spot_img
spot_img

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದಿಂದ ಮಹಿಳಾ ದಿನಾಚರಣೆ

Must Read

- Advertisement -

ಬೆಳಗಾವಿ: ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಮಹಿಳೆಯರಿಂದ ದಿನಾಂಕ 19, ರವಿವಾರ ಸತ್ಸಂಗದ ಮನೆಯಲ್ಲಿ “ಮಹಿಳಾ ದಿನಾಚರಣೆ”ಯನ್ನು ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಎಸ್, ಜಿ ಸಿದ್ನಾಳ ಅವರು, ಮಹಿಳೆ ಎಲ್ಲ ಹಕ್ಕುಗಳಿಂದ ವಂಚಿತಳಾಗಿ ಶೂದ್ರರಂತೆ ಶೋಷಣೆಗೆ ಒಳಗಾಗಿದ್ದಳು. ಹೆಣ್ಣು ಎಂದರೆ ಹುಣ್ಣು ಎಂಬಂತೆ ಕಾಣುತ್ತಿದ್ದರು.ಅವಳ ಸ್ಥಿತಿ ಚಿಂತಾಜನಕವಾಗಿತ್ತು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಗೆ ಸಾಮಾಜಿಕ, ಆರ್ಥಿಕ, ಧಾರ್ಮಿಕ, ವೈಚಾರಿಕವಾಗಿ ಅನುಭವ ಮಂಟಪದಲ್ಲಿ ಮುಕ್ತವಾಗಿ ಅವಕಾಶವನ್ನು ಕೊಟ್ಟರು ಅದರ ಪರಿಣಾಮವಾಗಿ ಅಕ್ಕ ಮಹಾದೇವಿ, ಸತ್ಯಕ್ಕ, ನೀಲಾಂಬಿಕೆ, ಗಂಗಾಂಬಿಕೆ ,ಮುಕ್ತಾಯಕ್ಕ ತನ್ನ ಅಣ್ಣ ಅಜಗಣ್ಣ ಹೆಸರಿನ ಅಂಕಿತದಲ್ಲಿ ವಚನಗಳನ್ನು ರಚನೆ ಮಾಡಿದಳು ಅಷ್ಟೇ ಅಲ್ಲದೆ ಮಹಾ ಮೇಧಾವಿ ಅಲ್ಲಮ ಪ್ರಭುಗಳನ್ನೇ ಪ್ರಶ್ನಿಸಿದಳು ಮಹಿಳೆಯರಲ್ಲಿ ಇಂತಹ ಧೈರ್ಯವನ್ನು ತುಂಬಿದವರು ಶರಣರು.

ಸುಮಾರು 33, 35 ವಚನಕಾರ್ತಿಯರು ಹೊರಹೊಮ್ಮಿದರು. “ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸಾಕ್ಷಾತ್ ಕಪಿಲ ಸಿದ್ದಮಲ್ಲಿಕಾರ್ಜನ ” . “ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ” ಎಂದು ಲಿಂಗ ಸಮಾನತೆ ಸಾರಿದವರು ಶರಣರು ಎಂದು ಹೇಳಿದರು.

- Advertisement -

ಶಂಕರ ಶೆಟ್ಟಿ ಅವರು ಮಾತನಾಡಿ, “ಮಾತೃ ಸ್ವರೂಪಿಯಾದ ಹೆಣ್ಣು ಅವಳಿಗೆ ಅವಳೆ ಸಾಟಿ ” “ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ” ಎಂದು ಮಹಿಳೆಯ ಮಹತ್ವ ಕುರಿತು ಮಾತನಾಡಿದರು. ಶರಣ ಮಹಾದೇವ ಕೋರೆ ಅವರು ಅಪ್ಪ ಬಸವಣ್ಣನವರು ತಮ್ಮ ಅಕ್ಕ ನಾಗಲಾಂಬಿಕೆಯ ಕಷ್ಟಗಳನ್ನು ಅತಿ ಹತ್ತಿರದಿಂದ ಕಂಡು ಹೆಣ್ಣು ಮಕ್ಕಳನ್ನು ಎಲ್ಲ ಸಮಸ್ಯೆಗಳಿಂದ ಮಕ್ತರಾಗಿಸಿದರು ಎಂದು ಹೇಳಿದರು. ಶರಣೆ ವಿಜಿಯಾ ಅಮ್ಮಣಿಗಿಯವರು ಅಕ್ಕಮಹಾದೇವಿಯ ವಚನ ವಿಶ್ಲೇಷಣೆ ಮಾಡಿದರು.

ಲಲಿತಾ ರುದ್ರಗೌಡರವರು ಐದು ವಚನಗಳನ್ನು ಕಂಠ ಪಾಠ ಹೇಳಿದರು,ವಿಭೂತಿಯ ಮಹತ್ವ ಕುರಿತು ಚನ್ನ ಬಸವಣ್ಣವರ ವಚನವನ್ನು,ಮೇಘಾ ಪಾಟೀಲ್ ಶೋಭಾ ಶಿವಳ್ಳಿ, ತ್ರಿವೇಣಿ ಪಾಟೀಲ್, ರಾಜೇಶ್ವರಿ ತಿಪಶೇಟ್ಟಿ, ದಾಕ್ಷಾಯಿಣಿ ಉಡದಾರ, ರೇಖಾ ಮುದ್ದಾಪುರ ಸುಂದರವಾಗಿ ವಚನ ನೃತ್ಯವನ್ನು ಮಾಡಿದರು,  ಜಾನಪದದ ವೇಷಭೂಷಣದಲ್ಲಿ ಜಾನಪದಗಳನ್ನು ಹಾಡಿದರು.

- Advertisement -

ಸುನಿತಾ ನಂದೆಣ್ಣವರ ನಿರೂಪಣೆ ಮಾಡಿದರು. ಶರಣ ಕಟ್ಟಿಮನಿ ಅವರು ವಂದನಾರ್ಪಣೆ ಸಲ್ಲಿಸಿದರು. ಶರಣರಾದ ರುದ್ರಗೌಡರ, ಕುಂದ್ರಾಳ ಬಿ ಡಿ ಪಾಟೀಲ್, ಸಿದ್ದರಾಮ,ಕಮತೆ ಮುಂತಾದವರು ಶರಣೆಯರಾದ ಶಾಂತಾ ಕಳಸಣ್ಣವರ ಶೋಭಾ ಕಮತೆ ತಾಯಂದಿರು ಮತ್ತು ಶರಣೆಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಗುರ್ಲಾಪೂರ ಗ್ರಾಮಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ

ಗುರ್ಲಾಪೂರ- ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮಕ್ಕೆ ಇತ್ತಿಚೆಗೆ ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಇವರು ಪ್ರಥಮ ಬಾರಿಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group