spot_img
spot_img

ವಚನಗಳಲ್ಲಿ ಮನುಷ್ಯ ಪ್ರೀತಿಯ ಹೂರಣ ತುಂಬಿದೆ – ಬಾಬುಸಾಬ ಸಂಗೊಳ್ಳಿ

Must Read

ಬೈಲಹೊಂಗಲ: ಶರಣರ ಜೀವನದ ಅನುಭವದಿಂದ ಹೊರಹೊಮ್ಮಿದ ವಚನಗಳಲ್ಲಿ ಮನುಷ್ಯ ಪ್ರೀತಿಯ ಹೂರಣ ತುಂಬಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್‌ರೆಹಮಾನ (ಬಾಬುಸಾಬ) ಎಂ. ಸಂಗೊಳ್ಳಿ ಹೇಳಿದರು. ಪಟ್ಟಣದಲ್ಲಿ ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡ ‘ಮನೆ ಮನೆಗೆ ವಚನ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಾಸ್ತವತೆಯ ನೆಲೆಗಟ್ಟಿನ ಮೇಲೆ ಜೀವನದ ಅನೇಕ ಮಜಲುಗಳನ್ನು ತೋರಿಸುವ ವಚನ ಎಂಬ ಉತ್ಕೃಷ್ಠ ಗ್ರಂಥದಲ್ಲಿ ವಿಶ್ವಗುರು ಬಸವಣ್ಣ, ಅಲ್ಲಮಪ್ರಭುದೇವ, ಚೆನ್ನಬಸವಣ್ಣ, ಸಿದ್ಧರಾಮೇಶ್ವರ, ಅಕ್ಕಮಹಾದೇವಿ, ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ದುಗ್ಗಳೆ, ನಾಗಲಾಂಬಿಕೆ, ಮುಕ್ತಾಯಕ್ಕ, ಮೋಳಿಗೆ ಮಹಾದೇವಿ, ಸತ್ಯಕ್ಕ, ಅಂಬಿಗರ ಚೌಡಯ್ಯ, ಉರಿಲಿಂಗದೇವ, ಕರುಳ ಕೇತಯ್ಯ, ಗುಹೇಶ್ವರಯ್ಯ, ಬಾಲಸಂಗಯ್ಯ, ಜಕ್ಕಣಯ್ಯ, ಹೇಮಗಲ್ಲ ಪಂಪ ಹೀಗೆ ಬಸವಯುಗ ಮತ್ತು ಬಸವೋತ್ತರ ಯುಗದ ಅನೇಕ ಶರಣರ ಆಯ್ದ ವಚನಗಳು ಆದರ್ಶ ಬದುಕು ಕಟ್ಟಿಕೊಳ್ಳಲು ದಾರಿದೀಪಗಳಂತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಾತಿ ಯಾವುದಾದರೂ ಮನುಷ್ಯರಿಗೆ ಸಂಸ್ಕಾರ ಬಹಳ ಮುಖ್ಯ ಎಂದು ಅವರು ಹೇಳಿದರು.

ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರೂ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ  ಮೋಹನ ಬಸನಗೌಡ ಪಾಟೀಲ ಮಾತನಾಡಿ ಡಾ. ಎಂ.ಎಂ. ಕಲಬುರ್ಗಿಯವರ ಆಸಕ್ತಿ, ಬದ್ಧತೆ, ಪರಿಶ್ರಮದಿಂದ ಬೆಳಕು ಕಂಡ ವಚನ ಗ್ರಂಥ ಸನ್ಮಾನ್ಯ ಮುಖ್ಯಮಂತ್ರಿಗಳಿಂದಲೂ ಅನೇಕ ಗಣ್ಯರ ಕೈಸೇರಿದ್ದು ವಿಶೇಷವಾಗಿದೆ ಎಂದರು. ಶರಣರು ಸಮಾನತೆ, ಸಮನ್ವಯತೆ, ಸಹೋದರತೆ ಮತ್ತು ಸಹಬಾಳ್ವೆಯ ತತ್ವಗಳನ್ನು ಸಾರಿದರಲ್ಲದೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಅವರು ಅಭಿಪ್ರಾಯಪಟ್ಟರು. ಮೊಹಮ್ಮದ ಆಸೀಫ್ ಎ. ಸಂಗೊಳ್ಳಿ ಮಾತನಾಡಿ ಕೇಂದ್ರ ಬಸವ ಸಮಿತಿಯಿಂದ ನಿತ್ಯ ನಿರಂತರವಾಗಿ ನಡೆಯುತ್ತಿರುವ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು. ಶರಣ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುತ್ತಿರುವ ಬಸವ ಸಮಿತಿಯ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ ಮಾತನಾಡಿ ಕನ್ನಡ, ಇಂಗ್ಲಿಷ, ಹಿಂದಿ, ಉರ್ದು, ಸಂಸ್ಕೃತ, ತಮಿಳು, ತೆಲಗು, ಮರಾಠಿ, ಪಂಜಾಬಿ, ಬಂಗಾಲಿ, ಸಿಂಧಿ, ಅಸ್ಸಾಮಿ, ಗುಜರಾತಿ, ಕೊಂಕಣಿ, ರಾಜಸ್ಥಾನಿ, ಮೈಥಿಲಿ, ಭೋಜ್‌ಪುರಿ, ತುಳು, ಮಲಯಾಳಂ, ಕಾಶ್ಮೀರಿ, ಕೊಡವ, ಸಂತಾಲಿ, ಒರಿಯಾ, ಆಂಗಿಕ, ಡೋಗ್ರಿ, ಬಜ್ಜಿಕ, ಆರೆಬಿಕ, ಪರ್ಷಿಯನ್ ಭಾಷೆಗಳಲ್ಲಿ ಈಗಾಗಲೇ ವಚನ ಗ್ರಂಥ ಲೋಕಾರ್ಪಣೆಗೊಂಡಿದ್ದು ಪ್ರೆಂಚ್, ಚೈನೀಸ್(ಮ್ಯಾಂಡ್ರಿನ್), ಜರ್ಮನ್, ಜಪನೀಸ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿ ಅನುವಾದಿಸುವ ಕಾರ್ಯವನ್ನು ಮುಂದುವರೆಸಿದ್ದು ಬಸವ ಸಮಿತಿಯ ದೊಡ್ಡ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷ ಡಾ. ಫಕೀರನಾಯ್ಕ ಗಡ್ಡಿಗೌಡರ ಮಾತನಾಡಿ ಶ್ರಾವಣ ಮಾಸದಲ್ಲಿ ಶರಣರ ವಚನಗಳ ಸಾರವನ್ನು ಮನೆ ಮನೆಗೆ ತಲುಪಿಸುತ್ತಿರುವುದು ಶ್ಲಾಘನೀಯವಾದುದು ಎಂದರು. ಜೀವನ ಮೌಲ್ಯಗಳನ್ನು ಜನರ ಮನಗಳಲ್ಲಿ ಬಿತ್ತುವ ಕಾಯಕ ಮುಂದುವರೆಯಲಿ ಎಂದು ಅವರು ಹೇಳಿದರು.

ಬೈಲಹೊಂಗಲದ ಖ್ಯಾತ ದಂತ ವೈದ್ಯರಾದ ಡಾ. ತೌಸಿಫ್ ಸಂಗೊಳ್ಳಿ ಮಾತನಾಡಿ ವಿಶ್ವಶಾಂತಿಯ ಸಂದೇಶವನ್ನು ಒಳಗೊಂಡ ವಚನಗಳನ್ನು ಓದುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.

ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಸಂಗಮೇಶ ಹುಲಗನ್ನವರ ಮನೆ ಮನೆಗೆ ವಚನ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ವಚನಗಳು 12 ನೆಯ ಶತಮಾನದ ಶರಣರ ಅನುಭಾವದ ನುಡಿಗಳಾಗಿದ್ದು ಎಲ್ಲರ ಬದುಕಿಗೆ ಅಡಿಪಾಯಗಳಾಗಲಿ ಶುಭ ಕೋರಿದರು. ಮೆಹಬೂಬ ಶೇಖ್ ಸ್ವಾಗತಿಸಿದರು. ಮೊಹಮ್ಮದ ಫಹದ ಸಂಗೊಳ್ಳಿ ವಂದಿಸಿದರು.

- Advertisement -
- Advertisement -

Latest News

ಈಗಿನಿಂದಲೇ ತಟ್ಟಿದ ಚುನಾವಣೆಯ ಬಿಸಿ

ಬೀದರನ ಭಾಲ್ಕಿಯಲ್ಲಿ ತಂದೆ - ಮಗನ ವಿಭಿನ್ನ ಹೋರಾಟ ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ  ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ  ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ...
- Advertisement -

More Articles Like This

- Advertisement -
close
error: Content is protected !!