ಮಸ್ಕತ್ ( ಓಮನ್)- ಸುಲ್ತಾನೇಟ್ ಆಫ್ ಓಮನ್ ದೇಶದ ರಾಜಧಾನಿ ಮಸ್ಕತ್ ನ ಅಲ್ ಫಲಾಝ್ ಸಭಾಂಗಣದಲ್ಲಿ ದಿ. ೧೮ ಹಾಗೂ ೧೯ ರಂದು ಇಲ್ಲಿನ ಕನ್ನಡ ಸಂಘದ ಸಹಯೋಗದೊಂದಿಗೆ ೧೬ ನೇಯ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ.
ಸಮ್ಮೇಳನದ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ ವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ, ನೀರಾವರಿ ಸಚಿವ ಗೋವಿಂದ ಕಾರಜೋಳ ಹಾಗೂ ಮಾಜಿ ಉಪ ಸಭಾಪತಿ ಆರತಿ ಕೃಷ್ಣ ಅವರು ಭಾಗವಹಿಸಲಿದ್ದಾರೆ.
ಹಾಗೆಯೇ ಖ್ಯಾತ ಚಲನಚಿತ್ರ ನಟ ಉಪೇಂದ್ರ ಸೇರಿದಂತೆ ಹಲವು ಕಲಾವಿದರು, ಹಾಸ್ಯ ಕಲಾವಿದರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.