spot_img
spot_img

ವಿಶ್ವ ಪರಿಸರ ದಿನ ಆಚರಣೆ

Must Read

- Advertisement -

ಬೈಲಹೊಂಗಲ – ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ. ಪ್ರತಿಯೊಬ್ಬರೂ ಪರಿಸರ ಕಾಳಜಿ ಇಟ್ಟುಕೊಂಡು ತಮ್ಮ ಸುತ್ತಲೂ ಅವಕಾಶವಿರುವ ಕಡೆ ಸಸಿ ನೆಡುವ ಮೂಲಕ ಹಸಿರು ಬೆಳೆಸುವ ಕೆಲಸ ಮಾಡಬೇಕು. ಆ ಮೂಲಕ ನಮ್ಮ ಸುತ್ತಲ ಪರಿಸರದಲ್ಲಿ ಪ್ರಾಕೃತಿಕವಾಗಿ ಶುದ್ದ ಆಮ್ಲಜನಕ ಉತ್ಪಾದನೆ ಮಾಡಲು ಮುಂದಾಗಬೇಕು ಎಂದು ಧರ್ಮದರ್ಶಿ ಡಾ.ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಹೇಳಿದರು.

ಅವರು ರವಿವಾರ ಪಟ್ಟಣದ ಮುರಗೋಡ ರಸ್ತೆಯ ಶ್ರೀ ಮಾತಾ ದುರ್ಗಾಮಾತಾ ಪರಮೇಶ್ವರಿ ದೇವಸ್ಥಾನದ ಹತ್ತಿರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಪುರೋಹಿತರೆಲ್ಲರೂ ಸೇರಿ ಸಸಿಗೆ ನೀರೆರೆದು ಮಾತನಾಡಿ, ಕರೋನಾ ಇದ್ದರೂ ಕೂಡ ವಿಶ್ವ ಪರಿಸರ ದಿನವಾಗಿ ಇಂದು ನಾವು ಸ್ವಸ್ಥ ಪರಿಸರಕ್ಕಾಗಿ ಈ ಮಹತ್ವದ ಯೋಜನೆಗೆ ಚಾಲನೆ ನೀಡುತ್ತಿದ್ದೇವೆ. ಸಾರ್ವಜನಿಕರು ಕೂಡ ಇಂತಹ ಒಳ್ಳೆಯ ಕೆಲಸಕ್ಕೆ ಕೈಜೋಡಿಸಿ ಹಸಿರು ಸಂರಕ್ಷಣೆಗೆ ಮುಂದಾಗಬೇಕು.

ಮನೆಗೊಂದು ಮರ,ಊರಿಗೊಂದು ವನ ಇರಬೇಕು. ಪ್ರತಿ ಮನೆಗಳಲ್ಲೂ, ಹೂ, ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಬೇಕು. ರಸ್ತೆ ಬದಿಯಲ್ಲಿರುವ ಗಿಡಗಳಿಗೆ ನೀರೆರೆದು ನಮ್ಮ ಪರಿಸರವನ್ನು ಕಾಪಾಡುವ ಕಾಯಕದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

- Advertisement -

ಶಾಂತವೀರಯ್ಯ ಕಲಕೋಟಿ, ಸಿದ್ದಬಸಯ್ಯ ಶಾಸ್ರ್ತಿ, ಬಸಯ್ಯ ಶಾಸ್ರ್ತಿ, ಗಣೇಶ ಶಾಸ್ರ್ತಿ, ಶ್ರೀಕಾಂತಯ್ಯ ಹಿರೇಮಠ, ಬಸಲಿಂಗಯ್ಯ ಸುರಗಿಮಠ, ಚನ್ನಬಸಯ್ಯ ಹಿರೇಮಠ, ರುದ್ರಯ್ಯ ಹಿರೇಮಠ ಸೇರಿದಂತೆ ಅನೇಕ ಪುರೋಹಿತರು ಇದ್ದರು.

- Advertisement -
- Advertisement -

Latest News

ಕನ್ನಡದ ರಾಜಾ ಕುಳ್ಳ ಇನ್ನಿಲ್ಲ

ಕನ್ನಡ ಚಿತ್ರರಂಗದ ರಾಜಾಕುಳ್ಳ ಎಂದೇ ಪ್ರಸಿದ್ಧರಾಗಿದ್ದ ಹಾಸ್ಯಚಿತ್ರ ನಟ, ನಿರ್ಮಾಪಕ ದ್ವಾರಕೀಶ ನಿಧನರಾಗಿದ್ದಾರೆ. ಚಿತ್ರರಂಗದ ನಾಯಕ ವಿಷ್ಣುವರ್ಧನ ಅವರ ಆಪ್ತಮಿತ್ರನಾಗಿದ್ದ ದ್ವಾರಕೀಶ ನೂರಾರು ವಿಶಿಷ್ಟ ಚಿತ್ರಗಳಲ್ಲಿ ನಟಿಸಿ,...
- Advertisement -

More Articles Like This

- Advertisement -
close
error: Content is protected !!
Join WhatsApp Group