ಬೈಲಹೊಂಗಲ : ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕಾಡಾ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಾ. ವಿಶ್ವನಾಥ ಆಯ್. ಪಾಟೀಲ ರವರ ನೇತೃತ್ವದ ಬಿಜೆಪಿ ಯುವಮೋರ್ಚಾ ತಂಡ ಹಾಗೂ ಕಾರ್ಯಕರ್ತರು ವಿದ್ಯಾ ನಗರದ ನವಗ್ರಹ ವಾಟಿಕಾ ಉದ್ಯಾನವನದಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಡಾ.ವಿಶ್ವನಾಥ ಪಾಟೀಲ ಮಾತನಾಡಿ “ಕಾಡು ಬೆಳಸಿ ನಾಡು ಉಳಿಸಿ” ಮರಗಳನ್ನು ಬೆಳೆಸುವುದರಲ್ಲಿ ವಿಶ್ವ ಪ್ರಸಿದ್ದಿ ಪಡೆದ ಸಾಲು ಮರದ ತಿಮ್ಮಕ್ಕರ ಸಾಧನೆಯನ್ನು ನೆನೆದರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ಧಾರಿ ಹೆಚ್ಹೆಚ್ಚು ಗಿಡ ಮರಗಳನ್ನು ಬೆಳೆಸುವುದರ ಮೂಲಕ ಅದನ್ನು ಸಮರ್ಪಕವಾಗಿ ನಿರ್ವಹಿಸೋಣ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಯುವಮೋರ್ಚಾ ಅಧ್ಯಕ್ಷ ಬಸವರಾಜ ನೇಸರಗಿ, ಬೈಲಹೊಂಗಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಆದರ್ಶ ಗುಂಡಗವಿ, ನಿಕಟಪೂರ್ವ ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ವಿಜಯಕುಮಾರ ಪತ್ತಾರ, ಆನಂದ ಮೂಗಿ, ವಕೀಲರಾದ ಚನ್ನಬಸಪ್ಪ ಈಟಿ, ಸುನೀಲ ಈಟಿ, ಅರುಣ ಬೆನಚಮರಡಿ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.