spot_img
spot_img

ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರ ಕೊಡುಗೆ ಮಹತ್ತರವಾದುದು – ಸಿದ್ಧಲಿಂಗ ಕಿಣಗಿ

Must Read

spot_img
- Advertisement -

ಸಿಂದಗಿ; ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು ಅಂತವರ ತತ್ವಾಧರ್ಶಗಳನ್ನು ನಾವೆಲ್ಲರೂ ಮೈಗೂಡಿಕೊಂಡಾಗ ಮಾತ್ರ ಜಯಂತಿ ಆಚರಿಸಿದಕ್ಕೆ ಸ್ವಾರ್ಥಕವಾಗುತ್ತದೆ ಎಂದು ಎಚ್.ಜಿ.ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ ೮೫೩ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಹನ್ನೆರಡನೇ ಶತಮಾನದ ಜಗಜ್ಯೋತಿ ಬಸವೇಶ್ವರರು ಹಾಗೂ ಸಿದ್ದರಾಮೇಶ್ವರರು ಕಾಯಕಯೋಗಿ ಶ್ರೇಷ್ಠ ವಚನಕಾರರಾಗಿದ್ದರು ಅಂತೆಯೆ ಎಲ್ಲ ಶರಣರು ಅವರನ್ನು ಅಪ್ಪಿಕೊಂಡಿದ್ದರು. ಬುದ್ಧ ಬಸವ ಡಾ. ಅಂಬೇಡ್ಕರರು, ಅಲ್ಲಮಪ್ರಭು, ಚೆನ್ನಬಸವ, ಅಕ್ಕ ಮಹಾದೇವಿ, ಸೇರಿದಂತೆ ಅನೇಕ ಶರಣರು ಸಮ ಸಮ ಸಮಾಜ ನಿರ್ಮಾಣಕ್ಕೆ ಎಲ್ಲ ಸಮಾಜದ ಸಮಾನತೆಯಲ್ಲಿ ಬೆಳಕು ಚೆಲ್ಲಿದ್ದಾರೆ. ಅವರಂತೆ ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿಪಡೆಯುತ್ತಿದ್ದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಚೆನ್ನಬಸವಣ್ಣನವರ ನಂತರ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸೊನ್ನಲಗಿ ಸಿದ್ದರಾಮೇಶ್ವರರು ಸಮಾಜದಲ್ಲಿ ಕಂದಾಚಾರ, ಮೂಡನಂಬಿಕೆ, ಅನಾಚಾರಗಳನ್ನು ಹೊಡೆದೋಡಿಸಲು ವಚನಗಳ ಮೂಲಕ ಸಮಾಜವನನು ತಿದ್ದುವ ಕೆಲಸ ಮಾಡಿ ಶಿವಯೋಗಿ ಸಿದ್ದರಾಮ ಎನಿಸಿಕೊಂಡಿದ್ದಾರೆ ಅದಕ್ಕೆ ಭೋವಿ ವಡ್ಡರ ಸಮಾಜದವರು ಹೆಚ್ಚು ಕೆಲಸಕ್ಕೆ ಒತ್ತು ಕೊಡದೇ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ವಿನಂತಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಶೋಕ ಮನಗೂಳಿ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಮೂರನೇ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮನುಜ ಮನುಕುಲಕ್ಕೆ ಉದ್ದಾರ ಮಾಡದೇ ಪ್ರಾಣಿ, ಪಶು ಪಕ್ಷಿಗಳಿಗಾಗಿ ನೀರಾವರಿ ಯೋಜನೆಗಳಂತಹ ಅರವಟ್ಟಿಗಳನ್ನು ನಿರ್ಮಿಸಿ ಚೆನ್ನಬಸವಣ್ಣನವರ ಪರಮ ಶಿಷ್ಯರಾಗಿ ಸಾಮಾಜಿಕವಾಗಿ ವಚನಗಳ ಮೂಲಕ ಉದ್ಧಾರ ಮಾಡಿದ್ದಾರೆ. ಸಿದ್ದರಾಮೇಶ್ವರರು ಕಾಯಕಯೋಗಿಗಳು, ಕರ್ಮಯೋಗಿಗಳು ಅವರಂತೆ ಅವರ ಸಮುದಾಯದ ಯುವಪೀಳಿಗೆ ಇತಿಹಾಸವನ್ನು ಅರಿತು ಜೀವನ ನಡೆಸಬೇಕು ಎಂದು ಹೇಳಿದ ಅವರು, ಭೂ ದಾಖಲೆಗಳನ್ನು ತ್ವರಿತಗತಿಯಲ್ಲಿ ಸಿಗುವ ನಿಟ್ಟಿನಲ್ಲಿ ಗಣಕೀಕರಣ ಮಾಡುವ ಮೂಲಕ ಭೂ ಸುರಕ್ಷಾ ಕೇಂದ್ರಗಳನ್ನು ಸ್ಥಾಪಿಸಿ ಸರಕಾರದ ಹೆಗ್ಗಳಿಗೆ ಪಾತ್ರವಾಗಿದೆ ಈ ಕಾರ್ಯಕ್ಕೆ ಮುಂದಾದ ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವ ಕೃಷ್ಣಾ ಬೈರೆಗೌಡ ಅವರಿಗೆ ಅಭಿನಂದನೆ ಸಲ್ಲಿಸಿದರು.

ಸಾನ್ನಿಧ್ಯ ವಹಿಸಿದ ಹಿಕ್ಕನಗುತ್ತಿ ಲಿಂಗಾಯತ ಮಹಾಮಠದ ಪ್ರಭುಲಿಂಗ ಶರಣರು ಮಾತನಾಡಿ, ಇಂದಿನ ಯುವಜನತೆ ಧಾರ್ಮೀಕದೆಡೆಗೆ ಹೋಗದೇ ಆಧುನಿಕ ಜಗತ್ತಿನೆಡೆಗೆ ಹೋಗಿ ದಾರಿ ತಪ್ಪುತ್ತಿದ್ದಾರೆ. ಕಾರಣ ಶರಣರ ಚರಿತ್ರೆಗಳನ್ನು ಹಿಂದುರಿಗಿ ನೋಡಲು ನೈತಿಕ ಶಿಕ್ಷಣ ಅತ್ಯಗತ್ಯ ಎಂದರು.

- Advertisement -

ತಾಪಂ ಎಇಇ ರಾಮು ಅಗ್ನಿ, ಗ್ರೇಡ್ ೨ ತಹಶೀಲ್ದಾರ ಇಂದಿರಾಬಾಯಿ ಬಳಗಾನುರ, ಬಸವ ಸಮಿತಿಯ ಶಿವಾನಂದ ಕಲಬುರ್ಗಿ, ಸರಕಾರಿ ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ಭೋವಿ ಸಮಾಜದ ತಾಲೂಕು ಅದ್ಯಕ್ಷ ಪಂಡಿತ ಯಂಪೂರೆ ವೇದಿಕೆ ಮೇಲಿದ್ದರು.

ಜ್ಞಾನ ಭಾರತಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ತಹಶಿಲ್ದಾರ ಪ್ರದೀಪಕುಮಾರ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಸೋಂಪೂರ ನಿರೂಪಿಸಿದರು. ಬಿಇಓ ಮಹಾಂತೇಶ ಯಡ್ರಾಮಿ ವಂದಿಸಿದರು.

- Advertisement -
- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group