‘ಭಾರತೀಯ ಅಂಚೆ ಸೇವೆ’ ಕುರಿತು ಕಾರ್ಯಾಗಾರ

Must Read

ಮುನವಳ್ಳಿ : ಸ್ಥಳೀಯ ಎಂ ಎಲ್ ಇ ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ‘ಭಾರತೀಯ ಅಂಚೆ ಸೇವೆ’ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುನವಳ್ಳಿ ಯ ಪೋಸ್ಟ್ ಆಫೀಸ್ ನ ಹೆಡ್ ಪೋಸ್ಟ್ಮಾ ಸ್ಟರ್ ರಾಜು ನಡುವಿನಮನಿ ಮಾತನಾಡುತ್ತಾ, ಅಂಚೆ ಕಛೇರಿಯ ಪ್ರಮುಖ ಕಾರ್ಯ ಯೋಜನೆ ಗಳ ಮಾಹಿತಿ ನೀಡುತ್ತಾ, ಪೋಸ್ಟ್ ಕಾರ್ಡ್, ಅಂತರ್ ದೇಸಿ ಪತ್ರ, ಸ್ಟ್ಯಾಂಪ್, ರಜಿಸ್ಟರ್ ಪತ್ರ ಕಳಿಸುವ ವಿಧಾನ, ಹಳ್ಳಿ ಗಾಡುಗಳಲ್ಲಿ ಪೋಸ್ಟಲ್ ಬ್ಯಾಂಕಿಗ ವ್ಯವಸ್ಥೆ, ಮನಿ ಆರ್ಡರ್ ಹೀಗೆ ಅನೇಕ ವಿವಿಧ ಯೋಜನೆ ಕುರಿತು ಮಾಹಿತಿ ನೀಡಿದರು.

ಸಂಸ್ಥೆಯ ಅಧ್ಯಕ್ಷ ಉಮೇಶ ಬಾಳಿ ಮಾತನಾಡಿ, ಅಂಚೆ ಪೆಟ್ಟಿಗೆಯ ಕೆಂಪು ಬಣ್ಣ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಸ್ವತಂತ್ರ ಹೋರಾಟ ದ ಸಂದರ್ಭ ದಲ್ಲಿ ಅಂಚೆಯ ಮಹತ್ವ ತಿಳಿಸಿದರು.

ಮುಖ್ಯ ಶಿಕ್ಷಕ ಎಚ್ ಕೆ ಯಡೊಳ್ಳಿ ಭಾಗವಹಿಸಿದ್ದರು. ಆರ್ ಜಿ ಮಲಾಪುರಮಠ ನಿರೂಪಿಸಿ ವಂದಿಸಿದರು. ಎ ವಿ ನರಗುಂದ, ನಿರ್ಮಲಾ ಗದ್ವಲ, ಕಿರಣ್ ನಾಯ್ಕರ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group