“ವ್ಯಕ್ತಿಗಳು ಸಮಾಜದಲ್ಲಿ ತಮ್ಮದೇ ಆದ ಬೆಂಬಲ ಮತ್ತು ಸುಧಾರಣೆಯನ್ನು ಒದಗಿಸಿಕೊಳ್ಳಬೇಕು ಎಂಬ ಸಿದ್ಧಾಂತ, ತನ್ನನ್ನು ತಾನು ಒದಗಿಸುವ ಅಥವಾ ಸುಧಾರಿಸಿಕೊಳ್ಳುವ ಕ್ರಿಯೆ ಅಥವಾ ಸಾಮರ್ಥ್ಯ”.ಈ ರೀತಿಯ ಸಿದ್ದಾಂತದೊಂದಿಗೆ ಹುಟ್ಟಿದ ಗುಂಪು ಶುಭಲಕ್ಷ್ಮಿ ಸ್ವಸಹಾಯ ಗುಂಪು ಮುನವಳ್ಳಿ.
ಇದೇ ಮಾರ್ಚ 23/3/2025 ರವಿವಾರ ಶುಭಲಕ್ಷ್ಮಿ ಸ್ವಸಹಾಯ ಗುಂಪಿನ ಸದಸ್ಯರಿಂದ 3 ನೆಯ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಬಹಳ ವಿಭಿನ್ನ ರೀತಿಯಿಂದ ಆಚರಿಸಲಾಯಿತು.
12 ಮಹಿಳೆಯರ ಸದಸ್ಯತ್ವ ವನ್ನು ಹೊಂದಿದ ಈ ಗುಂಪು ಬಹಳ ಚಟುವಟಿಕೆಯಿಂದ ಕೂಡಿದೆ. ಈ ಗುಂಪಿನ ಪ್ರತಿಯೊಬ್ಬ ಸದಸ್ಯರರೂ ಗುಂಪಿನ ಸಾಲದ ಹಣವನ್ನು ಸದುಪಯೋಗ ಪಡಿಸಿಕೊಂಡು… ಮತ್ತೆ ಮರುಪಾವತಿ ಮಾಡುತ್ತ ಅದರ ಲಾಭವನ್ನು ಪಡೆಯುತ್ತಿದ್ದಾರೆ.
ನಾವೆಲ್ಲರೂ ಪರಸ್ಪರವಾಗಿ ಒಪ್ಪಿಕೊಂಡು ಒಂದು ಸಾಮಾನ್ಯ ನಿಧಿಗೆ ಧನ ಸಹಾಯ ಮಾಡಲು ಹಾಗೂ ಪರಸ್ಪರ ಸಹಾಯದ ತಳಹದಿಯ ಮೇಲೆ ತಮ್ಮ ತುರ್ತು ಅವಶ್ಯಕತೆಗಳನ್ನು ಪೂರೈಸಲು, ಕ್ರಮಬದ್ಧವಾಗಿ ಚಿಕ್ಕ ಮೊತ್ತದ ಹಣವನ್ನು ಉಳಿತಾಯ ಮಾಡಲು ಸ್ವಯಂ ಪ್ರೇರಣೆಯಿಂದ ಒಟ್ಟಾಗಿ ಸೇರಿ, ಸಮರೂಪದ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆ ಹೊಂದಿರುವ ಕಿರು ಉದ್ದಿಮೆದಾರರ ದಾಖಲಿಸಿದ ಅಥವ ದಾಖಲಾಗದ ಒಂದು ತಂಡದ ಸ್ವ-ಸಹಾಯ ಗುಂಪು ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾನು ಮುಕ್ತಾ ಪಶುಪತಿ ಈ ಗುಂಪಿನ ಸದಸ್ಯೆ ಆಗಿದ್ದು ಈ ಲೇಖನ ಬರೆಯಲು ಬಹಳ ಹೆಮ್ಮೆ ಅನಿಸುತ್ತಿದೆ.
ಶ್ರೀಮತಿ ಭಾಗ್ಯಲಕ್ಷ್ಮಿ ಅಮಟೆ ಅವರು ಸಂಘದ ಅಧ್ಯಕ್ಷರಾಗಿದ್ದು ಹಾಗೂ ಪೂಜಾ ಕಮ್ಮಾರ ಅವರು ಕಾರ್ಯದರ್ಶಿ ಆಗಿದ್ದು ತಮ್ಮ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ನಮ್ಮ ಸಂಘಟನೆಯಲ್ಲಿ ಆರ್ಥಿಕವಾಗಿ ಬಡವನಾದ ಒಬ್ಬ ವ್ಯಕ್ತಿಯು ಒಂದು ಗುಂಪಿನ ಭಾಗವಾಗಿ ಶಕ್ತಿಶಾಲಿಯಾಗುತ್ತಾನೆ. ಅಲ್ಲದೆ SHG ಗಳ ಮೂಲಕ ಹಣದ ವ್ಯವಸ್ಥೆ ಮಾಡುವುದರಿಂದ ಹಣದ ಸಾಲ ಕೊಡುವವರು ಹಾಗೂ ಸಾಲ ಪಡೆಯುವರಿಬ್ಬರಿಗೂ ಲೇವಾದೇವಿ ಖರ್ಚು ಕಡಿಮೆಯಾಗುತ್ತದೆ. ಚಿಕ್ಕ-ಗಾತ್ರದ ವೈಯಕ್ತಿಕ ಖಾತೆಗಳ ದೊಡ್ಡ ಸಂಖ್ಯೆಯು ಬದಲಾಗಿ ಕೇವಲ ಒಂದೇ SHG ಖಾತೆಯನ್ನು ಸಾಲ ಕೊಡುವವರು ನಿರ್ವಹಿಸುತ್ತಾರೆ. ಸಾಲ ತೆಗೆದುಕೊಳ್ಳುವವರು -SHG ಯ ಒಂದು ಭಾಗವಾಗಿ ಪ್ರಯಾಣಿಸಲು (ಶಾಖೆ ಹಾಗೂ ಇತರೆ ಸ್ಥಳಗಳಿಂದ ಹೋಗಿ ಬರುವ) ಕಾಗದ ಪತ್ರದ ಕೆಲಸ ಮುಗಿಸಲು ಹಾಗೂ ಸಾಲಕ್ಕಾಗಿ ಮತ ಕೇಳಲು ಕೆಲಸದ ಸಮಯ ನಷ್ಟದ ಖರ್ಚು ಕಡಿಮೆ ಮಾಡುತ್ತಾರೆ. ಹೀಗೆ ಮಾಡುವ ಜೊತೆಗೆ ಪ್ರತಿ ವರ್ಷ ನಾವೆಲ್ಲರೂ ಸೇರಿ ಒಂದು ಚಿಕ್ಕ ಕಾರ್ಯ ಕ್ರಮ ಹಮ್ಮಿಕೊಳ್ಳುವ ಮೂಲಕ ವಾರ್ಷಿಕೋತ್ಸವದ ಆಚರಿಸಿಕೊಳ್ಳುತ್ತೇವೆ.
ಈ ವರ್ಷದ ಕಾರ್ಯಕ್ರಮದಲ್ಲಿ ಚಮಚದಲ್ಲಿ ಲಿಂಬು ಇಟ್ಟುಕೊಂಡು ವೇಗವಾಗಿ ನಡೆಯುವ ಹಾಗೂ ನಮ್ಮ ಕರ್ನಾಟಕ ಸಂಸ್ಕೃತಿ ಮೆರಗು ತರುವ ಇಳಕಲ್ ಸೀರೆ. ಉಡುಗೆ ತೊಡುಗೆ ಸ್ಪರ್ಧೆ ಯನ್ನು ಅಧ್ಯಕ್ಷರಾದ ಶ್ರೀಮತಿ ಭಾಗ್ಯಲಕ್ಷ್ಮಿಅವರು ಸಂಯೋಜಿಸಿದ್ದರು. ಇದರಲ್ಲಿ ಎಲ್ಲ ಸದಸ್ಯರು ಬಹಳ ಆಸಕ್ತಿಯಿಂದ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಮಗೆಲ್ಲ ನಮ್ಮ ಶಾಲೆಯ ದಿನಗಳು ಮತ್ತೆ ಮರುಕಳಿ ಸಿದವು. ಎಲ್ಲರೂ ಬಹುಮಾನ ಗೆಲ್ಲಲೇಬೇಕೆಂಬ ತಯಾರಿ ಮಾಡಿಕೊಂಡಿದ್ದೆವು.
ಲಿಂಬು ಚಮಚ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಶ್ರೀಮತಿ ಸುಚಿತಾ ಹಂಜಿ, ಎರಡನೇ ಬಹುಮಾನ ಶ್ರೀಮತಿ ಡಾ. ಅನಿತಾ ಹಂಜಿ ಹಾಗೂ ಮೂರನೆಯ ಬಹುಮಾನವನ್ನು ಶ್ರೀಮತಿ ಭಾರತಿ ಕಟಿಗೆನ್ನವರ ಪಡೆದುಕೊಂಡರು.
ಹಾಗೆಯೇ ಇಳಕಲ್ ಸಂಪ್ರದಾಯದ ಉಡುಗೆ ತೂಡುಗೆಯಲ್ಲಿ ಮೊದಲನೇ ಬಹುಮಾನ ಶ್ರೀಮತಿ ಭಾರತಿ ಎರಡನೇ ಬಹುಮಾನ ಶ್ರೀಮತಿ ಸುಚಿತಾ ಹಾಗೂ ಮೂರನೇಯ ಬಹುಮಾನ ಶ್ರೀಮತಿ ಸುಜಾತಾ ಪಾಟೀಲ ಪಡೆದುಕೊಂಡರು. ಹಾಗೆಯೇ ಸಮಾಧಾಕರ ಬಹುಮಾನವನ್ನು ಶ್ರೀಮತಿ ಮುಕ್ತಾ ಪಶುಪತಿ ಇವರಿಗೆ ನೀಡಲಾಯಿತು.
ಇತ್ತೀಚೆಗೆ ಅನೇಕ ಮಹಿಳಾ ಸಂಘಟನೆಗಳು ಹುಟ್ಟಿಕೊಂಡು ಇಂದಿನ ಮಹಿಳೆ ಕೇವಲ ಮನೆ ಕೆಲಸಕ್ಕೆ ಸೀಮಿತವಾಗಿರದೆ ಹೊರಗಿನ ಸಮಾಜಕ್ಕೆ ತನ್ನನ್ನು ಪರಿಚಯಿಸಿಕೊಳ್ಳುವ ಅವಕಾಶವನ್ನು ಪಡೆಯುತ್ತಿದ್ದಾಳೆ. ಇದರಿಂದ. ಅವರಿಗೂ ಜೀವನದಲ್ಲಿ ಸ್ವಲ್ಪ ಬದಲಾವಣೆ ಅನ್ನಿಸುತ್ತದೆ.. ಮತ್ತೆ ಇನ್ನೊಂದು ಖುಷಿಯ ವಿಚಾರ ಅಂದರೆ ಈ ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಪ್ರತಿಯೊಬ್ಬ ಸದಸ್ಯರಿಗೂ 3000 ರೂಪಾಯಿ…ಲಾಭಾಂಶವನ್ನು ನೀಡಲಾಯಿತು…
ಕಾರ್ಯಕ್ರಮ ಮುಗಿದ ನಂತರ ಎಲ್ಲರಿಗೂ ಅಲ್ಪೋಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ನಮ್ಮ ಈ ಸಂಘಟನೆಯು ಬ್ಯಾಂಕುಗಳು ಅಥವ ಇತರೆ ಸಂಸ್ಥೆಗಳ ಮೂಲಕ ನೇರವಾಗಿ ತಲುಪಲು ಕಷ್ಟವಾದಂತಹ ಬಡ ಜನತೆಗೆ ಕಿರು ಬಂಡವಾಳದ ಸೇವೆಗಳನ್ನು ಬಿಡುಗಡೆ ಮಾಡಲು ಸಾಧ್ಯವಬಾಗುವಂತಹ ಒಂದು ಮಾರ್ಗವಾಗಿದೆ. ನಮ್ಮ ಸದಸ್ಯರ ವೈಯಕ್ತಿಯ ಉಳಿತಾಯಗಳನ್ನು ಒಂದೇ ಠೇವಣಿಯಾಗಿ ಒಟ್ಟಾಗಿ ಸೇರಿಸುವುದರಿಂದ ನಮ್ಮ ಸ್ವ-ಸಹಾಯ ಗುಂಪು ಬ್ಯಾಂಕಿನ ಲೇವಾದೇವಿ ವೆಚ್ಚಗಳನ್ನು ಅತ್ಯಂತ ಕಡಿಮೆ ಮಾಡಿದೆ. ಹಾಗೂ ಠೇವಣಿಗಳ ಒಂದು ಆಕರ್ಷಕ ಪರಿಣಾಮವನ್ನು ಉತ್ಪತ್ತಿ ಮಾಡುತ್ತಿದೆ ಎಂದರೆ ಅತಿಶಯೋಕ್ತಿ ಅಲ್ಲ. .
ಶ್ರೀಮತಿ ಮುಕ್ತಾ. ಷ. ಪಶುಪತಿ ಮಠ
ಮುನವಳ್ಳಿ, ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ