ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಗೀತನಮನ, ನುಡಿನಮನ ಕಾರ್ಯಕ್ರಮ
ಬಾಗಲಕೋಟೆ : ಇತ್ತೀಚೆಗೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯ ಹಿರಿಯ ಪತ್ರಕರ್ತ ಉದಯ ವಿಜಯ ದಿನಪತ್ರಿಕೆಯ ಸಂಪಾದಕ ದಿವಂಗತ ಪ್ರಕಾಶ ಆರ್. ಗುಳೇದಗುಡ್ಡ ಅವರು ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಸ್ಥೆಯಿಂದ ಗೀತನಮನ ಹಾಗೂ ನುಡಿನಮನ ಕಾರ್ಯಕ್ರಮ ಜರುಗಿತು.
ಪ್ರಕಾಶ ಆರ್. ಗುಳೇದಗುಡ್ಡ ಅವರು ಭಾವಚಿತ್ರಕ್ಕೆ ಪುಷ್ಪಾಚನೆ ಮಾಡುವ ಮೂಲಕ ಗೀತನಮನ ಹಾಗೂ ನುಡಿನಮನ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯತ ಅಧ್ಯಕ್ಷ ಬಸವರಾಜ ಕುಂಬಳಾವತಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪ್ರಕಾಶ ಅವರು ಒಳ್ಳೆಯ ಗುಣ ಹಾಗೂ ಮೃದು ಸ್ವಭಾವದವರಾಗಿದ್ದರು. ಮತ್ತು ಎಲ್ಲಾ ಜನರನ್ನು ಹತ್ತಿರದಿಂದ ಕಾಣುತ್ತಿದ್ದರು, ಅಂತ ವ್ಯಕ್ತಿಯನ್ನು ನಾನು ಕಳೆದುಕೊಂಡಿದ್ದು ದುಃಖದ ಸಂಗತಿ ಎಂದು ಹೇಳಿದರು.
ಪ್ರಕಾಶ ಅವರು ಕಮತಗಿಯಲ್ಲಿ ಒಂದು ಶಕ್ತಿಯಾಗಿ ಬೆಳೆದಿದ್ದರು. ಅವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು, ಅವರ ಆದರ್ಶಗಳ ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಲಿ ಎಂದರು.
ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ರಮೇಶ ಕಮತಗಿ ಮಾತನಾಡಿ, ಪ್ರಕಾಶರವರು ಆತ್ಮೀಯ ಸ್ನೇಹಿತರಾಗಿ ನಮಗೆಲ್ಲ ಮಾರ್ಗದರ್ಶನ ನೀಡುತ್ತಿದ್ದರು. ಮೃದು ಮನಸ್ಸಿನವರು ಅವರು ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅಪಾರವಾದದ್ದು ಅಷ್ಟೇ ಅಲ್ಲದೆ ಅವರ ಅಗಲಿಕೆ ನಮ್ಮೂರಿಗೆ ತುಂಬಲಾರದ ನಷ್ಟವಾಗಿದೆ ಅವರಿಗೆ ಭಗವಂತ ಶಾಂತಿ ನೀಡಲಿ ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಮ್ಮ ಮಾತುಗಳ ಮೂಲಕ ನುಡಿ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಲ್ಲೇಶ ಬಿಜಾಪುರ, ಕಲ್ಮೇಶ ಧಾರವಾಡ, ಡಾ.ಎನ್.ಆರ್ ದಿಡ್ಡಿಮಣಿ, ಮುತ್ತು ಬಳ್ಳಾ, ಬಸವರಾಜ ಹುಲ್ಲೂರ ತಮ್ಮ ನುಡಿಗಳೊಂದಿಗೆ ನುಡಿ ನಮನ ಸಲ್ಲಿಸಿದರು.
ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ಮಠದ ಭಕ್ತ ಅತ್ಯಂತ ಪ್ರೀತಿಯ ಸ್ನೇಹಜೀವಿ ಪ್ರಕಾಶ ಅಗಲಿದ್ದು ಮನಸ್ಸಿಗೆ ಬಹಳ ಬೇಸರವನ್ನುಂಟು ಮಾಡಿದೆ ಅವರ ಒಳ್ಳೇಯ ಕೆಲಸಗಳನ್ನು ನೆನೆಯೋಣ ಯುವಕರಿಗೆ ಮಾದರಿಯಾಗಿ ಕಣ್ಮರೆಯಾದವನಿಗೆ ಎಲ್ಲರೂ ಶಾಂತಿ ಕೊರೋಣ ಎಂದು ಎರಡು ನಿಮಿಷ ಎದ್ದುನಿಂತು ಆತ್ಮಕ್ಕೆ ಶಾಂತಿ ಕೊರಲು ಹೇಳಿ ಆಶೀರ್ವಚನದ ಮೂಲಕ ನುಡಿ ನಮನ ಸಲ್ಲಿಸಿದರು.
ಶಂಕರ ಮುಂದಿನಮನಿ ಹಾಗೂ ಚಿದಾನಂದ ಕಾಟವಾರವರ ಜ್ಞಾನಸಿಂಧೂ ಕಲಾ ತಂಡ, ಗುಳೇದಗುಡ್ಡ ಹಾಗೂ ಉಮಾ ಕನಕೇರಿಯವರ ಶ್ರೀ ಪಂಡಿತ ಪುಟ್ಟರಾಜ ಗವಾಗಳ ಪಾಠಶಾಲೆ, ಕಮತಗಿ ತಂಡದಿಂದ ಗೀತ ನಮನ ಸಲ್ಲಿಸಿದರು.

