ಹುಬ್ಬಳ್ಳಿ : ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ, ಡೋಣಿ-ಗದಗ, ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ, ಬೆಂಗಳೂರು, ಆಯುಷ ಇಲಾಖೆ, ದಾಕ್ಷಾಯಿಣಿ. ಬಿ. ಜಾಬಶೆಟ್ಟಿ ಫೌಂಡೇಶನ್, ರಾಮದುರ್ಗ, ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ, ಹುಬ್ಬಳ್ಳಿ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ ಗದಗ, ಸಂಜೀವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಹುಬ್ಬಳ್ಳಿ ಹಾಗೂ ಕೆ.ಎಲ್.ಇ. ಕಾಲೇಜ್ ಆಫ್ ಫಾರ್ಮಸಿ ಹುಬ್ಬಳ್ಳಿ ಯವರ ಸಹಯೋಗದಲ್ಲಿ ‘ಔಷಧೀಯ ಸಸ್ಯಗಳ ಜೀವ ವೈವಿಧ್ಯತೆ, ಸಂರಕ್ಷಣೆ ಮತ್ತು ಕೃಷಿ ಹಾಗೂ ಆರೋಗ್ಯ ರಕ್ಷಣೆ’ ಕುರಿತು ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ದಿನಾಂಕ 8 ಹಾಗೂ 9ನೇ ಜೂನ್, 2024 ರಂದು ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಬಾಯೋಟೆಕ್ನಾಲಜಿ ಸಭಾಗೃಹದಲ್ಲಿ ಏರ್ಪಡಿಸಲಾಗಿದೆಯೆಂದು ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ, ಡೋಣಿ-ಗದಗದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಗುರುವಾರ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.
ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ, ಡೋಣಿ-ಗದಗರವರು ಸಾನ್ನಿಧ್ಯ ವಹಿಸಲಿರುವರು, ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಡಾ. ಶ್ರೀನಿವಾಸುಲು, ಆಯುಕ್ತರು ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ, ಡಾ. ಎಸ್. ವೆಂಕಟೇಶನ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ, ಡಾ. ಜಗನ್ನಾಥರಾವ್ ಆರ್. ಪ್ರಾಧ್ಯಾಪಕರು, ಟ್ರಾನ್ಸ್-ಡಿಸಿಪ್ಲಿನರಿ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಹಿರಿಯ ಸಂಪನ್ಮೂಲ ವ್ಯಕ್ತಿ, ಭಾರತೀಯ ಗುಣಾತ್ಮಕ ಪರಿಷತ್ತು ಹೊಸದಿಲ್ಲಿ, ಗುರುನಾಥಗೌಡ ಓದುಗೌಡರ, ಪ್ರಗತಿಪರ ರೈತರು, ಡಾ. ಎಸ್.ವಿ. ನಾಡಗೌಡರ ಕುಲಸಚಿವರು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ ಗದಗ, ಡಾ. ಶ್ರೀನಿವಾಸ ಬನ್ನಿಗೋಳ, ಮುಖ್ಯ ಆಡಳಿತಾಧಿಕಾರಿ, ಸಂಜೀವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಹುಬ್ಬಳ್ಳಿ ಹಾಗೂ ಕೆ. ರಾಮದಾಸ ಅಧ್ಯಕ್ಷರು, ಕರ್ನಾಟಕ ಆಯುರ್ವೇದ ಔಷಧೀ ತಯಾರಕರ ಸಂಘ, ಬೆಂಗಳೂರು ರವರು ಭಾಗವಹಿಸಲಿದ್ದಾರೆಂದು ಪೂಜ್ಯರು ವಿವರಿಸಿದರು.
“ಔಷಧೀಯ ಸಸ್ಯಗಳ ಬೆಳೆಗಾರರು ಮತ್ತು ಖರೀದಿದಾರರು ಎದುರಿಸುತ್ತಿರುವ ಸವಾಲುಗಳು: ಒಂದು ಅವಲೋಕನ”, “ಕರ್ನಾಟಕ ಹಾಗೂ ಕಪ್ಪತಗುಡ್ಡಕ್ಕೆ ಸಂಬಂಧಿಸಿದಂತೆ ಔಷಧೀಯ ಸಸ್ಯಗಳ ಮೌಲ್ಯಮಾಪನ ಮತ್ತು ಸಂಪನ್ಮೂಲ ನಕ್ಷೀಕರಣ”, ಔಷಧೀಯ ಸಸ್ಯಗಳ ವಲಯದ ಅವಕಾಶಗಳು ಮತ್ತು ಕಾರ್ಯಕ್ರಮಗಳು”, “ಔಷಧೀಯ ಸಸ್ಯಗಳ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ಅನ್ವಯಿಕೆಗಳು”, ಔಷಧೀಯ ಸಸ್ಯಗಳ ಬೆಳೆಗಾರರು ಮತ್ತು ಖರೀದಿದಾರರ ನೇರ ಸಂವಾದ”, ಔಷಧೀಯ ಸಸ್ಯಗಳ ಗುಣಪಡಿಸುವ ಮತ್ತು ತಡೆಗಟ್ಟುವ ಗುಣಲಕ್ಷಣಗಳು”, “ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಔಷಧೀಯ ಸಸ್ಯಗಳ ಲ್ಯಾಂಡ್-ಸ್ಕೇಪಿಂಗ್ ಮತ್ತು ಇಕೋ-ಸ್ಕೇಪಿಂಗ್”, “ಸೂತ್ರಿಕರಣ, ಸಂಯೋಜನೆಗಳು, ಉತ್ಪಾದನೆ ಪರವಾನಿಗೆ ಮತ್ತು ರಫ್ತುಗಳ ನಿಯಂತ್ರಕ ಅಂಶಗಳು”, ಔಷಧೀಯ ಸಸ್ಯಗಳ ಮೌಲ್ಯವರ್ಧನೆ”, ಔಷಧೀಯ ಸಸ್ಯಗಳ ಮಾರುಕಟ್ಟೆ’, “ವಿವಿಧ ರೋಗ ಪರಿಸ್ಥಿತಿಗಳಿಗೆ ಔಷಧೀ ಸಸ್ಯಗಳ ಆಯ್ಕೆ”, ಮುಂತಾದ ಆಧಿವೇಶನಗಳಲ್ಲಿ ತಜ್ಞರು ಉಪನ್ಯಾಸ ನೀಡುವರು, ಜೊತೆಗೆ ಔಷಧೀಯ ಸಸ್ಯಗಳ ಪ್ರದರ್ಶನಕ್ಕೆ ಮಾರ್ಗದರ್ಶೀಯ ಭೇಟಿಯನ್ನು ಆಯೋಜಿಸಲಾಗಿದೆ. ಸಂಶೋಧಕರಿಗಾಗಿ ಹಾಗೂ ವಿದ್ಯಾರ್ಥಿಗಳಿಗಾಗಿ ಪೋಷ್ಟರ್ ಪ್ರಜೆಂಟೇಷನ್ ಆಯೋಜಿಸಲಾಗಿದೆ.
ದಿನಾಂಕ 9ನೇ ಜೂನ್ 2024 ರ ಸಂಜೆ 4 ಕ್ಕೆ ಏರ್ಪಡಿಸಲಾಗಿರುವ ಸಮಾರೋಪ ಸಮಾರಂಭದಲ್ಲಿ ಎರಡು ದಿನಗಳ ಕಾರ್ಯಾಗಾರದ ಸಂಕ್ಷಿಪ್ತ ವರದಿ, ಪ್ರಮಾಣಪತ್ರ ವಿತರಣೆ ಹಾಗೂ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಔಷಧೀಯ ಸಸ್ಯಗಳ ರೈತರು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಹಿರಿಯ ಅಧಿಕಾರಿಗಳು, ಆಯುರ್ವೇದ ಮೆಡಿಕಲ್ ಕಾಲೇಜುಗಳ ಉಪನ್ಯಾಸಕರುಗಳು, ಸಂಶೋಧಕರು, ವಿದ್ಯಾರ್ಥಿಗಳು, ಆಯುರ್ವೆದ ಹಾಗೂ ಪಾರಂಪರಿಕ ವೈದ್ಯರು ಹಾಗೂ ಆಸಕ್ತ ಸಾರ್ವಜನಿಕರು ಭಾಗವಹಿಸಲಿದ್ದಾರೆ, ಈಗಾಗಲೇ ನಾಲ್ಕು ನೂರಕ್ಕೂ ಆಧಿಕ ಸಂಖ್ಯೆಯಲ್ಲಿ ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆಂದು ಪ್ರಧಾನ ಸಂಚಾಲಕ ಭಾಲಚಂದ್ರ ಜಾಬಶೆಟ್ಟಿ ತಿಳಿಸಿದರು. ಎರಡು ದಿನಗಳ ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಾಗಾರದ ಸ್ಮರಣ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಗುತ್ತದೆಯೆಂದರು.
ಸಂಘಟನಾ ಕಾರ್ಯದರ್ಶಿ ಡಾ ಚರಂತಯ್ಯ ಹಿರೇಮಠ, ಪ್ರೊ. ಮನೋಜ ಚಿತವಾಡಗಿ, ಪ್ರೊ. ರವೀಂದ್ರ ಕರಡಿ, ಡಾ. ಬಿ.ಡಿ.ಹುದ್ದಾರ, ಡಾ. ಆರ್.ಏಫ್.ಇಂಚಲ, ಡಾ. ಸೋಮಶೇಖರ ಹುದ್ದಾರ, ಪ್ರಕಾಶ ಸಿದ್ದನಗೌಡರ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಭಾಲಚಂದ್ರ ಜಾಬಶೆಟ್ಟಿ
ಪ್ರಧಾನ ಸಂಚಾಲಕರು
9147888365