ ಬಿ ಬಿ ಹಟ್ಟಿ ಹೋಳಿವಿ ಎಮ್ ಮುಳ್ಳೂರ, ಎಮ್ ಎ ಮಾಹುತ, ಆರ್ ಎಸ್ ಹೋಳಿ, ಕುಮಾರ ಸ್ವಾಮಿ ಚರಂತಿಮಠ, ಎಮ್ ಎಸ್ ಕಲ್ಮಠ,ಶಬ್ಬೀರ್ ಖುದ್ದನವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು,

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಘಟನೆ ಯ ಪದಾಧಿಕಾರಿಗಳು,ಶೈಕ್ಷಣಿಕ ಹಾಗೂ ಸಾಹಿತ್ಯಾಭಿಮಾನಿಗಳು, ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು ಪ್ರಾರಂಭ ದಲ್ಲಿ ಶಿಕ್ಷಕ ಮೋರೆ ಪ್ರಾರ್ಥಿಸಿದರು, ಪ್ರದಾನ ಕಾರ್ಯದರ್ಶಿ ಪುಷ್ಪಾ ದು, ಖನ್ನಿ ನಾಯ್ಕರ ಹಾಗೂ ಗೀತಾ ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಜಯಶ್ರೀ ಡೇಕುಳಿ ವಂದಿಸಿದರು

LEAVE A REPLY

Please enter your comment!
Please enter your name here