spot_img
spot_img

ಜಲ ಜೀವನ್ ಮಿಷನ್ ಕಾರ್ಯಾಕ್ರಮದ ಕಾರ್ಯಾಗಾರ

Must Read

- Advertisement -

ಬೆಳಗಾವಿ – ಗ್ರಾಮೀಣ ಕುಡಿಯು ನೀರು ನೈರ್ಮಲ್ಯ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ, ಗ್ರಾಮೀಣ ಕುಡಿಯು ನೀರು ನಿರ್ಮಲ ಇಲಾಖೆ ಬೆಳಗಾವಿ ವಿಭಾಗ, ಇವರ ಆಶ್ರಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ವಿವಿಧ ಅನುಷ್ಠಾನ ಹಂತದಲ್ಲಿ ನ ತಾಂತ್ರಿಕ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರಿಗೆ ಎರಡು ದಿನದ ಕಾರ್ಯಾಗಾರ( 22-02-2022 ರಿಂದ 23-02-2022- ಹೋಟೆಲ್ ಲಾರ್ಡ್ಸ್ ಬೆಳಗಾವಿ ( ಕೊಲ್ಲಾಪುರ ಸರ್ಕಲ್ ) ಜರುಗಿತು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಸಿಜಿ ಹುಲಿಮನಿ ಮಾನ್ಯ ಅಧೀಕ್ಷಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ ಬೆಳಗಾವಿ, ಆಗಮಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಜಲ ಜೀವನ ಮಿಷನ್ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಪ್ರತಿ ದಿನ ಪ್ರತಿ ವ್ಯಕ್ತಿಗೆ 55 ಲೀಟರ್ ನೀರು, ಪ್ರತಿ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ನಲ್ಲಿ ಒದಗಿಸುವುದು ಯೋಜನೆಯ ಮಹತ್ವದ ಉದ್ದೇಶವಾಗಿದ್ದು,, ಯೋಜನೆಯಲ್ಲಿ ತಾಂತ್ರಿಕ ಸಿಬ್ಬಂದಿಗಳ ಪಾತ್ರ ಮಹತ್ವವಾಗಿದ್ದು ತರಬೇತಿಯಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದು ಯೋಜನೆ ಅನುಷ್ಠಾನಗೊಳಿಸಲು ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.

- Advertisement -

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ ಮಸಗುಪ್ಪಿ ಮಾನ್ಯ ನಿವೃತ್ತ ಅಧೀಕ್ಷಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಬೆಂಗಳೂರು ಮಾತನಾಡಿ, ಸರ್ಕಾರದ ಈ ಮಹತ್ತರವಾದ ಯೋಜನೆಯನ್ನು ಅನುಷ್ಠಾನಗೊಳಿಸಲು ನಮ್ಮಲ್ಲಿ ಸಂಪನ್ಮೂಲಗಳ ಸದ್ಬಳಕೆ ಆಗಬೇಕು ಜೊತೆಗೆ ಮೌಲ್ಯಾಧಾರಿತ ಕೆಲಸದ,ಕೆಲಸದ ಬದ್ಧತೆ ಅರ್ಥಪೂರ್ಣ ಸಮುದಾಯ ಭಾಗವಹಿಸುವಿಕೆ, ಉತ್ತಮ ಉತ್ತರ ದಾಯಿತ್ವ ದಿಂದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬಹುದಾಗಿದೆ ಎಂದು ಸಲಹೆ ನೀಡಿದರು.

ಕಾರ್ಯ ನಿರ್ವಾಹಕ ಅಭಿಯಂತರ ಶಿವಾನಂದ (ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಬೆಳಗಾವಿ) ಇವರು ಮಾತನಾಡಿ, ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳು ಯೋಜನೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದು, ತಿಳಿಯದೇ ಇರುವ ವಿಷಯದ ಬಗ್ಗೆ ಚರ್ಚೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕು, ಎರಡು ದಿನ ಕಾರ್ಯಾಗಾರದಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಿ ಎಂದು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸಚಿನ್ ಉಸೂಳಕರ್, ಆದಿತ್ಯ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಬೆಳಗಾವಿ, ಪುರಂದರಿ ನಿವೃತ್ತ ಹಿರಿಯ ಭೂ ವಿಜ್ಞಾನಿಗಳು ಉಪಸ್ಥಿತರಿದ್ದರು, ಎರಡು ದಿನ ಕಾರ್ಯಾಗಾರ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಬೆಳಗಾವಿ ಬೈಲಹೊಂಗಲ ಖಾನಾಪುರ್ ಸೌದತ್ತಿ ರಾಮದುರ್ಗ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಜಲ ಜೀವನ ಮಿಷನ್ ಯೋಜನೆಯ ಗುತ್ತಿಗೆದಾರರಿಗೆ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಸ್ವಾಗತವನ್ನು ಕಿರಣ್, ಕಿರಿಯ ಅಭಿಯಂತರರು ನೆರವೇರಿಸಿದರು, ಮಲ್ಲೇಶ್ ಕುಂದರಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group